Tuesday, 7th January 2025

Maoists Encounter :ಬೆಳ್ಳಂಬೆಳಗ್ಗೆ ಎನ್‌ಕೌಂಟರ್‌- 4 ನಕ್ಸಲರು ಫಿನೀಶ್‌, ಓರ್ವ ಪೊಲೀಸ್‌ ಹುತಾತ್ಮ

Maoists encounter

ರಾಯ್ಪು‌ರ: ಛತ್ತೀಸ್‌ಗಢದ ಬಸ್ತಾರ್ (Chhattisgarh) ಪ್ರದೇಶದಲ್ಲಿ ಭಾನುವಾರ ಮುಂಜಾನೆ ಮಾವೋವಾದಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ನಾಲ್ವರು ನಕ್ಸಲರು(Maoists encounter) ಹತರಾಗಿದ್ದಾರೆ. ಇನ್ನು ಘಟನೆಯಲ್ಲಿ ಒಬ್ಬ ಪೊಲೀಸ್ ಹುತಾತ್ಮರಾಗಿದ್ದಾರೆ.

ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಭಾಗದ ದಕ್ಷಿಣ ಅಬುಜ್‌ಮದ್‌ನ ದಟ್ಟ ಅರಣ್ಯದಲ್ಲಿ ಮಾವೋವಾದಿಗಳು ಅವಿತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶನಿವಾರ ಸಂಜೆ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ನಕ್ಸಲರು ಭದ್ರತಾ ಪಡೆ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಅದಕ್ಕೆ ಪೊಲೀಸರು ಪ್ರತಿದಾಳಿ ನಡೆಸಿ ನಾಲ್ವರು ನಕ್ಸಲರನ್ನು ಮಟ್ಟಹಾಕಿದ್ದಾರೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ತಿಳಿಸಿದ್ದಾರೆ.

ಗುಂಡಿನ ಚಕಮಕಿಯ ನಂತರ, ಭದ್ರತಾ ಪಡೆಗಳು ಸ್ಥಳದಿಂದ AK-47 ರೈಫಲ್ ಮತ್ತು ಸೆಲ್ಫ್-ಲೋಡಿಂಗ್ ರೈಫಲ್ (SLR) ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಕಾರ್ಯಚರಣೆಯಲ್ಲಿ ಜಿಲ್ಲಾ ಮೀಸಲು ಗಾರ್ಡ್‌ನ (ಡಿಆರ್‌ಜಿ) ಹೆಡ್ ಕಾನ್‌ಸ್ಟೆಬಲ್ ಸನ್ನು ಕರಮ್ ಹುತಾತ್ಮರಾಗಿದ್ದಾರೆ.

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾವೋವಾದಿಗುಂಪುಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅದರಲ್ಲಿ ಅವರು ಶರಣಾಗತ ಮಾವೋವಾದಿಗಳ ಗುಂಪಿಗೆ ನರೇಂದ್ರ ಮೋದಿ ಅವರ ಸರ್ಕಾರ ಎಲ್ಲ ರೀತಿಯ ಸಹಾಯವನ್ನು ಮಾಡುತ್ತದೆ ಎಂದು ಭರವಸೆ ನೀಡಿದ್ದರು. ಇತರ ಮಾವೋವಾದಿಗಳನ್ನು ಸಹ ಶರಣಾಗುವಂತೆ ಪ್ರೋತ್ಸಾಹಿಸಲು ಸಹಾಯ ಮಾಡುವಂತೆ ಅವರು ಮನವಿ ಮಾಡಿದ್ದರು.

ಕೊಲ್ಲುವುದು ಮುಂದಿನ ದಾರಿಯಲ್ಲ. ಆಯುಧ ಹಿಡಿದವರನ್ನು ಮುಖ್ಯವಾಹಿನಿಗೆ ತರಬೇಕು. ಆದ್ದರಿಂದ, ನಾನು ಗೃಹ ಸಚಿವ ವಿಜಯ್‌ ಶರ್ಮಾ ಅವರಲ್ಲಿ ವಿನಂತಸಿಕೊಳ್ಳುತ್ತೇನೆ ಎಂದು ಹೇಳಿದ್ದರು.  ನಕ್ಸಲ್ ಪುನರ್ವಸತಿ ನೀತಿಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲಿದ್ದೇವೆ. ಆ ಮೂಲಕ 10 ವರ್ಷಗಳ ಹಿಂದೆ ಶರಣಾದ ನಕ್ಸಲರ ಜೀವನವನ್ನು ಸುಧಾರಿಸಲು ಪ್ರಯತ್ನಿಸುತ್ತೇವೆ ಮತ್ತು ಅವರನ್ನು ಮತ್ತು ಅವರ ಕುಟುಂಬಗಳನ್ನು ಬಲಪಡಿಸಲು ಪ್ರಯತ್ನಿಸುತ್ತೇವೆ ಎಂದು ಅಮಿತ್‌ ಶಾ ಭರವಸೆ ನೀಡಿದ್ದರು.

ಇತ್ತೀಚೆಗೆ ಕರ್ನಾಟಕ ಉಡುಪಿಯಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಎಎನ್​ಎಫ್​ ಪೊಲೀಸರು ಹೆಬ್ರಿ ತಾಲೂಕಿನ ಕಬ್ಬಿನಾಲೆ ಬಳಿ ಎನ್​​ಕೌಂಟರ್​ ಮಾಡಿ ನಕ್ಸಲ್ ಮುಖಂಡ ವಿಕ್ರಂ ಗೌಡನನ್ನು ಹತ್ಯೆ ಮಾಡಿದ್ದರು. 61 ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಈತನನ್ನು ಎನ್‌ಎಫ್‌ಎಫ್‌ ತಂಡ ಹಲವು ವರ್ಷಗಳಿಂದ ಶೋಧಿಸುತ್ತಿದ್ದರು. ದಿನಸಿ ಸಾಮಗ್ರಿ ತರಲು ವ್ಯಕ್ತಿಯೊಬ್ಬರ ಮನೆಗೆ ಬಂದಾಗ ಪೊಲೀಸರು ದಾಳಿ ನಡೆಸಿದ್ದಾರೆ. ನಂತರ ವಿಕ್ರಂ ಗೌಡ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರಿಂದ ಎನ್‌ಕೌಂಟರ್‌ ನಡೆದಿದೆ.

ಈ ಸುದ್ದಿಯನ್ನೂ ಓದಿ : Naxal Encounter: ಟಾಪ್‌ ಕಮಾಂಡರ್‌ ಸೇರಿ 7 ನಕ್ಸಲರು ಎನ್‌ಕೌಂಟರ್‌ಗೆ ಬಲಿ