Friday, 22nd November 2024

ವಿವಾಹದ ವಯಸ್ಸು ಕಾನೂನುಬದ್ಧ ಸಮಾನ: ಅರ್ಜಿ ವಜಾ

ನವದೆಹಲಿ: ಪುರುಷ ಮತ್ತು ಮಹಿಳೆಯ ವಿವಾಹದ ಕಾನೂನುಬದ್ಧ ವಯಸ್ಸನ್ನು ಸಮಾನಗೊಳಿಸಲು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ವಕೀಲೆ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಲು ನಿರಾ ಕರಿಸಿತು. ಪೀಠವು ಈ ರೀತಿಯ ಕಾನೂನನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದೆ.

ಪುರುಷ ಮತ್ತು ಮಹಿಳೆಯರಿಗೆ ಕನಿಷ್ಠ ಮದುವೆಯ ವಯಸ್ಸಿನಲ್ಲಿ ಏಕರೂಪತೆಯನ್ನು ಕೋರಿ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ ಮನವಿ ಯನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು.

ಅರ್ಜಿದಾರರು ಮಹಿಳೆಗೆ 18 ವರ್ಷ, ಪುರುಷನಿಗೆ 21 ವರ್ಷಗಳ ಮಿತಿ ಇದು ತಾರತಮ್ಯವಾಗಿದೆ ಮತ್ತು ವಿಶ್ವಾದ್ಯಂತ 125 ಕ್ಕೂ ಹೆಚ್ಚು ದೇಶಗಳು ಏಕರೂಪದ ವಿವಾಹ ವಯಸ್ಸನ್ನು ಹೊಂದಿವೆ ಎಂದು ಉಲ್ಲೇಖಿಸಿದ್ದರು.