Thursday, 26th December 2024

Masood Azhar : ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್​ಗೆ ಹೃದಯಾಘಾತ

Masood Azhar

ಇಸ್ಲಾಮಾಬಾದ್‌: ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-e-Mohammed) ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ (Masood Azhar) ಹೃದಯಾಘಾತಕ್ಕೆ ಒಳಗಾಗಿದ್ದಾನೆ ಎಂದು ತಿಳಿದು ಬಂದಿದೆ. ಪಾಕಿಸ್ತಾನಕ್ಕೆ (Pakistan) ಚಿಕಿತ್ಸೆ ಪಡೆಯಲು ಅವರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ .

ಹೃದಯಾಘಾತಕ್ಕೆ ಒಳಗಾದಾಗ ಮಸೂದ್ ಅಜರ್ ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯದಲ್ಲಿದ್ದ. ಇದೀಗ ಆತನನ್ನು ಪಾಕಿಸ್ತಾನಕ್ಕೆ ಸ್ಥಳಾಂತರಿಸಲಾಗಿದ್ದು, ಕರಾಚಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಸೂದ್ ಅಜರ್‌ಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರನ್ನು ಇಸ್ಲಾಮಾಬಾದ್‌ನಿಂದ ಕರಾಚಿಗೆ ಕಳುಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಸೂದ್ ಅಜರ್ ಜೈಶ್-ಎ-ಮೊಹಮ್ಮದ್ ಎಂಬ ಭಯೋತ್ಪಾದಕ ಸಂಘಟನೆಯನ್ನು ಸ್ಥಾಪಿಸಿದನು. ಈ ಸಂಘಟನೆ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದೆ. 2008 ರ ಮುಂಬೈ ಭಯೋತ್ಪಾದನಾ ದಾಳಿಯ ಯೋಜನೆಗೆ ಈ ಸಂಘಟನೆಯು ಸಹಾಯ ಮಾಡಿದೆ.

ಯಾರು ಈ ಮೌಲಾನ್ ಮಸೂದ್ ಅಜರ್ ?

ಭಾರತದ IC-814 ವಿಮಾನದ ಅಪಹರಣಕಾರರು ಡಿಸೆಂಬರ್ 1999 ರಲ್ಲಿ ಆತನನ್ನು ಬಿಡುಗಡೆ ಮಾಡಲು ಒತ್ತಾಯಿಸಿದ ನಂತರ ಭಾರತವು ಮಸೂದ್ ಅಜರ್‌ನನ್ನು ಬಿಡುಗಡೆ ಮಾಡಿತ್ತು. ಭಯೋತ್ಪಾದಕ ಮಸೂದ್ ಅಜರ್ ಹುಟ್ಟಿದ್ದು 1968ರಲ್ಲಿ.ಆತನ ಪೂರ್ಣ ಹೆಸರು ಮೌಲಾನ್ ಮಸೂದ್ ಅಜರ್. ಪಾಕಿಸ್ತಾನದಲ್ಲಿ ಕುಳಿತು ಭಾರತದಲ್ಲಿ ಅನೇಕ ಭಯೋತ್ಪಾದಕ ಘಟನೆಗಳನ್ನು ನಡೆಸಿದ್ದಾನೆ. ಈತ ‘ಜೈಶ್-ಎ-ಮೊಹಮ್ಮದ್’ ಎಂಬ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ. ಈ ಭಯೋತ್ಪಾದಕ ಸಂಘಟನೆಯು ಭಾರತ ಮಾತ್ರವಲ್ಲದೆ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ತನ್ನ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದೆ.

ವಿಶ್ವಸಂಸ್ಥೆಯು ಈಗಾಗಲೇ ಈ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಆದರೆ ಎಲ್ಲಾ ನಿರ್ಬಂಧಗಳ ಹೊರತಾಗಿಯೂ, ಈ ಭಯೋತ್ಪಾದಕ ಸಂಘಟನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವರ್ಷಗಳ ಕಾಲ ಪ್ರವರ್ಧಮಾನಕ್ಕೆ ಬರುತ್ತಿತ್ತು. ಮಸೂದ್ ಅಜರ್ ತನ್ನ ಭಾರತ ವಿರೋಧಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾನೆ. ಹಲವು ವರ್ಷಗಳಿಂದ ಮಸೂದ್ ಅಜರ್ ತನ್ನ ದೇಶದಲ್ಲಿ ಇದ್ದಾನೆ ಎಂದು ನಂಬಲು ಪಾಕಿಸ್ತಾನ ನಿರಾಕರಿಸಿತ್ತು. ಆದರೆ ಇತ್ತೀಚೆಗಷ್ಟೇ ಮಸೂದ್ ಅಜರ್‌ನ ಆರೋಗ್ಯ ಹದಗೆಟ್ಟಿದ್ದು, ಆತ ಪಾಕಿಸ್ತಾನದಲ್ಲಿದ್ದಾನೆ ಎಂದು ಪಾಕಿಸ್ತಾನ ಒಪ್ಪಿಕೊಂಡಿತ್ತು.

ಈ ಸುದ್ದಿಯನ್ನೂ ಓದಿ : Terrorist Encounter: ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಸೇನಾ ಕಾರ್ಯಾಚರಣೆ; 5 ಉಗ್ರರು ಉಡೀಸ್‌