ಬಂಧಿತರಿಬ್ಬರನ್ನೂ ಬಾಲಾಪರಾಧ ಮಂಡಳಿಯ ಮುಂದೆ ಹಾಜರುಪಡಿಸ ಲಾಗುತ್ತಿದೆ ಎಂದು ಪಶ್ಚಿಮ ವಲಯದ ಡಿಸಿಪಿ ಜೋಯಲ್ ಡೇವಿಸ್ ತಿಳಿಸಿ ದ್ದಾರೆ.
ಈ ನಾಲ್ವರ ಪೈಕಿ ಪೊಲೀಸರು ಈಗಾಗಲೇ ಸಾದುದ್ದೀನ್ ಮಲಿಕ್ನನ್ನು ಶುಕ್ರವಾರ ಬಂಧಿಸಿದ್ದರು. ಇನ್ನೋರ್ವ ಆರೋಪಿ ಉಮ್ರಾನ್ ಖಾನ್ ಮತ್ತು ಅಪರಾಧದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಅಪ್ರಾಪ್ತ ಬಾಲಕ ಇನ್ನೂ ತಲೆಮರೆಸಿಕೊಂಡಿದ್ದಾನೆ.
ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಡೇವಿಸ್ ತಿಳಿಸಿದ್ದಾರೆ.
ಕಳೆದ ಶನಿವಾರ ಜುಬಲಿ ಹಿಲ್ಸ್ನಲ್ಲಿನ ಪಬ್ಗೆ ಬಾಲಕಿ ಸ್ನೇಹಿತರೊಂದಿಗೆ ತೆರಳಿದ್ದರು. ಆಕೆಯನ್ನು ಮನೆಗೆ ಡ್ರಾಪ್ ಮಾಡಲು ಮುಂದಾದಾಗ ಐವರು ಆರೋಪಿಗಳು ಇನ್ನೋವಾದಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.