Thursday, 12th December 2024

ವಾಟ್ಸ್‌ಆಯಪ್‌’ನಲ್ಲಿ ಅಶ್ಲೀಲ ವಿಡಿಯೊ ಶೇರ್‌: ಶಿಕ್ಷಕ ಬಂಧನ

ಚೆನ್ನೈ: ವಿದ್ಯಾರ್ಥಿಗಳು, ಶಿಕ್ಷಕರನ್ನೊಳಗೊಂಡ ವಾಟ್ಸ್‌ಆಯಪ್‌ ಗ್ರೂಪ್‌ನಲ್ಲಿ ಅಶ್ಲೀಲ ವಿಡಿಯೊ ಶೇರ್ ಮಾಡಿದ ಖಾಸಗಿ ಶಾಲಾ ಶಿಕ್ಷಕರನ್ನು ಚೆನ್ನೈಯಲ್ಲಿ ಬಂಧಿಸಲಾಗಿದೆ.

ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠ ಮಾಡಲು ಬಳಸುವ ವಾಟ್ಸ್‌ಆಯಪ್ ಗ್ರೂಪ್‌ನಲ್ಲಿ ಗಣಿತ ಶಿಕ್ಷಕ ಮತಿವಣ್ಣನ್ ಅಶ್ಲೀಲ ವಿಡಿಯೊಗಳನ್ನು ಅಪ್ಲೋಡ್ ಮಾಡಿದ್ದರು. ಇದನ್ನು ನೋಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಂಗಾಗಿದ್ದು, ಶಾಲೆಯ ಆಡಳಿತಕ್ಕೆ ಮಾಹಿತಿ ನೀಡಿದ್ದರು.

ತಮಗೆ ಮಾಹಿತಿ ಇಲ್ಲವೆಂದೂ ಮದ್ಯಪಾನ ಮಾಡಿದ ಅಮಲಿನಲ್ಲಿ ವಾಟ್ಸ್‌ಆಯಪ್‌ ಗ್ರೂಪ್‌ನಲ್ಲಿ ಶೇರ್ ಮಾಡಿದ್ದೆ ಎಂದೂ ಶಾಲೆಯ ಆಂತರಿಕ ತನಿಖೆ ವೇಳೆ ಮತಿವಣ್ಣನ್ ತಿಳಿಸಿದ್ದಾರೆ.

ಮಂಡಳಿ ನೀಡಿದ ದೂರಿನ ಅನ್ವಯ ಅವರನ್ನು ಬಂಧಿಸಿ ಪೋಕ್ಸೊ ಹಾಗೂ ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಅವರನ್ನು ಚೀಫ್ ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಲಾಗಿದೆ.

ಒಂದು ದಶಕದಿಂದ ಗಣಿತ ಶಿಕ್ಷಕರಾಗಿರುವ ಮತಿವಣ್ಣನ್, ಪತ್ನಿ ಹಾಗೂ ಮಕ್ಕಳ ಜತೆ ಅಂಬತ್ತೂರು ನಗರದಲ್ಲಿ ವಾಸವಾಗಿದ್ದಾರೆ.