Thursday, 12th December 2024

Mens Ethnic Fashion: ಈದ್‌ ಮಿಲಾದ್‌ ಹಬ್ಬದ ಸೀಸನ್‌‌‌‌ನಲ್ಲಿ ಟ್ರೆಂಡಿಯಾಗಿದೆ ಮೆನ್ಸ್ ಎಥ್ನಿಕ್‌ ವೇರ್ಸ್

Mens Ethnic Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈದ್ ಮಿಲಾದ್‌ ಹಬ್ಬಕ್ಕೆ (Eid Milad Festival) ಮೆನ್ಸ್ ಎಥ್ನಿಕ್‌ ಫ್ಯಾಷನ್‌ನಲ್ಲಿ ವೈವಿಧ್ಯಮಯ ಗ್ರ್ಯಾಂಡ್‌ ಹಾಗೂ ಸಿಂಪಲ್‌ ಎಥ್ನಿಕ್‌ವೇರ್‌ಗಳು (Mens Ethnic Fashion) ಕಾಲಿಟ್ಟಿವೆ. ಈ ಹಬ್ಬದ ಸೀಸನ್‌ನಲ್ಲಿ ಯುವಕರಿಗೆ ಇಷ್ಟವಾಗುವಂತಹ ವಿನೂತನ ಪರಿಕಲ್ಪನೆಯ ನಾನಾ ಬಗೆಯ ಎಥ್ನಿಕ್‌ವೇರ್‌ಗಳು (Ethnic Wears) ಮೆನ್ಸ್ ಎಥ್ನಿಕ್‌ ಫ್ಯಾಷನ್‌ನಲ್ಲಿ (Fashion) ಬಿಡುಗಡೆಗೊಂಡು, ಬೇಡಿಕೆ ಹೆಚ್ಚಿಸಿಕೊಂಡಿವೆ. ಮೆನ್ಸ್ ಫ್ಯಾಷನ್‌ನಲ್ಲಿ ಎಥ್ನಿಕ್‌ವೇರ್‌ಗಳು ಇತ್ತೀಚಿನ ಹಬ್ಬದ ಸೀಸನ್‌ನಲ್ಲಿ ಕಲರ್‌ಫುಲ್‌ ಆಗಿರುವುದು ಮಾತ್ರವಲ್ಲ, ಪ್ರಯೋಗಾತ್ಮಕ ಡಿಸೈನ್‌ನಲ್ಲಿ ಬರುತ್ತಿವೆ. ಹಳೆ ಡಿಸೈನ್‌ನರ್‌ವೇರ್‌ಗಳು ಹೊಸ ನವವಿನ್ಯಾಸದಲ್ಲಿ, ಕಲರ್‌ನಲ್ಲಿಯೂ ಬಿಡುಗಡೆಗೊಳ್ಳುತ್ತಿವೆ. ಹಾಗಾಗಿ ಹುಡುಗರು ಧರಿಸಿದಾಗ ಮನಮೋಹಕವಾಗಿ ಕಾಣಿಸುತ್ತವೆ ಎನ್ನುತ್ತಾರೆ ಮೆನ್ಸ್ ಸ್ಪೆಷಲ್‌ ಡಿಸೈನರ್‌ ಮನು ಹಾಗೂ ರಾಜ್‌.

ಪಾಪ್ಯುಲರ್‌ ಆಗಿರುವ ಮೆನ್ಸ್ ಎಥ್ನಿಕ್‌ವೇರ್ಸ್

ಅಸ್ಸೆಮ್ಮಿಟ್ರಿಕಲ್‌ ಇಂಡೋ-ವೆಸ್ಟರ್ನ್ ಕುರ್ತಾ, ಪ್ರಿಂಟೆಡ್‌ ಲಾಂಗ್‌ ಹಾಗೂ ಶಾರ್ಟ್ ಬಂದ್ಗಲಾ, ನಾನಾ ವಿನ್ಯಾಸದ ಡಿಸೈನರ್‌ ಪಟಾನ್‌ ಸೂಟ್‌, ಗೋಲ್ಡನ್‌ ಹಾಗೂ ಪ್ರಿಂಟ್ಸ್ ಹಾಗೂ ಗ್ರ್ಯಾಂಡ್‌ ವರ್ಕ್ ಇರುವ ಸಾಫ್ಟ್ ಶೆರ್ವಾನಿಗಳು ಈ ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

ಈ ಸುದ್ದಿಯನ್ನೂ ಓದಿ | KPSC Group B Exam: ಸೆ.14, 15ರ ಕೆಪಿಎಸ್‌ಸಿ ಗ್ರೂಪ್‌ ಬಿ ಹುದ್ದೆಗಳ ಪರೀಕ್ಷೆ ಮುಂದೂಡಿಕೆ!

ಹೊಸ ಡಿಸೈನ್‌ನಲ್ಲಿ ಎಥ್ನಿಕ್‌ವೇರ್ಸ್

ವಿಶೇಷವೆಂದರೆ, ಈ ಹಬ್ಬದ ಋತುವಿನಲ್ಲಿ, ಈ ಜನರೇ‍ಷನ್‌ನ ಹುಡುಗರಿಗೆ ಪ್ರಿಯವಾಗುವಂತಹ ಕ್ಯಾಶುವಲ್‌ ಶೆರ್ವಾನಿ ಹಾಗೂ ಗ್ರಾಂಡ್‌ ಶೆರ್ವಾನಿಗಳು ಕೂಡ ಹೊಸ ಡಿಸೈನ್‌ನಲ್ಲಿ ಬಂದಿವೆ. ಇನ್ನು ಶೆರ್ವಾನಿ ಬೇಡ ಎನ್ನುವವರಿಗೆ ಸರಳವಾಗಿ, ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಲು ಹೊಂದುವಂತಹ ಡಿಸೈನರ್‌ ಕುರ್ತಾಗಳು ಆಗಮಿಸಿವೆ. ಇವುಗಳ ಮೇಲೆ ಜಾಕೆಟ್‌ನಂತೆ ಧರಿಸುವ ಡಿಸೈನರ್‌ ವೇಸ್ಟ್‌ಕೋಟ್‌ಗಳು ಬಂದಿವೆ.

ಹೊಸ ಬಣ್ಣಗಳಲ್ಲಿ ಪಟಾನ್‌ ಸೂಟ್‌

ಮೊದಲೆಲ್ಲ ಕೇವಲ ಲೈಟ್‌ ವರ್ಣದಲ್ಲಿ ಚಾಲ್ತಿಯಲ್ಲಿದ್ದ ಪಟಾನ್‌ ಸೂಟ್‌ಗಳು ಇದೀಗ ಶಿಮ್ಮರ್‌ ಹಾಗೂ ಸಿಕ್ವಿನ್ಸ್ ಡಿಸೈನ್‌ನಲ್ಲೂ ಬಂದಿದ್ದು ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್ ರಾಕಿ.

ಈ ಸುದ್ದಿಯನ್ನೂ ಓದಿ | Reliance Foundation: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ರಿಲಯನ್ಸ್‌ ಫೌಂಡೇಷನ್‌ನಿಂದ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ

ಈದ್‌ ಎಥ್ನಿಕ್‌ವೇರ್‌ ಪ್ರಿಯರಿಗೆ ಸಿಂಪಲ್‌ ಟಿಪ್ಸ್

ಟ್ರೆಂಡಿ ಡಿಸೈನರ್‌ವೇರ್‌ ಜತೆಗೆ ಆಕ್ಸೆಸರೀಸ್‌ ಮ್ಯಾಚ್‌ ಆಗಬೇಕು.
ಡಿಸೈನರ್‌ವೇರ್‌ಗೆ ಧರಿಸುವ ಫುಟ್‌ವೇರ್‌ ಕೂಡ ಹೊಂದಬೇಕು.
ಧರಿಸುವ ಉಡುಪಿಗೆ ಹೇರ್‌ಸ್ಟೈಲ್‌ ಕೂಡ ಹೊಂದುವುದು ಅಗತ್ಯ.
ಫಂಕಿ ಲುಕ್‌ ಬೇಡ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)