Thursday, 21st November 2024

Message Safety: ಮೆಸೆಜ್‌ನಲ್ಲಿ ಎಂದಿಗೂ ಕಳುಹಿಸಬಾರದ 9 ವಿಷಯಗಳಿವು!

Message Safety

ಇಂದಿನ ಡಿಜಿಟಲ್ ಯುಗದಲ್ಲಿ ಸಂದೇಶ (Message Safety) ಕಳುಹಿಸುವುದು ಸಂವಹನದ (communication) ಅತ್ಯಗತ್ಯ ಭಾಗವಾಗಿದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಇದು ಅನುಕೂಲಕರ ಮಾರ್ಗವಾಗಿದ್ದರೂ ಯಾರಿಗೆ, ಏನು ಕಳುಹಿಸುತ್ತೀರಿ (Message) ಎಂಬುದರ ಕುರಿತು ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗಿದೆ.

ಅನುಚಿತ ಅಥವಾ ಹಾನಿಕಾರಕ ಸಂದೇಶಗಳನ್ನು ಕಳುಹಿಸುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಖ್ಯವಾಗಿ ಹದಿಹರೆಯದವರು (Teenagers) ಎಂದಿಗೂ ಸಂದೇಶದಲ್ಲಿ ಕಳುಹಿಸಬಾರದ 9 ವಿಷಯಗಳಿವೆ. ಈ ಮಾರ್ಗಸೂಚಿಗಳನ್ನು ಪಾಲಿಸಿ ಆನ್‌ಲೈನ್ ನಲ್ಲಿ ಸಂವಹನಗಳನ್ನು ಸಕಾರಾತ್ಮಕ ಮತ್ತು ಗೌರವಯುತವಾಗಿ ನಡೆದುಕೊಳ್ಳುವ ಮೂಲಕ ನೀವು ಅಪಾಯದಿಂದ ಪಾರಾಗಬಹುದು, ಇತರರನ್ನು ಹಾನಿಯಿಂದ ರಕ್ಷಿಸಿಕೊಳ್ಳಬಹುದು. ಹದಿಹರೆಯದವರು ಎಂದಿಗೂ ಸಂದೇಶದಲ್ಲಿ ಕಳುಹಿಸಬಾರದ 9 ವಿಷಯಗಳು ಇಂತಿವೆ.

Message Safety

1. ಸೂಕ್ಷ್ಮ ಮಾಹಿತಿ

ಸಂದೇಶಗಳನ್ನು ಕಳುಹಿಸುವಾಗ ಮನೆಯ ವಿಳಾಸ, ಫೋನ್ ಸಂಖ್ಯೆ ಅಥವಾ ಸಾಮಾಜಿಕ ಭದ್ರತೆ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ. ಈ ಮಾಹಿತಿಯನ್ನು ದುರುದ್ದೇಶಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಗುರುತಿನ ಕಳ್ಳತನ, ಕಿರುಕುಳ ಅಥವಾ ಇತರ ಹಾನಿಕಾರಕ ಉದ್ದೇಶಗಳಿಗೆ ನೀವು ಬಲಿಯಾಗಬಹುದು. ಆನ್ ಲೈನ್ ನಲ್ಲಿ ವೈಯಕ್ತಿಕ ಡೇಟಾವನ್ನು ರಕ್ಷಿಸುವುದು ಮತ್ತು ಆನ್‌ಲೈನ್ ವಂಚನೆಗಳಿಗೆ ಒಳಗಾಗುವುದನ್ನು ತಪ್ಪಿಸುವುದು ಮುಖ್ಯವಾಗಿದೆ.

2. ಸೂಕ್ತವಲ್ಲದ ವಿಷಯ

ಆಕ್ಷೇಪಾರ್ಹ, ದ್ವೇಷಪೂರಿತ ಅಥವಾ ತಾರತಮ್ಯ ಸಂದೇಶಗಳನ್ನು ಕಳುಹಿಸುವುದನ್ನು ತಡೆಯಿರಿ. ಇಂತಹ ವಿಷಯವು ಆನ್‌ಲೈನ್ ಮತ್ತು ನಿಜ ಜೀವನದಲ್ಲಿ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು. ಇತರರನ್ನು ಗೌರವಿಸುವುದು ಮತ್ತು ನಕಾರಾತ್ಮಕತೆ ಅಥವಾ ದ್ವೇಷದ ಮಾತುಗಳನ್ನು ಹರಡುವುದನ್ನು ತಪ್ಪಿಸುವುದು ಮುಖ್ಯ.

3. ಬೆದರಿಕೆ

ಯಾರಿಗೂ ಬೆದರಿಕೆ ಸಂದೇಶಗಳನ್ನು ಕಳುಹಿಸಬೇಡಿ. ಇದು ಕಾನೂನು ತೊಂದರೆಗೆ ಕಾರಣವಾಗಬಹುದು. ಇದರಿಂದ ನಿಮ್ಮ ಖ್ಯಾತಿಯು ಹಾಳಾಗಬಹುದು. ಘರ್ಷಣೆಗಳನ್ನು ಶಾಂತಿಯುತವಾಗಿ ಪರಿಹರಿಸುವುದು ಮುಖ್ಯ.

4. ಖಾಸಗಿ ಫೋಟೊ, ವಿಡಿಯೊ

ಸ್ಪಷ್ಟ ಅನುಮತಿ ಹೊಂದಿರುವ ಫೋಟೋ, ವಿಡಿಯೋಗಳನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ. ಸಮ್ಮತಿಯಿಲ್ಲದೆ ಖಾಸಗಿ ವಿಷಯವನ್ನು ಪೋಸ್ಟ್, ಫೋಟೋ, ವಿಡಿಯೋ ಕಳುಹಿಸುವುದು ಗೌಪ್ಯತೆಯ ಉಲ್ಲಂಘನೆಯಾಗಿದೆ. ಇದು ಕಾನೂನು ಸಮಸ್ಯೆಗಳಿಗೆ ಕಾರಣವಾಗಬಹುದು. ಇತರರ ಗೌಪ್ಯತೆಯನ್ನು ಗೌರವಿಸುವುದು, ಮುಜುಗರದ ಅಥವಾ ಹಾನಿಕಾರಕವಾದ ವಿಷಯವನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು.

Message Safety

5. ಹಣಕಾಸಿನ ಮಾಹಿತಿ

ಕ್ರೆಡಿಟ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳಂತಹ ಹಣಕಾಸಿನ ಮಾಹಿತಿಯನ್ನು ಪಠ್ಯದ ಮೂಲಕ ಹಂಚಿಕೊಳ್ಳುವಾಗ ಜಾಗರೂಕರಾಗಿರಿ. ಹಣಕಾಸಿಗೆ ಸಂಬಂಧಿಸಿ ಯಾವುದೇ ಮಾಹಿತಿಯನ್ನು ಒದಗಿಸುವ ಮೊದಲು ಅದರ ದೃಢೀಕರಣವನ್ನು ಯಾವಾಗಲೂ ಪರಿಶೀಲಿಸಿ.

6. ಪಾಸ್‌ವರ್ಡ್‌ ಅಥವಾ ಪಿನ್‌ಗಳು

ಆನ್‌ಲೈನ್ ಖಾತೆ ಅಥವಾ ಸಾಧನಗಳಿಗೆ ಪಾಸ್‌ವರ್ಡ್‌ ಅಥವಾ ಪಿನ್‌ಗಳನ್ನು ಎಂದಿಗೂ ಕಳುಹಿಸಬೇಡಿ. ಖಾತೆಗಳನ್ನು ಪ್ರವೇಶಿಸಲು ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಲು ಈ ಮಾಹಿತಿಯನ್ನು ಆನ್ ಲೈನ್ ವಂಚಕರು ಬಳಸಬಹುದು. ಪಾಸ್‌ವರ್ಡ್‌ ಮತ್ತು ಪಿನ್‌ಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳುವ ಮೂಲಕ ಆನ್‌ಲೈನ್ ಸುರಕ್ಷತೆಯನ್ನು ರಕ್ಷಿಸುವುದು ಅತ್ಯಗತ್ಯ.

7. ಅನಗತ್ಯ ವಾದ

ಆನ್‌ಲೈನ್‌ನಲ್ಲಿ ಸಂದೇಶವು ವಾದಗಳನ್ನು ಹೆಚ್ಚಿಸಬಹುದು. ನೀವು ಕೋಪಗೊಂಡಿದ್ದರೆ ಅಥವಾ ಅಸಮಾಧಾನಗೊಂಡಿದ್ದರೆ ವೈಯಕ್ತಿಕವಾಗಿ ಅಥವಾ ಕರೆ ಮಾಡುವ ಮೂಲಕ ಚರ್ಚಿಸುವುದು ಉತ್ತಮ. ಇದು ಹೆಚ್ಚು ಪರಿಣಾಮಕಾರಿಯಾಗಿ ಸಂವಹನ ನಡೆಸಲು ಮತ್ತು ತಪ್ಪುಗ್ರಹಿಕೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.

8. ಗೌಪ್ಯ ಮಾಹಿತಿ

ವೈಯಕ್ತಿಕ ರಹಸ್ಯ ಅಥವಾ ಮುಜುಗರದ ವಿವರಗಳಂತಹ ಇತರರ ಬಗ್ಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಇದು ಅವರ ಗೌಪ್ಯತೆಯನ್ನು ಉಲ್ಲಂಘಿಸಬಹುದು ಮತ್ತು ಸಂಬಂಧಗಳನ್ನು ಹಾನಿಗೊಳಿಸಬಹುದು. ಇತರರ ಗೌಪ್ಯತೆಯನ್ನು ಗೌರವಿಸುವುದು ಮತ್ತು ವದಂತಿಗಳನ್ನು ಹರಡುವುದನ್ನು ತಪ್ಪಿಸುವುದು ಮುಖ್ಯವಾಗಿದೆ.

Maths class in website: ವಯಸ್ಕರ ಸೈಟ್‌ʼನಲ್ಲಿ ಮ್ಯಾಥ್ಸ್ ಕ್ಲಾಸ್‌ ವಿಡಿಯೋ: ವರ್ಷಕ್ಕೆ ಎರಡು ಕೋಟಿ ಗಳಿಸುತ್ತಿದ್ದಾನೆ ಈ ಟ್ಯೂಟರ್‌

9. ವಿಪರೀತ ಪಠ್ಯ

ಮಿತಿಮೀರಿದ ಪಠ್ಯಗಳನ್ನು ಕಳುಹಿಸುವುದನ್ನು ಕಿರುಕುಳವೆಂದು ಪರಿಗಣಿಸಬಹುದು. ವಿಶೇಷವಾಗಿ ಸ್ವೀಕರಿಸುವವರು ಸಂದೇಶವನ್ನು ಕಳುಹಿಸುವುದನ್ನು ನಿಲ್ಲಿಸಲು ಕೇಳಿದರೆ ಅವರ ಮಾತನ್ನು ಗೌರವಿಸಿ. ಸಂವಹನದ ವೇಳೆ ಗೌರವಯುವಾಗಿ ನಡೆದುಕೊಳ್ಳುವುದು ಮುಖ್ಯ.