Friday, 20th September 2024

ನಾಳೆಯಿಂದ ಮುಂಬೈನಲ್ಲಿ ಮೆಟ್ರೋ ರೈಲು ಸೇವೆ ಪುನರಾರಂಭ

ಮುಂಬೈ: ಮಹಾರಾಷ್ಟ್ರ ಸರ್ಕಾರ ಅಕ್ಟೋಬರ್ 15ರಿಂದ ಮುಂಬೈಯಲ್ಲಿ ಮೆಟ್ರೋ ರೈಲು ಸೇವೆಗಳನ್ನು ಕಾರ್ಯಾಚರಿಸಲಿದೆ ಎಂದು ಘೋಷಿಸಿದೆ.

ರಾಜ್ಯ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳನ್ನು ಮತ್ತೆ ತೆರೆಯುವುದಾಗಿಯೂ ಘೋಷಿಸಿದೆ. ನಾಳೆಯಿಂದ ವ್ಯಾಪಾರ-ವಹಿ ವಾಟು ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಾಣಿಗಳೂ ಸೇರಿದಂತೆ ಸ್ಥಳೀಯ ಸಾಪ್ತಾಹಿಕ ಬಜಾರ್ ಗಳನ್ನು ಸಹ ಕಂಟೇನ ಮೆಂಟ್ ವಲಯಗಳ ಹೊರಗೆ ಪುನಃ ತೆರೆಯಲು ಅವಕಾಶ ನೀಡಲಾಗುವುದು. ಜನಸಂದಣಿ ಕಡಿಮೆ ಮಾಡುವ ಉದ್ದೇಶದಿಂದ ರಾತ್ರಿ 9 ಗಂಟೆಯವರೆಗೆ ಮಾರುಕಟ್ಟೆ ಮತ್ತು ಅಂಗಡಿಗಳು ಎರಡು ಗಂಟೆ ಕಾಲ ತೆರೆದಿರುತ್ತವೆ.

ವಿವಿಧ ವಿಮಾನ ನಿಲ್ದಾಣಗಳಲ್ಲಿ ಬರುವ ದೇಶೀಯ ಪ್ರಯಾಣಿಕರಿಗೆ ಇಂಕ್ ನಿಂದ ಮುದ್ರೆ ಹಾಕುವುದನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ. ಅದೇ ರೀತಿ, ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆ ಮತ್ತು ಸ್ಟಾಂಪಿಂಗ್ ಅನ್ನು ಸಹ ನಿಲ್ಲಿಸಲಾಗುವುದು.

ಇದರ ಜೊತೆಗೆ ನಗರದ ಲೈಫ್ ಲೈನ್, ಮುಂಬೈ ಲೋಕಲ್ ರೈಲುಗಳು ಕೂಡ ಕೆಲವು ಸೇವೆಗಳಿಗೆ ನಿಧಾನವಾಗಿ ಕಾರ್ಯನಿರ್ವ ಹಿಸುತ್ತಿವೆ. ಪ್ರಸ್ತುತ, ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವ ವರು, ಮುಂಬಯಿಯ ದಾಬಾವಾಲಾಗಳು ಮತ್ತು ವಿದೇಶಿ ರಾಯಭಾರ ಕಚೇರಿಗಳು ಮತ್ತು ಹೈಕಮಿಷನ್ ಗಳ ಸಿಬ್ಬಂದಿಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.

ಇದಲ್ಲದೆ, ಮಹಾರಾಷ್ಟ್ರ ಸರ್ಕಾರ ಅಧಿಸೂಚನೆ ನೀಡಿರುವಂತೆ ಭಾರತೀಯ ರೈಲ್ವೆಯ ಪಶ್ಚಿಮ ರೈಲ್ವೆ ವಲಯವು 194 ಹೆಚ್ಚು ವರಿ ರೈಲುಗಳನ್ನು ನಾಳೆಯಿಂದ ಓಡಿಸಲು ನಿರ್ಧರಿಸಿದೆ. ಸಾಮಾಜಿಕ ಅಂತರಕಾಯ್ದುಕೊಂಡು, ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಜನದಟ್ಟಣೆಯನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.