Thursday, 19th September 2024

ಬಿಸಿಯೂಟ ಬಹಿಷ್ಕರಿಸಿದ ಮೇಲ್ವರ್ಗದ ವಿದ್ಯಾರ್ಥಿಗಳು..ಕಾರಣವಿಷ್ಟೇ ?

ಡೆಹ್ರಾಡೂನ್: ಉತ್ತರಾಖಂಡದ ಚಂಪಾವತ್ ಜಿಲ್ಲೆಯಲ್ಲಿ ದಲಿತ ಮಹಿಳೆ ಸಿದ್ಧಪಡಿಸಿದ ಬಿಸಿಯೂಟವನ್ನು ಹಿಂದೂ ಮೇಲ್ವರ್ಗದ ವಿದ್ಯಾರ್ಥಿಗಳು ಬಹಿಷ್ಕರಿಸಿದ ಘಟನೆ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ವ್ಯಾಪಕವಾಗಿರುವ ಸಾಮಾಜಿಕ ತಾರತಮ್ಯ ಮತ್ತು ಜಾತಿ ಪೂರ್ವಾಗ್ರಹದ ಬಗ್ಗೆ ವಿವಾದ ಹುಟ್ಟು ಹಾಕಿದೆ.

ಜಿಲ್ಲೆಯ ಸುಖೀಧಂಗ್ ಪ್ರದೇಶದ ಜೂಲ್ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆಯ ಭೋಜನ ಮಾತಾ ಹುದ್ದೆಗೆ ದಲಿತ ಮಹಿಳೆ ಸುನೀತಾ ದೇವಿ ಯವರನ್ನು ಇತ್ತೀಚೆಗೆ ನೇಮಕ ಮಾಡಲಾಗಿತ್ತು. ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಊಟ ಸಿದ್ಧಪಡಿಸುವ ಹೊಣೆಯನ್ನು ಇವರಿಗೆ ವಹಿಸ ಲಾಗಿತ್ತು.

ಕರ್ತವ್ಯಕ್ಕೆ ಹಾಜರಾದ ದಿನ ಮೇಲ್ವರ್ಗದ ವಿದ್ಯಾರ್ಥಿಗಳು, ಇವರೇ ಸಿದ್ಧಪಡಿಸಿದ ಬಿಸಿಯೂಟ ಸವಿದಿದ್ದರು. ಆದರೆ ಮರುದಿನದಿಂದ ಊಟ ಬಹಿಷ್ಕರಿಸಿ ದರು ಎಂದು ಸರ್ಕಾರಿ ಜಂಟರ್ ಕಾಲೇಜು ಪ್ರಾಂಶುಪಾಲ ವಿವರಿಸಿ ದರು.

ವಿದ್ಯಾರ್ಥಿಗಳು ಬಿಸಿಯೂಟ ಬಹಿಷ್ಕರಿಸಿದ್ದೇಕೆ ಎನ್ನುವುದು ಕಲ್ಪನೆಗೆ ನಿಲುಕದ್ದು. ಒಟ್ಟು 57 ವಿದ್ಯಾರ್ಥಿಗಳ ಪೈಕಿ ಪರಿಶಿಷ್ಟ ಜಾತಿಗೆ ಸೇರಿದ ಕೇವಲ 16 ವಿದ್ಯಾರ್ಥಿಗಳು ಊಟ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಶಾಲೆಯಲ್ಲಿ 230 ವಿದ್ಯಾರ್ಥಿಗಳಿದ್ದು, 6 ರಿಂದ 8ನೇ ತರಗತಿವರೆಗಿನ 66 ವಿದ್ಯಾರ್ಥಿಗಳ ಪೈಕಿ 40 ಮಂದಿ ಮೇಲ್ವರ್ಗದವರು. ಡಿ.13ರಂದು ಸುನಿತಾ ದೇವಿ ಕರ್ತವ್ಯಕ್ಕೆ ಸೇರಿದ ಮರುದಿನದಿಂದ ಈ ವಿದ್ಯಾರ್ಥಿಗಳು ಬಿಸಿಯೂಟ ಬಹಿಷ್ಕರಿಸಿ, ಮನೆಯಿಂದ ಊಟ ತರುತ್ತಿದ್ದಾರೆ ಎಂದು ತಿಳಿಸಿದ್ದಾರೆ.