Thursday, 26th December 2024

Mika Singh: ಅನಂತ್ ಅಂಬಾನಿ ವಿರುದ್ಧ ಮಿಕಾ ಸಿಂಗ್ ಅಸಮಾಧಾನ! ಕಾರಣವೇನು ಗೊತ್ತೆ?

mika singh

ನವದೆಹಲಿ: ಬಾಲಿವುಡ್‌, ಪಂಜಾಬಿ ಭಾಷೆಯಲ್ಲಿ  ಸೂಪರ್‌ ಹಿಟ್ ಹಾಡುಗಳನ್ನು  ಹಾಡಿರುವ ಗಾಯಕ ಮಿಕಾ ಸಿಂಗ್ (Mika Singh) ಸದಾ ಯಾವುದಾದರೂ ವಿಚಾರದಲ್ಲಿ ಸುದ್ದಿಯಾಗ್ತಾನೆ ಇರ್ತಾರೆ. ಇದೀಗ ಅನಂತ್ ಅಂಬಾನಿ(Ananth Ambani) ಮದುವೆ ವಿಚಾರದಲ್ಲಿ ತನಗೆ ಅಸಮಾಧಾನ ಆಗಿದೆ ಎನ್ನುವ ವಿಚಾರವೊಂದನ್ನು  ಹೊರಹಾಕಿದ್ದಾರೆ.

ಸಂದರ್ಶನವೊಂದರಲ್ಲಿ ಅನಂತ್ ಅಂಬಾನಿ (Anant Ambani) ಮದುವೆ  ಬಗ್ಗೆ ಮಾತನಾಡಿರುವ ಮಿಕಾ ಸಿಂಗ್, ಅನಂತ್ ಅಂಬಾನಿ ಮದುವೆಯ ಸಂದರ್ಭದಲ್ಲಿ  ನನಗೆ ಬೇಸರ ಉಂಟಾಗಿದೆ ಅಂದಿದ್ದಾರೆ. ನನಗೆ ಮದುವೆ ಸಂಭ್ರಮದಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಆದ್ರೆ ಅಲ್ಲಿ ನನಗೆ ನಿರಾಶೆಯಾಗಿದೆ ಎಂದಿದ್ದಾರೆ. ಯಾಕೆ ಎಂದು ಸಂದರ್ಶಕರು ಪ್ರಶ್ನಿಸಿದಾಗ ಎಲ್ಲರಿಗೂ ಅಂಬಾನಿ ಕುಟುಂಬ ವಾಚ್ ನೀಡಿದೆ. ಆದ್ರೆ ನನಗೆ ನೀಡಲಿಲ್ಲ. ಇದು ನನಗೆ ಬೇಸರ ತರಿಸಿದೆ ಎಂದು ಮಿಕಾ ಸಿಂಗ್ ಹೇಳಿದ್ದಾರೆ.

ಎಷ್ಟು ಸಂಭಾವನೆ ಸಿಕ್ಕಿದೆ?

ಅನಂತ್ ಅಂಬಾನಿ ಮದುವೆಯಲ್ಲಿ  ಸಿಕ್ಕಿರುವ ಸಂಭಾವನೆ ಬಗ್ಗೆ ಮಾತನಾಡಿರುವ ಮಿಕಾ ಸಿಂಗ್ ನನಗೆ ಎಷ್ಟು ಸಂಭಾವನೆ ನೀಡಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದ್ರೆ ದೊಡ್ಡ ಮೊತ್ತವೇ ಸಿಕ್ಕಿದೆ. ಕೆಲವು  ವರ್ಷ ನಾನು ಆರಾಮವಾಗಿ ಜೀವನ ನಡೆಸುವಷ್ಟು ಹಣ ನೀಡಿದ್ದಾರೆ. ಇದರ ಬಗ್ಗೆ ಬೇಸರ ಇಲ್ಲ ಆದರೆ ವಾಚ್ ನೀಡದೆ ಇದ್ದದಕ್ಕಾಗಿ ಬೇಸರ ಇದೆ ಎಂದು ಸಂದರ್ಶನದ ಮಧ್ಯೆಯೇ ಕೈ ಮುಗಿದು ಅನಂತ್ ಅಂಬಾನಿಗೆ ಬ್ರದರ್ ನಿಮ್ಮ ಸಹೋದರನಿದ್ದಂತೆ, ಎಲ್ಲರಿಗೂ ನೀವು ವಾಚ್ ನೀಡಿದ್ದೀರಿ, ನನಗೂ ಕಳುಹಿಸಿ ಎಂದಿದ್ದಾರೆ.

ದೇಶ ವಿದೇಶದಲ್ಲಿ  ಮ್ಯೂಸಿಕ್ ನೀಡುವ ಮಿಕಾಸಿಂಗ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಯುಎಸ್‌ ನ ಬಿಲೋಕ್ಸಿನಲ್ಲಿ ಮ್ಯೂಸಿಕ್‌ ಪ್ರೋಗ್ರಾಂ ನೀಡಿದ ಸಂದರ್ಭದಲ್ಲಿ  ಅಭಿಮಾನಿಯೊಬ್ಬರು ಗಾಯಕನಿಗೆ ದುಬಾರಿ ಗಿಫ್ಟ್‌ ನೀಡಿ ಸುದ್ದಿಯಾಗಿದ್ದರು. ಮಿಕಾ ಅವರು ಹಾಡನ್ನು ಹಾಡುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನ ಮೂಲದ ಅಭಿಮಾನಿಯೊಬ್ಬರು ವೇದಿಕೆಗೆ ಬಂದು ವೈಟ್‌ ಗೋಲ್ಡ್‌ ಚೈನ್, ವಜ್ರದ ಉಂಗುರ, ವೈಟ್‌ ಗೋಲ್ಡ್‌  ಬ್ರೆಸ್‌ ಲೆಟ್ ಮತ್ತು 3 ಕೋಟಿ ಮೌಲ್ಯದ ರೋಲೆಕ್ಸ್‌ ವಾಚ್‌ ನೀಡಿದ್ದರು.

ಈ ಸುದ್ದಿಯನ್ನೂ ಓದಿ:Ratan Tata: ಸಿರಿವಂತರಾಗಿದ್ದರೂ ರತನ್ ಟಾಟಾ ಧರಿಸುತ್ತಿದ್ದ ವಾಚ್‌ ಯಾವುದು ನೋಡಿ!