Friday, 22nd November 2024

ಮಿಜೋರಾಂಗೂ ವಕ್ಕರಿಸಿದ ಕರೋನಾ: 70 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಐಜ್ವಾಲ್: ಮಹಾಮಾರಿ ಕರೋನಾ ಈಶ್ಯಾನ್ಯ ಮಿಜೋರಾಂಗೂ ವಕ್ಕರಿಸಿದ್ದು, 245 ಮಕ್ಕಳು ಸೇರಿದಂತೆ, ಶನಿವಾರ ಒಂದೇ ದಿನ 1089 ಮಂದಿಯಲ್ಲಿ ಕಾಣಿಸಿಕೊಂಡಿದೆ. ಭಾನುವಾರದ ವೇಳೆಗೆ ಒಟ್ಟು ಗಾತ್ರ 70 ಸಾವಿರ ದಾಟಿದೆ. ಹಿಂದಿನ ದಿನಕ್ಕಿಂತಲೂ 364 ಪ್ರಕರಣಗಳು ಹೆಚ್ಚು ವರದಿಯಾಗಿವೆ.

ಮಕ್ಕಳಿಗೆ ಸೋಂಕು ಹೆಚ್ಚು ತಗುಲಿರುವುದು ಆತಂಕ ಮೂಡಿಸಿದೆ. ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂದು ತಜ್ಞರು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಮಿಜೋರಾಂನಲ್ಲಿ ಶೇ.30ರಷ್ಟು ಸೋಂಕಿತರು ಮಕ್ಕಳಾಗಿರುವುದು ಆತಂಕ ಹೆಚ್ಚಿಸಿದೆ.

ಒಟ್ಟು 236 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕಿನ ಪ್ರಮಾಣ ಭಾನುವಾರ ಶೇ.13.98 ರಷ್ಟಾಗಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್‍ನಲ್ಲಿ ಮೂರನೇ ಅಲೆ ಕಾಡಲಿದೆ ಎಂಬ ವರದಿ ಇದೆ. ಈಶಾನ್ಯ ರಾಜ್ಯಗಳ ಪೈಕಿ, ಮಿಜೋರಾಂ ಸೋಂಕು ಪೀಡಿತವಾಗಿದ್ದು, ಐಜ್ವಾಲ್ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ವರದಿ ಯಾಗಿವೆ.

ರಾಜ್ಯದಲ್ಲಿ ಒಟ್ಟು 12,429 ಸಕ್ರಿಯ ಪ್ರಕರಣಗಳಿವೆ. 58,175 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 9.63 ಲಕ್ಷ ಮಂದಿಯನ್ನು ಪರೀಕ್ಷೆಗೆ ಒಳಪಡಿಸ ಲಾಗಿದ್ದು, 2.98 ಲಕ್ಷ ಮಂದಿಗೆ ಎರಡು ಡೋಸ್ ಲಸಿಕೆ ಹಾಕಲಾಗಿದೆ.