Saturday, 14th December 2024

Modi At Doda rally : ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಕೊನೇ ಮೊಳೆ, ವಂಶಪಾರಂಪರ್ಯವೂ ಅಂತ್ಯ

Modi At Doda rally

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶನಿವಾರ ಚುನಾವಣಾ ರ್ಯಾಲಿಯನ್ನು (Modi At Doda rally) ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮಾತನಾಡಿದರು. ಈ ವೇಳೆ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ತನ್ನ ಕೊನೆಯ ಉಸಿರು ಎಳೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಕಣಿವೆ ರಾಜ್ಯದ ವಂಶಪಾರಂಪರ್ಯ ರಾಜಕೀಯಕ್ಕೂ ಅಂತ್ಯ ಹಾಡುತ್ತೇವೆ ಎಂದು ಹೇಳಿದ್ದಾರೆ. ಅದೇ ರೀತಿ ಸುಂದರ ರಾಜ್ಯವನ್ನು ಹಾಳು ಮಾಡಿದವರ ಆಡಳಿತವನ್ನು ಕೊನೆಗೊಳಿಸುತ್ತೇವೆ ಹಾಗೂ ಹೊಸ ನಾಯಕತ್ವ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

ನಾವು ಮತ್ತು ನೀವು ಒಟ್ಟಾಗಿ ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಸುರಕ್ಷಿತ ಮತ್ತು ಸಮೃದ್ಧ ಭಾಗವನ್ನಾಗಿ ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸೆಪ್ಟೆಂಬರ್ 18ರಂದು ನಡೆಯಲಿರುವ ಮೊದಲ ಹಂತದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿಯವರ ಮೊದಲ ಚುನಾವಣಾ ರ್ಯಾಲಿ ಇದು.

ಸ್ವಾತಂತ್ರ್ಯದ ನಂತರ, ಜಮ್ಮು ಮತ್ತು ಕಾಶ್ಮೀರವು ವಿದೇಶಿ ಶಕ್ತಿಗಳ ಗುರಿಯಾಗಿದೆ. ವಂಶಪಾರಂಪರ್ಯ ರಾಜಕೀಯವು ಈ ಸುಂದರ ಪ್ರದೇಶವನ್ನು ಹಾಳು ಮಾಡಿದೆ. ರಾಜಕೀಯ ರಾಜವಂಶಗಳು ತಮ್ಮ ಮಕ್ಕಳನ್ನು ಬೆಳೆಸಿದವರು. ಹೊಸ ನಾಯಕತ್ವವನ್ನು ಬೆಳೆಯಲು ಬಿಡಲಿಲ್ಲ” ಎಂದು ಮೋದಿ ಹೇಳಿದರು.

ಇದನ್ನೂ ಓದಿ: Pralhad Joshi: ದೇಶ ವಿರೋಧಿಗಳ ಜತೆ ಕೈ ಜೋಡಿಸುವುದೇ ರಾಹುಲ್ ಗಾಂಧಿ ಕೆಲಸ; ಪ್ರಲ್ಹಾದ್‌ ಜೋಶಿ ಕಿಡಿ

2014ರಲ್ಲಿ ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ಸರ್ಕಾರ ಯುವ ನಾಯಕತ್ವವನ್ನು ಬೆಳೆಸುವ ಕಡೆಗೆ ಗಮನ ಹರಿಸಿತ್ತು ಎಂದು ಅವರು ಹೇಳಿದ್ದಾರೆ. “ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ತನ್ನ ಕೊನೆಯುಸಿರೆಳೆಯುತ್ತಿದೆ” ಎಂದು ಅವರು ಹೇಳಿದರು.