Saturday, 21st December 2024

Modi in Kuwait: ಅರೇಬಿಕ್‌ ಭಾಷೆಯಲ್ಲಿ ರಾಮಾಯಣ, ಮಹಾಭಾರತ ಕೃತಿ- ಆಟೋಗ್ರಾಫ್‌ ಹಾಕಿದ ಪ್ರಧಾನಿ ಮೋದಿ

modi in kuwait

ನವದೆಹಲಿ: ಎರಡು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಶನಿವಾರ ಕುವೈತ್‌ಗೆ(Kuwait Visit) ಭೇಟಿ ನೀಡಿದ್ದಾರೆ. ಎರಡು ದಿನದ ಪ್ರವಾಸದ ಅವಧಿಯಲ್ಲಿ ಅವರು ಗಲ್ಫ್‌ ದೇಶದ ನಾಯಕತ್ವದೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಅಲ್ಲದೇ ಅಲ್ಲಿರುವ ವಲಸಿಗ ಭಾರತೀಯರನ್ನೂ ಭೇಟಿಯಾಗಲಿದ್ದಾರೆ. 1981ರಲ್ಲಿ ನಂತರ ಕುವೈತ್‌ಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ(Modi in Kuwait).

ಕುವೈತ್‌ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರು ಪ್ರಧಾನಿ ಮೋದಿ ಅವರನ್ನು ಕುವೈತ್‌ಗೆ ಆಹ್ವಾನಿಸಿದ್ದರು. 1981ರಲ್ಲಿ ದೇಶಕ್ಕೆ ಭೇಟಿ ನೀಡಿದ ಕೊನೆಯ ಪ್ರಧಾನಿ ಇಂದಿರಾ ಗಾಂಧಿ.
ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಬಲಪಡಿಸುವುದು ಭೇಟಿಯ ಪ್ರಮುಖ ಕೇಂದ್ರವಾಗಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಮಾಯಣ, ಮಹಾಭಾರತ ಅನುವಾದಕರ ಜತೆ ಮಾತುಕತೆ

ಕುವೈತ್‌ಗೆ ಬಂದಿಳಿಯುತ್ತಿದ್ದಂತೆ ಪ್ರಧಾನಿ ಮೋದಿ, ಅರೇಬಿಕ್ ಭಾಷೆಯಲ್ಲಿ ರಾಮಾಯಣ ಮತ್ತು ಮಹಾಭಾರತಗಳನ್ನು ಪ್ರಕಟಿಸಿದ ಅಬ್ದುಲ್ಲತೀಫ್ ಅಲ್ನೆಸೆಫ್ ಮತ್ತು ಅರೇಬಿಕ್ ಭಾಷೆಗೆ ಅನುವಾದಿಸಿದ ಅಬ್ದುಲ್ಲಾ ಬ್ಯಾರನ್ ಅವರನ್ನು ಕುವೈತ್ ನಗರದಲ್ಲಿ ಭೇಟಿಯಾದರು. ಪುಸ್ತಕಗಳ ಮೇಲೆ ಮೋದಿ ಸಹಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಬ್ದುಲ್ಲಾ ಅಲ್ ಬರೌನ್ ರಾಮಾಯಣ ಮತ್ತು ಮಹಾಭಾರತ ಎರಡನ್ನೂ ಅರೇಬಿಕ್ ಭಾಷೆಗೆ ಅನುವಾದಿಸಿದ್ದಾರೆ. ಅಬ್ದುಲ್ ಲತೀಫ್ ಅಲ್ ನೆಸೆಫ್ ಅವರು ರಾಮಾಯಣ ಮತ್ತು ಮಹಾಭಾರತದ ಅರೇಬಿಕ್ ಆವೃತ್ತಿಗಳನ್ನು ಪ್ರಕಟಿಸಿದ್ದಾರೆ. ಪ್ರಧಾನಿ ತಮ್ಮ ಮನ್ ಕಿ ಬಾತ್‌ನಲ್ಲಿ ಈ ಪ್ರಯತ್ನಗಳ ಬಗ್ಗೆ ಮಾತನಾಡಿದ್ದರು.

ಇನ್ನು ಈ ಗ್ರಂಥಗಳನ್ನು ಅರೇಬಿಕ್ ಭಾಷೆಯಲ್ಲಿ ಬರೆಯಲು ಬರೋಬ್ಬರಿ 2 ವರ್ಷಗಳು ಬೇಕಾಯಿತು ಎಂದು ಇಬ್ರಾಹಿಂ ಹೇಳಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯವರಿಂದ ಮೆಚ್ಚುಗೆ ಪಡೆದಿರುವ ಬಗ್ಗೆ ಸಂಸತ ವ್ಯಕ್ತಪಡಿಸಿದ್ದಾರೆ.

ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಮತ್ತು ರಕ್ಷಣಾ ಸಹಕಾರ ಒಪ್ಪಂದಕ್ಕಾಗಿ ಕುವೈತ್‌ನೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಈ ಭೇಟಿಯ ಸಮಯದಲ್ಲಿ ಕೆಲವು ದ್ವಿಪಕ್ಷೀಯ ಒಪ್ಪಂದಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಅರುಣ್ ಕುಮಾರ್ ಚಟರ್ಜಿ ತಿಳಿಸಿದರು. ಈ ಭೇಟಿಯು ಭಾರತ ಮತ್ತು ಪ್ರಸ್ತುತ ಕುವೈತ್‌ನ ಅಧ್ಯಕ್ಷರಾಗಿರುವ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ನಡುವಿನ ಸಂಬಂಧವನ್ನು ಬಲಪಡಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಇನ್ನು ಕುವೈತ್‌ಗೆ ತೆರಳುವ ಮುನ್ನ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಪ್ರಧಾನಿ ಮೋದಿ, ಕುವೈತ್‌ನ ಉನ್ನತ ನಾಯಕತ್ವದೊಂದಿಗಿನ ಮಾತುಕತೆಯು ಉಭಯ ರಾಷ್ಟ್ರಗಳ ನಡುವಿನ ಭವಿಷ್ಯದ ಪಾಲುದಾರಿಕೆಗಾಗಿ ಮಾರ್ಗಸೂಚಿಯನ್ನು ರೂಪಿಸಲು ಒಂದು ಅವಕಾಶವಾಗಿದೆ ಎಂದು ಹೇಳಿದರು.
ತಲೆಮಾರುಗಳಿಂದ ಪೋಷಿಸಲ್ಪಟ್ಟಿರುವ ಕುವೈತ್‌ನೊಂದಿಗಿನ ಐತಿಹಾಸಿಕ ಸಂಪರ್ಕವನ್ನು ನಾವು ಗೌರವಿಸುತ್ತೇವೆ. ನಾವು ಕೇವಲ ಬಲವಾದ ವ್ಯಾಪಾರ ಮತ್ತು ಇಂಧನ ಪಾಲುದಾರರಲ್ಲ, ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿಯ ಬಗ್ಗೆ ಸಮನಾಸಕ್ತಿಯನ್ನು ಹಂಚಿಕೊಂಡಿದ್ದೇವೆ” ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Narendra Modi: ಪ್ರಧಾನಿ ಮೋದಿಗೆ ಪ್ರಾಣ ಬೆದರಿಕೆ; ಮುಂಬೈ ಪೊಲೀಸರಿಗೆ ಬಂದ ವಾಟ್ಸ್‌ಆ್ಯಪ್‌ ಸಂದೇಶದಲ್ಲಿ ಏನಿದೆ?