Thursday, 19th September 2024

ಇಂದಿನ ಮನ್‌ ಕೀ ಬಾತ್‌’ನಲ್ಲಿ ಮುಂಬೈ ವೈದ್ಯ, ಕೆ.ಸಿ.ಜನರಲ್ ಆಸ್ಪತ್ರೆ ನರ್ಸ್‌ ಜತೆ ಸಂಭಾಷಿಸಿದ ಪ್ರಧಾನಿ ಮೋದಿ

ನವದೆಹಲಿ: ನಮ್ಮ ಧೈರ್ಯವನ್ನು ಉಡುಗುವಂತೆ ಮಾಡುತ್ತಿರುವ ಕರೋನಾ ಎರಡನೇ ಅಲೆ ಅಬ್ಬರಕ್ಕೆ ಭಯಪಡುವ ಅಗತ್ಯ ವಿಲ್ಲ. ಒಂದನೇ ಅಲೆಯನ್ನು ನಿಭಾಯಿಸಿದ್ದೇವೆ. ಹೀಗಾಗಿ ನಮ್ಮಲ್ಲಿ ಆತ್ಮಸ್ಥೈರ್ಯವಿದೆ. ಲಸಿಕೆ ನೀಡಿಕೆಯ ವೇಗ ಕೂಡ ಹೆಚ್ಚಿದೆ ಲಸಿಕೆ ಬಗ್ಗೆ ಊಹಾಪೋಹದ ಸುದ್ದಿ ಬಗ್ಗೆ ಕಿವಿಗೊಡಬೇಡಿ ಎಂದು ಪ್ರಧಾನಿ ಮೋದಿ ತಿಳಿಸಿದರು.

ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ಮೋದಿ, ಲಸಿಕೆ ಬಗ್ಗೆ ಹರಡುವ ವದಂತಿ ಗಳಿಗೆ ಗಮನ ಕೊಡಬೇಡಿ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು. ಉಚಿತ ಲಸಿಕೆ ಅಭಿಯಾನ ಕಾರ್ಯಕ್ರಮ ಜಾರಿಯಲ್ಲಿದೆ. ರಾಜ್ಯ ಸರ್ಕಾರಗಳು ಉಚಿತ ಲಸಿಕೆ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಉಚಿತ ಲಸಿಕೆ ಮುಂದುವರೆಯಲಿದೆ. ಇದರಲ್ಲಿ ಕಾರ್ಪೊರೇಟ್ ಕಂಪನಿಗಳು ಭಾಗಿಯಾಗಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ನರ್ಸ್ ಸುರೇಖಾ ಅವರಿಗೆ ಕರೆ ಮಾಡಿದ ಪ್ರಧಾನಿ ಅವರೊಂದಿಗೆ ಮಾತನಾಡಿ ದ್ದಾರೆ. ಯಾರಲ್ಲಾದರೂ ಕರೋನಾ ಸೋಂಕಿನ ಲಕ್ಷಣ ಕಂಡುಬಂದರೆ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯಿರಿ. ಲಸಿಕೆ ಪಡೆದು ಕೊಳ್ಳುವ ಬಗ್ಗೆ ಯಾವುದೇ ಭಯ ಬೇಡ. ಯಾವುದೇ ಲಸಿಕೆ ತಕ್ಷಣ ಪರಿಣಾಮ ಬೀರದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸು ತ್ತದೆ ಎಂದು ತಿಳಿಸಿದ್ದಾರೆ.

ಮುಂಬೈನ ಡಾ.ಶಶಾಂಕ್ ಅವರೊಂದಿಗೂ ಮಾತನಾಡಿ, ಎರಡನೇ ಅಲೆ ಮೊದಲ ಅಲೆಗಿಂತ ವೇಗವಾಗಿ ಹರಡುತ್ತೆ. ರೂಪಾಂತರಿ ವೈರಸ್ ಜನರು ಬಟ್ಟೆ ಬದಲಿಸಿದಂತೆ ವೈರಸ್ ಬದಲಾಗುತ್ತದೆ. ಮೈಲ್ಡ್, ಮಧ್ಯಮ, ತೀವ್ರ ಎಂದು ಕೋವಿಡ್ ನಲ್ಲಿ 3 ವಿಧ. ರೆಮ್ ಡಿಸಿವಿರ್ ಹಿಂದೆ ಓಡುವ ಅಗತ್ಯವಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *