Thursday, 12th December 2024

ತಾಲಿಬಾನ್ ಉಗ್ರರಿಂದ ಅಸ್ಥಿರತೆ: ಮೋದಿ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ

ನವದೆಹಲಿ: ಆಫ್ಘಾನಿಸ್ಥಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ಕೂಡ ಮಹತ್ವದ ಸಭೆ ನಡೆಯಲಿದೆ.

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಂದ ಅಸ್ಥಿರತೆ ಉಂಟಾಗಿದೆ. ಇದರಿಂದ ಉಂಟಾಗುವ ಪರಿಣಾಮಗಳ ಕುರಿತಂತೆ ಮತ್ತು ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮತ್ತೆ ತುರ್ತು ಸಭೆ ಕರೆಯಲಾಗಿದೆ. ಉಗ್ರರ ಉಪಟಳ ಹೆಚ್ಚಾಗುವ ಆತಂಕದಿಂದ ಪ್ರಧಾನಿ ಮೋದಿ ತುರ್ತು ಸಂದೇಶ ರವಾನಿಸಿ ದ್ದಾರೆ.

ಮಂಗಳವಾರದ ಸಭೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್, ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗಿಯಾಗಿದ್ದರು. ಅಫ್ಘಾನಿಸ್ತಾನ ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಪಡೆದುಕೊಂಡ ಮೋದಿ, ಭಾರತದ ಹಿತಾಸಕ್ತಿ ರಕ್ಷಣೆ ಕುರಿತು ಮಹತ್ವದ ಚರ್ಚೆ ನಡೆಸಿ ದ್ದಾರೆ.

ತಾಲಿಬಾನಿಗಳಿಂದ ಆಗುವ ಅನಾಹುತಗಳ ಕುರಿತು, ಉಗ್ರರಿಂದ ಆಂತರಿಕ ಭದ್ರತೆಗೆ ತೊಂದರೆಯಾದರೆ ಮತ್ತು ಗಡಿಯಲ್ಲಿ ಉಗ್ರರ ಉಪಟಳ ಹೆಚ್ಚಾದರೆ ಹೆಚ್ಚಿನ ಭದ್ರತೆ ವ್ಯವಸ್ಥೆ ಕೈಗೊಳ್ಳಬೇಕು ಎಂಬುದರ ಬಗ್ಗೆ ಸೂಚನೆ ನೀಡಿದ್ದಾರೆ.