Wednesday, 30th October 2024

ನಾಳೆ ಪ್ರಧಾನಿ ಮೋದಿಯವರಿಂದ ಭಾರತೀಯ ಆಟಿಕೆ ಮೇಳ ಉದ್ಘಾಟನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ.27 ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಭಾರತೀಯ ಆಟಿಕೆ ಮೇಳ ಉದ್ಘಾಟಿಸಲಿದ್ದಾರೆ.

ಆಟಿಕೆಗಳು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಮಹತ್ವದ ಪಾತ್ರ ವಹಿಸ ಲಿದ್ದು, ಮನಸ್ಸಿನ ಚಟುವಟಿಕೆಗಳನ್ನು ಸುಧಾರಿಸು ತ್ತದೆ ಮತ್ತು ಮಕ್ಕಳಲ್ಲಿ ಅರಿವಿನ ಕೌಶಲವನ್ನು ವೃದ್ಧಿಸುತ್ತವೆ. ಮಗುವಿನ ಸರ್ವಾಂಗೀಣ ಬೆಳವಣಿಗೆ ಯಲ್ಲಿ ಆಟಿಕೆಗಳ ಮಹತ್ವ ವನ್ನು ಮನಗಂಡಿರುವ ಪ್ರಧಾನಮಂತ್ರಿ ಅವರು, ಭಾರತದಲ್ಲಿ ಆಟಿಕೆಗಳ ಉತ್ಪಾದನೆ ಹೆಚ್ಚಿಸಲು ಪುಷ್ಟಿ ನೀಡಿದ್ಧಾರೆ. ಪ್ರಧಾನ ಮಂತ್ರಿ ಅವರ ಈ ದೃಷ್ಟಿಕೋನದ ಅನ್ವಯ 2021 ರ ಭಾರತೀಯ ಅಟಿಕೆ ಮೇಳ ಆಯೋಜಿಸಲಾಗಿದೆ.

2021 ರ ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ಈ ಮೇಳ ನಡೆಯಲಿದೆ. ಅಟಿಕೆಗಳ ಖರೀದಿದಾರರು, ಮಾರಾಟಗಾರರು, ವಿದ್ಯಾರ್ಥಿಗಳು, ಶಿಕ್ಷಕರು, ವಿನ್ಯಾಸಗಾರರು ಸೇರಿದಂತೆ ಎಲ್ಲಾ ಪಾಲುದಾರರನ್ನು ಒಂದೆಡೆ ಸೇರಿಸುವುದು ಈ ಮೇಳದ ಉದ್ದೇಶ ವಾಗಿದೆ. ದೇಶದಲ್ಲಿ ಉದ್ಯಮದ ಒಟ್ಟಾರೆ ಅಭಿವೃದ್ಧಿಗೆ ಸುಸ್ಥಿರ ಸಂಪರ್ಕಗಳನ್ನು ದೊರಕಿಸಿಕೊಡಲು ಮತ್ತು ಸಂವಾದವನ್ನು ಪ್ರೋತ್ಸಾಹಿಸಲು ಈ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.