Monday, 25th November 2024

ಏ.20 ರಂದು ಜಾಗತಿಕ ಬೌದ್ಧ ಶೃಂಗಸಭೆ: ಮೋದಿ ಭಾಷಣ

ವದೆಹಲಿ : ದೆಹಲಿಯಲ್ಲಿ ಏ.20 ರಂದು ಗುರುವಾರ ನಡೆಯಲಿರುವ ಜಾಗತಿಕ ಬೌದ್ಧ ಶೃಂಗಸಭೆಯ ಉದ್ಘಾಟನಾ ಸಮಾರಂಭ ದಲ್ಲಿ ಪ್ರಧಾನಮಂತ್ರಿ ಮೋದಿಯವರು ಭಾಷಣ ಮಾಡಲಿದ್ದಾರೆ.

ದೆಹಲಿಯಲ್ಲಿ ಶೃಂಗಸಭೆಯ ಎರಡು ದಿನಗಳ ಸಮ್ಮೇಳನ ನಡೆಯಲಿದ್ದು, ಸಂಸ್ಕೃತಿ ಸಚಿವಾಲಯ ಮತ್ತು ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟ ಜಂಟಿಯಾಗಿ ಆಯೋಜಿಸಿದೆ.

ಶೃಂಗಸಭೆಯ ವಿಷಯವು ಸಮಕಾಲೀನ ಸವಾಲುಗಳಿಗೆ ಪ್ರತಿಕ್ರಿಯೆಗಳು: ಪ್ರಾಕ್ಸಿಸ್‌ಗೆ ತತ್ವಶಾಸ್ತ್ರ ಎಂಬ ವಿಷಯದ ಕುರಿತಂತೆ ಪ್ರಧಾನಿ ಮೋದಿಯವರು ಭಾಷಣ ಮಾಡಲಿ ದ್ದಾರೆ.

ಈ ಸಮ್ಮೇಳನವು ಜಾಗತಿಕ ಕಾಳಜಿಗಳನ್ನು ಒಟ್ಟಾಗಿ ಪರಿಹರಿಸಲು ಪ್ರಪಂಚದಾದ್ಯಂತದ ಬೌದ್ಧ ನಾಯಕರು ಮತ್ತು ವಿದ್ವಾಂಸ ರನ್ನು ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಶಾಂತಿ, ಪರಿಸರ ಬಿಕ್ಕಟ್ಟು, ನಳಂದ ಬೌದ್ಧ ಸಂಪ್ರದಾಯದ ಸಂರಕ್ಷಣೆ ಮತ್ತು ಜೀವಂತ ಪರಂಪರೆ ಹಾಗೂ ಬುದ್ಧನ ಅವಶೇಷ ಗಳು ಸೇರಿದಂತೆ ನಾಲ್ಕು ಪ್ರಮುಖ ವಿಷಯಗಳ ಮೇಲೆ ಚರ್ಚೆಗಳು ಕೇಂದ್ರೀಕರಿಸುತ್ತವೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.