Sunday, 3rd November 2024

ಉತ್ತರ ಪ್ರದೇಶದಲ್ಲಿ ಮಂಕಿಪಾಕ್ಸ್​ ಪ್ರಕರಣ ?

ಲಖನೌ: ಉತ್ತರ ಪ್ರದೇಶದ ಔರಿಯಾ ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಸಂಭವನೀಯ ಪ್ರಕರಣ ಪತ್ತೆಯಾಗಿದೆ.

ಬಿದುನಾ ತಹಸಿಲ್‌ನ ಮೊಹಲ್ಲಾ ಜವಾಹರ್ ನಗರದ ಮಹಿಳೆಯಲ್ಲಿ ಕಳೆ ದೊಂದು ವಾರದಿಂದ ಜ್ವರ ಕಾಣಿಸಿಕೊಂಡಿದ್ದು, ಮಂಗನ ಕಾಯಿಲೆಯ ಲಕ್ಷಣಗಳು ವರದಿಯಾಗಿವೆ ಎನ್ನಲಾಗುತ್ತಿದೆ.

ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವೈದ್ಯರ ಬಳಿ ಔಷಧಿ ಪಡೆಯಲು ತೆರಳಿದ್ದರು. ಈ ವೇಳೆ ಮಹಿಳೆಯ ದೇಹದ ಮೇಲೆ ಕೆಲವು ಸಣ್ಣ ಕಲೆಗಳನ್ನು ಗಮನಿಸಿ ಕೂಡಲೇ ವಿಶ್ವ ಆರೋಗ್ಯ ಸಂಸ್ಥೆಗೆ ಕರೆ ಮಾಡಿ, ರೋಗ ಲಕ್ಷಣಗಳು ಮಂಕಿಪಾಕ್ಸ್‌ನ ಲಕ್ಷಣಗಳಾಗಿರಬಹುದು ಎಂದು ತಿಳಿಸಿದರು.

ಮಹಿಳೆಯನ್ನು ಮಾಜಿ ವೈದ್ಯಾಧಿಕಾರಿ ಬಿದುನಾದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿರ್ದೇಶಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಜಿಲ್ಲೆಯ ಆರೋಗ್ಯ ಇಲಾಖೆ ಈ ವಿಷಯದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ.

ಸದ್ಯ ಭಾರತದಲ್ಲಿ ನಾಲ್ಕು ಮಂಕಿಪಾಕ್ಸ್​ ಪ್ರಕರಣಗಳು ವರದಿಯಾಗಿದ್ದು, ಕೇರಳದಲ್ಲಿ ಮೂರು ಮತ್ತು ದೆಹಲಿಯಲ್ಲಿ ಒಂದು ಪ್ರಕರಣ ವರದಿಯಾಗಿದೆ.