Thursday, 19th September 2024

ಕೇರಳದಲ್ಲಿ ಕೋವಿಡ್ ಆರ್ಭಟ: 18 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆ

ಕೊಚ್ಚಿ: ಕೇರಳದಲ್ಲಿ ಕೋವಿಡ್ ಸೋಂಕು ಆರ್ಭಟ ಮುಂದುವರೆದಿದ್ದು, ಭಾನುವಾರ ಮತ್ತೆ 18 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾಗಿದೆ.

ಕೇರಳದಲ್ಲಿ ಭಾನುವಾರ 18,582 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 36.69 ಲಕ್ಷಕ್ಕೆ ಏರಿಕೆ ಯಾಗಿದೆ. ಅಂತೆಯೇ ಸೋಂಕಿಗೆ ಬಲಿಯಾದವರ ಸಂಖ್ಯೆ 102 ಸಾವು ಸಂಭವಿಸಿದ್ದು, ಆ ಮೂಲಕ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 18,601ಕ್ಕೆ ಏರಿಕೆ ಯಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 20,829 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಆ ಮೂಲಕ ಒಟ್ಟು ಗುಣಮುಖರ ಪ್ರಮಾಣ 34,92,367ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,78,630 ಕ್ಕೆ ತಲುಪಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.

ಕೇರಳದಲ್ಲಿ ಪ್ರಸ್ತುತ ಪಾಸಿಟಿವಿಟಿ ದರ 15.11ಕ್ಕೆ ಏರಿಕೆಯಾಗಿದೆ. ಮಲಪ್ಪುರಂನಲ್ಲಿ ಅತೀ ಹೆಚ್ಚು ಅಂದರೆ 2681, ತ್ರಿಶೂರ್ 2423, ಕೋಳಿಕ್ಕೋಡ್ 2368, ಎರ್ನಾಕುಲಂ 2161, ಪಾಲಕ್ಕಾಡ್ 1771, ಕಣ್ಣೂರು 1257, ಕೊಲ್ಲಂ 1093, ಆಲಪ್ಪುಳ 941, ಕೊಟ್ಟಾಯಂ 929 ಮತ್ತು ತಿರುವನಂತಪುರಂನಲ್ಲಿ 927 ಸೋಂಕು ಪ್ರಕರಣಗಳಿವೆ.