ಮುಂಬೈ: ಈಕ್ವಿಟಿ ಸೂಚ್ಯಂಕ ಸೋಮವಾರ ಏರಿಕೆ ಕಂಡ ಪರಿಣಾಮ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 350ಕ್ಕೂ ಹೆಚ್ಚು ಅಂಕ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಷೇರುಪೇಟೆಯ ಸಂವೇದಿ ಸೂಚ್ಯಂಕ 364 ಅಂಕಗಳಷ್ಟು ಏರಿಕೆ ಕಂಡಿದ್ದು, 52,951 ಅಂಕಗಳೊಂದಿಗೆ ಹಾಗೂ ಎನ್ ಎಸ್ ಇ ನಿಫ್ಟಿ ಕೂಡಾ 122 ಅಂಕಗಳಷ್ಟು ಜಿಗಿತ ಕಂಡಿದ್ದು, 15,885ರ ಗಡಿ ತಲುಪುವಂತಾಗಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಟೈಟಾನ್, ಮಹೀಂದ್ರಾ ಆಯಂಡ್ ಮಹೀಂದ್ರಾ, ರಿಲಯನ್ಸ್, ಟಿಸಿಎಸ್, ಆಯಕ್ಸಿಸ್ ಬ್ಯಾಂಕ್, ಮಾರುತಿ ಮತ್ತು ಇನ್ಫೋಸಿಸ್ ಷೇರುಗಳು ಶೇ.3.44ರಷ್ಟು ಲಾಭಗಳಿಸಿದೆ. ಎನ್ ಎಸ್ ಇ ನಿಫ್ಟಿ ಸೂಚ್ಯಂಕ ಏರಿಕೆಯಿಂದ ಆಟೋ ಮತ್ತು ಐಟಿ ಷೇರುಗಳು ಶೇ.4.79ರಷ್ಟು ಲಾಭಗಳಿಸಿದೆ.
ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 333.69 ಅಂಕಗಳಷ್ಟು ಏರಿಕೆಯಾಗಿದ್ದು, 52,920.53 ಅಂಕಗಳ ವಹಿವಾಟು ನಡೆಸಿತ್ತು.
ಅದೇ ರೀತಿ ಎನ್ ಎಸ್ ಇ ನಿಫ್ಟಿ 101.65 ಅಂಕ ಏರಿಕೆಯೊಂದಿಗೆ 15,864.70ರ ಗಡಿ ತಲುಪಿತ್ತು.