Thursday, 9th January 2025

Viral News: ದೇವಸ್ಥಾನ ಉತ್ಸವದಲ್ಲಿ ಪುಂಡಾಟ ಮೆರೆದ ಗಜರಾಜ; 20ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ತಿರುವನಂತಪುರಂ: ದೇವಾಲಯದ ಉತ್ಸವಕ್ಕೆಂದು ಕರೆಸಿದ್ದ ಆನೆ ಇದ್ದಕ್ಕಿದ್ದಂತೆ ಜನರ ಬಳಿ ನುಗ್ಗಿ ಪುಂಡಾಟ ಮೆರೆದಿದೆ. ಆನೆಯ ಆಕ್ರೋಶದಿಂದಾಗಿ 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್‌ನಲ್ಲಿ ಈ ಘಟನೆ ನಡೆದಿದೆ (Viral News).

ತಿರೂರ್‌ನ (Tirur) ಪುತಿಯಂಗಡಿ(Puthiyangadi) ವಾರ್ಷಿಕ ಹಬ್ಬದ ಹಿನ್ನೆಲೆಯಲ್ಲಿ ಮೆರವಣಿಗೆಗಾಗಿ ಆನೆಗಳನ್ನು ಕರೆಸಲಾಗಿತ್ತು. ಗುಂಪಿನ ಮಧ್ಯೆ ಒಂದು ಆನೆಗೆ ಮದವೇರಿದ್ದು, ಮುಂದೆ ನಿಂತಿದ್ದ ಜನರ ಮೇಲೆ ದಾಳಿ ದಿಢೀರ್ ಮಾಡಿದೆ. ಈ ಭಯಾನಕ ದೃಶ್ಯವು ವಿಡಿಯೊದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಸಾಕಷ್ಟು ವೈರಲ್‌ ಆಗಿದೆ. ವಿಡಿಯೊ ನೋಡಿದ ನೆಟ್ಟಿಗರು ಮೈ ಜುಮ್ಮೆನ್ನಿಸುವಂತಿದೆ ಎಂದಿದ್ದಾರೆ (‌Viral Video).

ಮಾವುತ ಎಷ್ಟೇ ಕಷ್ಟಪಟ್ಟರು ಆನೆಯ ಪುಂಡಾಟವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆಕ್ರೋಶದಲ್ಲಿರುವ ಆನೆ ಓರ್ವ ವ್ಯಕ್ತಿಯನ್ನು ಸೊಂಡಿಲಿನಲ್ಲಿ ಎತ್ತಿ ಎಸೆದಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ವ್ಯಕ್ತಿಯ ಸ್ಥಿತಿ ಈಗ ಚಿಂತಾಜನಕವಾಗಿದ್ದು, ಅವರನ್ನು ಕೋಟಕ್ಕಲ್‌ನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂಲಗಳ ಪ್ರಕಾರ ಇಲ್ಲಿನ ಬಿಪಿ ಅಂಗಡಿಯಲ್ಲಿರುವ ಯಾಹೂ ತಂಗಳ್ ದೇಗುಲದಲ್ಲಿ ನಾಲ್ಕು ದಿನಗಳ ವಾರ್ಷಿಕ ಉತ್ಸವಗಳು ಅಥವಾ ನೇರ್ಚಾ ಕಾರ್ಯಕ್ರಮ ನಡೆಯುತ್ತಿತ್ತು. ಈ ವಿಶೇಷ ಕಾರ್ಯಕ್ರಮಕ್ಕಾಗಿ ತರಬೇತಿ ಪಡೆದ ಆನೆಗಳನ್ನು ಕರೆಸಲಾಗಿತ್ತು. ಧಾರ್ಮಿಕ ಕಾರ್ಯಕ್ರಮದಲ್ಲಿ ಐದು ಆನೆಗಳು ಭಾಗಿಯಾಗಿದ್ದವು. ಆದರೆ ಕಾರ್ಯಕ್ರಮ ಮುಗಿಯುವ ಕೆಲವೇ ಗಂಟೆಗಳ ಮೊದಲು ʼಪಕ್ಕೋತ್ ಶ್ರೀಕುಟ್ಟನ್ʼ ಎಂಬ ಹೆಸರಿನ ಆನೆಯು ದಿಢೀರ್ ಆಕ್ರೋಶಗೊಂಡು ದಾಳಿ ನಡೆಸಿದೆ. ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿ, ಸೊಂಡಿಲಿನಿಂದ ಎಳೆದು ಬಿಸಾಡಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕೊಟ್ಟಕಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಿಂದ ಗಾಬರಿಗೊಂಡ ಜನರು ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದ್ದಾರೆ. ಇದರಿಂದ ಕಾಲ್ತುಳಿತವಾಗಿ 17 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ತಿರೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊನೆಗೆ ಮಾವುತರು ಹರಸಾಹಸಪಟ್ಟು ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Murder Case: ಕೋಲಾರದಲ್ಲಿ ಯುವಕನ ಅಟ್ಟಾಡಿಸಿ ಕೊಲೆ; ನಾಲ್ವರು ಆರೋಪಿಗಳು ಅರೆಸ್ಟ್

Leave a Reply

Your email address will not be published. Required fields are marked *