Thursday, 12th December 2024

ಯುವ ಕುಸ್ತಿಪಟುವಿಗೆ ಸಂಸದನಿಂದಲೇ ಕಪಾಳಮೋಕ್ಷ..?

#Ranchi

ಜಾರ್ಖಂಡ್: ಕುಸ್ತಿಪಟುವಿನ ಕಪಾಳಕ್ಕೆ ಬಿಜೆಪಿ ಸಂಸದ ಹೊಡೆದ ಆಘಾತಕಾರಿ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಕ್ರೀಡಾ ಸಮಾರಂಭದ ವೇದಿಕೆಯ ಮೇಲೆ ನಡೆದಿದೆ.

ಭಾರತೀಯ ಕುಸ್ತಿಪಟು ಫೆಡರೇಷನ್ ಅಧ್ಯಕ್ಷ ಬ್ರಿಡ್ಜ್ ಭೂಷಣ್ ಶರಣ್ ಸಿಂಗ್​ ವೇದಿಕೆಯ ಮೇಲೆಯೇ ಯುವ ಕುಸ್ತಿಪಟುವಿಗೆ ಎರಡು ಬಾರಿ ಹಲ್ಲೆ ನಡೆಸಿದರು. ಕೂಡಲೇ ಕುಸ್ತಿಪಟು ವೇದಿಕೆಯಿಂದ ಹೊರ ತೆರಳಿದ್ದಾರೆ.

ಉತ್ತರ ಪ್ರದೇಶದ ಕೈಸರ್ ಗಂಜ್ ಕ್ಷೇತ್ರದ ಸಂಸದ ಬ್ರಿಡ್ಜ್ ಭೂಷಣ್ ಶರಣ್ ಸಿಂಗ್, 15 ವರ್ಷದೊಳಗಿ ನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ನ ಮೊದಲ ದಿನದ ಸ್ಪರ್ಧೆಯ ವೇಳೆ ಮುಖ್ಯ ಅತಿಥಿ ಯಾಗಿ ಆಗಮಿಸಿದ್ದರು.

ವಯೋಮಿತಿ ಮೀರಿದ ಕಾರಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಲು ಯುವ ಕುಸ್ತಿಪಟು ವೇದಿಕೆಗೆ ಬಂದಾಗ ಘಟನೆ ನಡೆದಿದೆ.