Monday, 25th November 2024

ಎಂಎಸ್‌ಎಂಇ ಉದ್ಯಮಗಳಿಗೆ ಪರಿಹಾರ ವಿಸ್ತರಣೆ

ನವದೆಹಲಿ : ಮೋದಿ ಸರ್ಕಾರದ ಪ್ರಮುಖ ತುರ್ತು ಸಾಲ ಮಾರ್ಗ ಖಾತರಿ ಯೋಜನೆ ಪ್ರಾರಂಭವಾದಾಗಿನಿಂದ 1.15 ಕೋಟಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪರಿಹಾರ ವಿಸ್ತರಿಸಿದೆ.

ಕೋವಿಡ್-19 ಸಾಂಕ್ರಾಮಿಕ ದಿಂದ ಉಂಟಾದ ಅಡಚಣೆಗಳ ಹಿನ್ನೆಲೆಯಲ್ಲಿ ಅರ್ಹ ಸಾಲಗಾರರಿಗೆ ಅವರ ಕಾರ್ಯಾಚರಣೆಯ ಹೊಣೆಗಾರಿಕೆಗಳನ್ನು ಪೂರೈಸಲು ಮತ್ತು ತಮ್ಮ ವ್ಯವಹಾರಗಳನ್ನು ಮರುಪ್ರಾರಂಭಿಸಲು ಇದು ಬೆಂಬಲವನ್ನು ಒದಗಿಸಿದೆ. ಇದರ ಸಲುವಾಗಿ ಕೇಂದ್ರ ಸರ್ಕಾರವು ತುರ್ತು ಸಾಲ ಮಾರ್ಗ ಖಾತರಿ ಯೋಜನೆಯನ್ನು ಮಾರ್ಚ್ 2022ರವರೆಗೆ ವಿಸ್ತರಿಸಿ, ಎಂಎಸ್‌ಎಂಇಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಕೋವಿಡ್ 19 ಸಾಂಕ್ರಾಮಿಕರೋಗದ ಎರಡನೇ ಅಲೆಯಿಂದ ಪ್ರಭಾವಿತವಾದ ವಿವಿಧ ವ್ಯವಹಾರಗಳನ್ನು ಬೆಂಬಲಿಸುವ ಉದ್ದೇಶದಿಂದ, ತುರ್ತು ಸಾಲ ಮಾರ್ಗ ಖಾತರಿ ಯೋಜನೆಯ (ಇಸಿಎಲ್ ಜಿಎಸ್) ಸಮಯವನ್ನು ಮಾ.31ರವರೆಗೆ ವಿಸ್ತರಿಸಲು ಅಥವಾ ಈ ಯೋಜನೆಯಡಿ 4.5 ಲಕ್ಷ ಕೋಟಿ ರೂ.ಗಳ ಖಾತರಿಗಳನ್ನು ನೀಡುವವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದಲ್ಲದೆ, ಯೋಜನೆಯಡಿ ವಿತರಣೆಯ ಕೊನೆಯ ದಿನಾಂಕವನ್ನು ಜೂ.6 ಕ್ಕೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.