Friday, 20th September 2024

ಮುಂಬೈ ಷೇರು: ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ

ಮುಂಬೈ: ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ಗಳ ಸಂವೇದಿ ಸೂಚ್ಯಂಕಗಳು ಸತತ ಮೂರನೇ ವಹಿವಾಟು ದಿನವಾದ ಮಂಗಳವಾರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿವೆ.

ಸೆನ್ಸೆಕ್ಸ್ 248 ಅಂಕ ಏರಿಕೆ ಕಂಡು ದಾಖಲೆಯ ಗರಿಷ್ಠ 49,517 ಕ್ಕೆ ತಲುಪಿದ್ದರೆ, ನಿಫ್ಟಿ 79 ಅಂಕ ಏರಿಕೆ ಕಂಡು 14,563 ಕ್ಕೆ ತಲು ಪಿದೆ. ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕಗಳು ಇಳಿಕೆ ಕಂಡರೂ ನಂತರ ಬ್ಯಾಂಕಿಂಗ್ ಷೇರುಗಳ ಖರೀದಿ ಬೇಡಿಕೆ ಹೆಚ್ಚಾದ್ದ ರಿಂದ ಏರಿಕೆ ಕಂಡಿವೆ.

ನಷ್ಟ ಕಂಡ ಪ್ರಮುಖ ಷೇರುಗಳಲ್ಲಿ ಟೈಟಾನ್, ಏಷ್ಯನ್ ಪೇಂಟ್ಸ್, ನೆಸ್ಲೆ ಮತ್ತು ಸನ್ ಫಾರ್ಮಾ ಸೇರಿವೆ.