ಲಖನೌ: ಗಂಡ-ಹೆಂಡತಿಯ ಸಂಬಂಧ ಹಾಲು-ಜೇನಿನಂತೆ ಇರಬೇಕು ಎನ್ನುತ್ತಾರೆ. ಇಲ್ಲಿ ನಂಬಿಕೆಯೇ ಮುಖ್ಯ ಅಡಿಪಾಯವಾಗಿರುತ್ತದೆ. ಸಪ್ತಪದಿ ತುಳಿದು ಎಲ್ಲ ಸಂದರ್ಭದಲ್ಲಿಯೂ ಜತೆಯಾಗಿ ಇರುತ್ತೇವೆ ಎಂದು ಹೇಳಿದ ಜೋಡಿಗಳು ಇನ್ಯಾವುದೋ ಮೋಹ ಪಾಶಕ್ಕೆ ಬಿದ್ದು ಸಂಬಂಧದ ಬೆಲೆಯನ್ನೇ ಕೆಡಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಉತ್ತರ ಪ್ರದೇಶದ ಜಲೌನ್ ಇಂತಹದೊಂದು ಘಟನೆಗೆ ಸಾಕ್ಷಿಯಾಗಿದೆ. ಪತಿಯಿಲ್ಲದ ವೇಳೆಯಲ್ಲಿ ಪತ್ನಿ ತನ್ನ ಪ್ರಿಯಕರನ ಜತೆ ಮನೆಯಲ್ಲಿ ಸರಸವಾಡಿದ್ದಾಳಂತೆ. ಇವರಿಬ್ಬರು ಒಟ್ಟಿಗೆ ಇರುವುದನ್ನು ನೋಡಿದ ಪತಿ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕೊಲೆ(Murder Case) ಮಾಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಮೂವತ್ತರ ಆಸುಪಾಸಿನ ಕಾರ್ಮಿಕನಾಗಿರುವ ಕುನ್ವರ್ ಸಿಂಗ್ ಎಂಬ ವ್ಯಕ್ತಿ ತನ್ನ 32 ವರ್ಷದ ಪತ್ನಿ ಆರತಿ ಹಾಗೂ ಇಬ್ಬರು ಚಿಕ್ಕ ಮಕ್ಕಳೊಂದಿಗೆ ವಾಸವಾಗಿದ್ದನು. ಕಳೆದ ಕೆಲವು ತಿಂಗಳುಗಳಿಂದ ಕುನ್ವರ್ ತನ್ನ ಹೆಂಡತಿಯ ನಡವಳಿಕೆಯ ಬಗ್ಗೆ ಅನುಮಾನ ಹೊಂದಿದ್ದನು. ಇದು ಅವರ ನಡುವೆ ಆಗಾಗ್ಗೆ ಜಗಳಕ್ಕೆ ಕಾರಣವಾಗುತ್ತಿತ್ತು. ಹತ್ತಿರದ ಹಳ್ಳಿಯ ನಿವಾಸಿ ಛವಿನಾಥ್ ಸಿಂಗ್ ಜತೆ ಆರತಿ ಸಂಬಂಧ ಹೊಂದಿರುವುದು ತಿಳಿದಾಗ ಅನುಮಾನಗಳು ನಿಜವೆಂದು ಸಾಬೀತಾಗಿದೆ.
#उत्तरप्रदेश जालौन के टिकरी गांव मे अपने बैड पर पत्नि को प्रेमी की बाहों मे देख पति कुंवर सिंह आपा खो बैठा। उसने कुल्हाड़ी का वार कर 32 वर्ष की पत्नि निकिता व उसके प्रेमी छविनाथ ठाकुर (40) को मार डाला। दोनों आपत्ति जनक अवस्था मे मिले थे। पति अचानक ही दिल्ली से घर आया तो लॉक्ड… pic.twitter.com/jztghuUkKk
— Sanju Singh 🇮🇳 (@sanju_singh27) December 6, 2024
ಛವಿನಾಥ್ ಆಗಾಗ್ಗೆ ಈ ಪ್ರದೇಶದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡುತ್ತಿದ್ದನು. ಆ ಸಮಯದಲ್ಲಿ, ಆತ ಆರತಿಯೊಂದಿಗೆ ಸಂಬಂಧವನ್ನು ಬೆಳೆಸಿದ್ದಾನೆ ಎಂದು ವರದಿಯಾಗಿದೆ. ಈ ಘಟನೆ ನಡೆಯುವ ಸುಮಾರು ಹತ್ತು ದಿನಗಳ ಮೊದಲು, ಕುನ್ವರ್ ಮತ್ತು ಆರತಿ ಈ ವಿಷಯದ ಬಗ್ಗೆ ತೀವ್ರ ವಾಗ್ವಾದ ನಡೆಸಿದ್ದರು. ಈ ಗಲಾಟೆಯು ಆರತಿ ತನ್ನ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಲು ಕಾರಣವಾಯಿತು.
ಪೊಲೀಸರು ಕುನ್ವರ್ ಅವರನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಅರೆಸ್ಟ್ ಆಗುವ ಭಯದಿಂದ ಆತ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದ. ಆದರೆ ಇತ್ತೀಚೆಗೆ ತಡರಾತ್ರಿ, ಕುನ್ವರ್ ಅನಿರೀಕ್ಷಿತವಾಗಿ ಮನೆಗೆ ಬಂದಾಗ ಆರತಿ ಮತ್ತು ಛವಿನಾಥ್ ಅವರ ಕೋಣೆಯಲ್ಲಿ ಹಾಸಿಗೆಯ ಮೇಲೆ ಒಟ್ಟಿಗೆ ಇರುವುದನ್ನು ನೋಡಿದ್ದಾನೆ. ಇದರಿಂದ ಕೋಪಗೊಂಡ ಅವನು ಅವರಿಬ್ಬರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ, ಕೊಲೆ ಮಾಡಿದ್ದಾನೆ.
ಇದನ್ನೂ ಓದಿ:ಬೈಕ್ ಸವಾರರ ನಿರ್ಲಕ್ಷ್ಯಕ್ಕೆ ಕರಟಿ ಹೋಯ್ತು ಯುವಕರಿಬ್ಬರ ಜೀವ; ಎದೆ ಛಲ್ಲೆನಿಸುವಂತಿದೆ ರಸ್ತೆ ಅಪಘಾತ
ಘಟನೆಯ ಸಮಯದಲ್ಲಿ ಈ ದಂಪತಿಯ 10 ಮತ್ತು 8 ವರ್ಷದ ಇಬ್ಬರು ಮಕ್ಕಳು ಮನೆಯಲ್ಲಿ ಮಲಗಿದ್ದರು. ಗದ್ದಲದಿಂದ ಎಚ್ಚರಗೊಂಡ ಅವರು ಕಿರುಚುತ್ತಾ ಹೊರಗೆ ಓಡಿ, ಹತ್ತಿರದ ಗ್ರಾಮಸ್ಥರನ್ನು ಎಚ್ಚರಿಸಿದ್ದಾರೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ವಿಧಿವಿಜ್ಞಾನ ತಂಡವು ಪುರಾವೆಗಳನ್ನು ಸಂಗ್ರಹಿಸಿತು ಮತ್ತು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ನಂತರ ಕುನ್ವರ್ ಸಿಂಗ್ ಪೊಲೀಸರಿಗೆ ಶರಣಾಗಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.