ಆಗ್ರಾ: ಮೈದುನನ ಜತೆ ಸರಸವಾಡುತ್ತಿದ್ದುದ್ದನ್ನು ನೋಡಿದನೆಂಬ ಕಾರಣಕ್ಕೆ ಹೆತ್ತಮಗನನ್ನೇ ತಾಯಿಯೊಬ್ಬಳು ಬರ್ಬರವಾಗಿ ಹತ್ಯೆಗೈದಿದ್ದಾಳೆ. ಉತ್ತರಪ್ರದೇಶದ ಆಗ್ರಾದಲ್ಲಿ ಘಟನೆ ಈ ಘಟನೆ ನಡೆದಿದ್ದು, ಯಶೋಧಾ ಎಂಬಾಕೆ ಮಗನನ್ನು ಕೊಂದು ಮೂರು ದಿನಗಳ ಕಾಲ ಶವವನ್ನು ಮುಚ್ಚಿಟ್ಟಿದ್ದಾಳೆ. ಇದೀಗ ಆಕೆ ಮತ್ತು ಆಕೆಯ ಮೈದುನ ಭಾನು ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆಗ್ರಾದ ಪಿನಾಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನಯಾಪುರ್ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಆಗ್ರಾ ಜಿಲ್ಲೆ, ಪೊಲೀಸ್ ಉಪ ಕಮಿಷನರ್ (ಡಿಸಿಪಿ) ಅತುಲ್ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದು, ಯಶೋದಾ ತನ್ನ ಮೈದುನ ಭಾನು ಜೊತೆ ಪ್ರೇಮ ಸಂಬಂಧ ಹೊಂದಿದ್ದಳು. ಇವರಿಬ್ಬರು ಜತೆಗಿರುವುದನ್ನು ಆಕೆಯ ಮಗ ರೌನಕ್ ನೋಡಿದ್ದ. ಎಲ್ಲಿ ತಮ್ಮ ಅಕ್ರಮ ಸಂಬಂಧದ ಬಗ್ಗೆ ಮಗ ಬಾಯ್ಬಿಡುತ್ತಾನೋ ಎಂದು ಹೆದರಿದ ಯಶೋದಾ ಮಗನ ಮೇಲೆ ಹರಿತವಾದ ಆಯುಧದಿಂದ ಚುಚ್ಚಿದ್ದಾಳೆ.
ಗಂಭೀರವಾಗಿ ಗಾಯಗೊಂಡಿದ್ದ ರೌನಕ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ನಂತರ ಇಬ್ಬರೂ ರೌನಕ್ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ನೆರೆಹೊರೆಯವರಿಗೆ ತಿಳಿಸಿದ್ದಾರೆ. ಇಬ್ಬರೂ ರೌನಕ್‌ನ ಶವವನ್ನು ಮನೆಯ ಹಿಂದೆ ಎಸೆದಿದ್ದರು. ಆದರೆ ಸೋಮವಾರ ಬೆಳಗ್ಗೆ ರೌನಕ್‌ನ ಶವ ಪತ್ತೆಯಾಗಿದ್ದು, ನಂತರ ಆಗ್ರಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಡಿಸಿಪಿ ಹೇಳಿದರು.
ಇನ್ನು ರೌನಕ್ ತಂದೆ ಪ್ರಜಾಪತಿ ಹಲ್ವಾಯಿ ಸೂರತ್‌ನಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರ ಪತ್ನಿ, ಮಕ್ಕಳು, ಸಹೋದರ ಮತ್ತು ಇತರ ಸಂಬಂಧಿಕರು ನಯಾಪುರ್ ಗ್ರಾಮದಲ್ಲಿ ವಾಸವಾಗಿದ್ದಾರೆ.ಇನ್ನು ರೌನಕ್ ಅವರ ಮುಖದ ಮೇಲೆ ಗಾಯದ ಗುರುತುಗಳಿವೆ. ಆಗ್ರಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಸಚಿವ ಧರ್ಮವೀರ್ ಪ್ರಜಾಪತಿ ಮೃತ ಮಗುವಿನ ಸಂಬಂಧಿಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಈ ಸುದ್ದಿಯನ್ನೂ ಓದಿ: Murder Case: ಕೊಲೆಯಾದ ಬಾಲಕಿಯ ಶವಕ್ಕೆ 18 ವರ್ಷಗಳ ಬಳಿಕ ಅಂತ್ಯಸಂಸ್ಕಾರ!
ಅಕ್ರಮ ಸಂಬಂಧ ಎನ್ನುವುದು ದಂಪತಿ ನಡುವಿನ ಸಂಬಂಧ ಹಾಳುಮಾಡುವುದಲ್ಲದೇ ಕೆಲವೊಮ್ಮೆ ಜೀವ ಬಲಿ ತೆಗೆದುಕೊಳ್ಳುತ್ತದೆ. ಇಂತಹ ಅಕ್ರಮ ಸಂಬಂಧ ಮೂರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ ಘಟನೆ ಕಳೆದ ತಿಂಗಳು ರಾಜಸ್ಥಾನದ ಹನುಮಾನ್‍ಗಢ ಜಿಲ್ಲೆಯ ರಾವತ್‌ಸರ್‌ನಲ್ಲಿ ನಡೆದಿತ್ತು. ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ತನ್ನ ತಾಯಿಯ ಕುಟುಂಬದವರ ಜೊತೆ ಸೇರಿ ಪತಿಗೆ ಮಾನಸಿಕ ಚಿತ್ರಹಿಂಸೆ ನೀಡಿದ ಕಾರಣ ಪತಿ ತನ್ನ ಇಬ್ಬರು ಗಂಡು ಮಕ್ಕಳ ಜೊತೆ ಆತ್ಮಹತ್ಯೆ(Self Harming) ಮಾಡಿಕೊಂಡಿದ್ದ.
ಮೃತನನ್ನು ವಿನೋದ್ ಕುಮಾರ್ ಎಂದು ಗುರುತಿಸಲಾಗಿದೆ. ಹಾಗೇ ಅವರ ಜೊತೆ ಸಾವನಪ್ಪಿದ ನತದೃಷ್ಟ ಮಕ್ಕಳನ್ನು 7 ವರ್ಷದ ಪಾರ್ಥ್ ಮತ್ತು 4 ವರ್ಷದ ಮನ್ವೀರ್ ಎಂಬುದಾಗಿ ಗುರುತಿಸಲಾಗಿದೆ.