Friday, 27th December 2024

Muslim Population: 2050ರ ವೇಳೆಗೆ ಭಾರತದಲ್ಲಿ ಇರಲಿದ್ದಾರೆ ಅತೀ ಹೆಚ್ಚು ಮುಸ್ಲಿಮರು; ಹಿಂದೂಗಳ ಜನಸಂಖ್ಯೆ ಎಷ್ಟಾಗಲಿದೆ?

Muslim Population

ಹೊಸದಿಲ್ಲಿ: ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತ. ಇಲ್ಲಿ ವಿವಿಧ ಭಾಷೆ, ಜಾತಿ, ಧರ್ಮಗಳಿವೆ. ಆಚಾರ-ವಿಚಾರ, ಸಂಸ್ಕೃತಿಯಲ್ಲಿ ವೈವಿಧ್ಯತೆ ಇದೆ. ಅದಾಗ್ಯೂ ಹಿಂದೂ ಧರ್ಮದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾದರೆ ಸುಮಾರು 25 ವರ್ಷ ಕಳೆದ ಬಳಿಕ ಚಿತ್ರಣ ಏನಾಗಲಿದೆ? 2050ರಲ್ಲಿ ಭಾರತದಲ್ಲಿ ಮುಸ್ಮಿಮರ ಜನಸಂಖ್ಯೆ ಎಷ್ಟಾಗಲಿದೆ? ಇಲ್ಲಿದೆ ಈ ಪ್ರಶ್ನೆಗಳಿಗೆ ಉತ್ತರ (Muslim Population).

ಪ್ಯೂ ರಿಸರ್ಚ್‌ ಸೆಂಟರ್ (Pew Research Center, India) ಪ್ರಕಟಿಸಿದ ವರದಿಯಲ್ಲಿ 2050ರ ವೇಳೆಗೆ ಭಾರತವು ಇಂಡೋನೇಷ್ಯಾವನ್ನು ಹಿಂದಿಕ್ಕಿ ಅತೀ ಹೆಚ್ಚು ಮುಸ್ಲಿಮರನ್ನು ಹೊಂದಿರುವ ದೇಶವಾಗಲಿದೆ ಎಂದು ತಿಳಿಸಿದೆ. ಆ ವೇಳೆ ಇಲ್ಲಿ ಸುಮಾರು 311 ಮಿಲಿಯನ್‌ (31.1 ಕೋಟಿ) ಮುಸ್ಲಿಮರು ಇರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇನ್ನು ಪಾಕಿಸ್ತಾನ ಈ ಪಟ್ಟಿಯಲ್ಲಿ 2ನೇ ಸ್ಥಾನ ಪಡೆಯಲಿದ್ದು, ಅಲ್ಲಿ ಮುಸ್ಲಿಮರ ಜನಸಂಖ್ಯೆ 273 ಮಿಲಿಯನ್‌ (27.3 ಕೋಟಿ)ಗೆ ತಲುಪಲಿದೆ. ಈಗ ಅತೀ ಹೆಚ್ಚು ಮುಸ್ಮಿಮರನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ 2050ರ ವೇಳೆಗೆ ಜನಸಂಖ್ಯೆ 257 ಮಿಲಿಯನ್‌ (25.7 ಕೋಟಿ)ಗೆ ತಲುಪಿ 3ನೇ ಸ್ಥಾನಕ್ಕೆ ಕುಸಿಯಲಿದೆ.

ಹಿಂದೂ 3ನೇ ಅತೀ ದೊಡ್ಡ ಧರ್ಮ

ಇದೇ ವೇಳೆಗೆ ಹಿಂದೂ ವಿಶ್ವದ 3ನೇ ಅತೀ ದೊಡ್ಡ ಧರ್ಮವಾಗಿ ಹೊರ ಹೊಮ್ಮಲಿದೆ. ಇನ್ನು 2050ರ ವೇಳೆಗೆ ಜಾಗತಿಕವಾಗಿ ಮುಸ್ಲಿಮರ ಜನಸಂಖ್ಯೆ ಶೇ. 11ರಷ್ಟು ಹೆಚ್ಚಾಗಲಿದೆ. ಭಾರತದಲ್ಲಿ 103 ಕೋಟಿ ಹಿಂದೂಗಳು ಇರಲಿದ್ದಾರೆ. ಆ ಮೂಲಕ ದೇಶದಲ್ಲಿ ಹಿಂದೂಗಳು ಅಗ್ರಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಭಾರತದಲ್ಲಿ 4 ಮಂದಿಯ ಪೈಕಿ ಮೂವರು ಹಿಂದೂಗಳೇ ಆಗಿರಲಿದ್ದಾರೆ.

ಕಾರಣವೇನು?

ಹೆಚ್ಚಿನ ಫಲವತ್ತತೆಯ ಪ್ರಮಾಣದಿಂದಾಗಿ ಭಾರತದಲ್ಲಿ ಮತ್ತು ಜಾಗತಿಕವಾಗಿ ಮುಸ್ಲಿಂ ಜನಸಂಖ್ಯೆಯು ವೇಗವಾಗಿ ಬೆಳೆಯಲಿದೆ. 2010ರಲ್ಲಿ ಮುಸ್ಲಿಮರ ಒಟ್ಟು ಜನಸಂಖ್ಯೆಯ ಶೇ. 14.4ರಷ್ಟಿದ್ದರೆ 2050ರ ವೇಳೆಗೆ ಇದು ಶೇ. 18.4ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಭಾರತದಲ್ಲಿ ಪ್ರತಿ ಮುಸ್ಲಿಂ ಮಹಿಳೆಯರು ಸರಾಸರಿ 3.2 ಮಕ್ಕಳನ್ನು ಹೊಂದಿದ್ದರೆ, ಹಿಂದೂ ಮಹಿಳೆಯರು ಸರಾಸರಿ 2.5 ಮಕ್ಕಳನ್ನು ಮತ್ತು ಕ್ರಿಶ್ಚಿಯನ್ ಮಹಿಳೆಯರು ಸರಾಸರಿ 2.3 ಮಕ್ಕಳನ್ನು ಹೊಂದಿದ್ದಾರೆ.

ಭಾರತದಲ್ಲಿನ ಹಿಂದೂ ಜನಸಂಖ್ಯೆಯು ಭಾರತ, ಪಾಕಿಸ್ತಾನ, ಇಂಡೋನೇಷ್ಯಾ, ನೈಜೀರಿಯಾ ಮತ್ತು ಬಾಂಗ್ಲಾದೇಶ ಸೇರಿದಂತೆ ಅತಿದೊಡ್ಡ ಮುಸ್ಲಿಂ ಬಹುಸಂಖ್ಯಾತ ದೇಶಗಳ ಮುಸ್ಲಿಂ ಜನಸಂಖ್ಯೆಯನ್ನು ಮೀರಿಸಲಿದೆ. ಪ್ರಸ್ತುತ ಭಾರತದ ಒಟ್ಟು ಜನಸಂಖ್ಯೆಯ ಶೇ. 2.5ರಷ್ಟಿರುವ ಕ್ರಿಶ್ಚಿಯನ್ ಜನಸಂಖ್ಯೆಯು 2050ರ ವೇಳೆಗೆ ಶೇ. 2.3ಕ್ಕೆ ಇಳಿಯುತ್ತದೆ ಎಂದು ವರದಿ ತಿಳಿಸಿದೆ.

ವಿಶ್ವಾದ್ಯಂತ ಹಿಂದೂ ಜನಸಂಖ್ಯೆಯು 2050ರ ವೇಳೆಗೆ ಸುಮಾರು ಶೇ. 34ಕ್ಕೆ ತಲುಪಲಿದೆ. ಈಗಾಗಲೇ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳು ಶೇ. 14.9ರಷ್ಟಿದ್ದಾರೆ. ಕ್ರಿಶ್ಚಿಯನ್ನರು ಸೇ. 31.4 ಮತ್ತು ಮುಸ್ಲಿಮರು
ಶೇ. 29.7ರಷ್ಟು ಇದ್ದಾರೆ. ವಿಶ್ವದ ಕೆಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ 2050ರ ವೇಳೆಗೆ ಹಿಂದೂಗಳ ಸಂಖ್ಯೆ ತೀವ್ರಗತಿಯಲ್ಲಿ ಇಳಿಕೆಯಾಗಲಿದೆ.

ಈ ಸುದ್ದಿಯನ್ನೂ ಓದಿ: Physical Assault: ಅಣ್ಣಾ ವಿವಿ ಅತ್ಯಾಚಾರ ಪ್ರಕರಣ; ಉದಯ್‌ ನಿಧಿ ಸ್ಟಾಲಿನ್‌ ಜತೆ ಆರೋಪಿ ಫೋಟೊ! ಬಿಜೆಪಿ ಕಿಡಿ