Saturday, 21st December 2024

Narendra Modi: 101 ವರ್ಷದ ಮಾಜಿ ಐಎಫ್‌ಎಸ್‌ ಅಧಿಕಾರಿಯನ್ನು ಭೇಟಿಯಾಗುವಂತೆ ಕೇಳಿದ ಮೊಮ್ಮಗಳಿಗೆ ಮೋದಿ ಹೇಳಿದ್ದೇನು?

Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ಕುವೈತ್‌ಗೆ (Kuwait) ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಅಲ್ಲಿ ದೇಶದ ಉನ್ನತ ನಾಯಕರನ್ನು ಭೇಟಿಯಾಗಲಿದ್ದಾರೆ. 43 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಕುವೈತ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ನಡುವೆ ಪ್ರಧಾನಿ, 101 ವರ್ಷ ಮಾಜಿ ಐಎಫ್‌ಎಸ್‌ ಅಧಿಕಾರಿಯೊಬ್ಬರನ್ನು ಭೇಟಿಯಾಗಿದ್ದಾರೆ.

ನರೇಂದ್ರ ಮೋದಿ ಕುವೈತ್‌ಗೆ ಆಗಮಿಸುತ್ತಿದ್ದಾರೆ ಎಂದು ತಿಳಿದ ನಂತರ ಮಾಜಿ ಐಎಫ್‌ಎಸ್‌ ಅಧಿಕಾರಿ ಮಂಗಲ್‌ ಸೈನ್‌ ಹಂದಾ ಅವರ ಮೊಮ್ಮಗಳು ಶ್ರೇಯಾ ಜುನೇಜಾ  ಅವರು ಎಕ್ಸ್‌ನಲ್ಲಿ ನನ್ನ ಅಜ್ಜ ಮಾಜಿ ಐಎಫಸ್‌ ಅಧಿಕಾರಿಯಾಗಿದ್ದು, ನಿಮ್ಮನ್ನು ಕಾಣಬೇಕೆಂದು ಬಯಸಿದ್ದಾರೆ. ಅವರು ನಿಮ್ಮ ಅಭಿಮಾನಿಯಾಗಿದ್ದಾರೆ, ನಾಳೆ ಅನಿವಾಸಿ ಭಾರತೀಯರೊಂದಿದೆ ನಡೆಯುವ ಸಂವಾದದಲ್ಲಿ ನೀವು ಅವರೊಂದಿಗೆ ಮಾತನಾಡಬಹುದೇ ಎಂದು ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ ಖಂಡಿತವಾಗಿಯೂ, ನಾನು ಇಂದು ಕುವೈತ್‌ನಲ್ಲಿ ಮಂಗಲ್‌ ಸೈನ್‌ ಹಂದಾ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಮಂಗಲ್ ಸೈನ್ ಹಂದಾ ಅವರು ಪ್ರಧಾನಿ ಮೋದಿಯವರ ಬಹುಕಾಲದ ಅಭಿಮಾನಿಯಾಗಿದ್ದಾರೆ. 2023ರಲ್ಲಿ, ಹಂಡಾ ಅವರ 100ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿಯವರಿಂದ ವೈಯಕ್ತಿಕ ಪತ್ರವನ್ನು ಸ್ವೀಕರಿಸಿದ್ದರು. ಪತ್ರದಲ್ಲಿ ಮೋದಿ ಅವರು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಹಂದಾ ಅವರ ಕೊಡುಗೆಗಳನ್ನು ಶ್ಲಾಘಿಸಿದ್ದರು ಮತ್ತು ಅವರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಹಾರ್ದಿಕ ಶುಭಾಶಯಗಳನ್ನು ವ್ಯಕ್ತಪಡಿಸಿದ್ದರು.

ಈ ಬಗ್ಗೆ ಹಂದಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪ್ರಧಾನಿಗೆ ಕೃತಜ್ಞತೆಯನ್ನು ತಿಳಿಸಿದ್ದರು. “ನನ್ನ 100ನೇ ಹುಟ್ಟುಹಬ್ಬದಂದು ಅವರ ರೀತಿಯ ಶುಭಾಶಯಗಳನ್ನು ಕಳುಹಿಸಿದ್ದಕ್ಕಾಗಿ ನಮ್ಮ ಗೌರವಾನ್ವಿತ ಪ್ರಧಾನಿಯವರಿಗೆ ಕೃತಜ್ಞತೆಗಳು ಅವರ ನಾಯಕತ್ವದಲ್ಲಿ ಭಾರತವು ಬೆಳೆಯಲು ಮತ್ತು ಪ್ರಗತಿಯನ್ನು ಮುಂದುವರಿಸಲು ಸಾಧ್ಯ” ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ : Narendra Modi: ಪ್ರಧಾನಿ ನರೇಂದ್ರ ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ