Friday, 22nd November 2024

Narendra Modi: ಮೋದಿ 23 ವರ್ಷಗಳ ರಾಜಕೀಯ ಜೀವನ; ದೇಶದ ಅಭಿವೃದ್ಧಿಗೆ ಗುಜರಾತ್ ಮಾದರಿಯೇ ಅಡಿಪಾಯ

Narendra Modi

2001ರಲ್ಲಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ (gujarat cm) ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ರಾಜಕೀಯ ಜೀವನ ಪ್ರಾರಂಭವಾಯಿತು. ಗುಜರಾತ್ (Gujarat Model) ಮುಖ್ಯಮಂತ್ರಿಯಾಗಿದ್ದ ಅವರು ತಮ್ಮ ಅಧಿಕಾರಾವಧಿಯಲ್ಲಿ ಅನೇಕ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಿಗೆ ಅಡಿಪಾಯ ಹಾಕಿದರು.

ಆರ್ಥಿಕ ಸುಧಾರಣೆ, ಪರಿಸರ ಸಂರಕ್ಷಣೆಯ ಮೂಲಕ ದೇಶದ ಗಮನ ಸೆಳೆದ ಅವರ “ಗುಜರಾತ್ ಮಾದರಿ” ಯೋಜನೆಗಳನ್ನು ಬಳಿಕ ದೇಶಾದ್ಯಂತ ವಿಸ್ತರಿಸಲಾಯಿತು. ದೇಶದ ಪರಂಪರೆಯನ್ನು ಉಳಿಸಿಕೊಂಡು ಅಭಿವೃದ್ಧಿ ಕಡೆಗೆ ಗಮನ ಹರಿಸಿರುವ ನರೇಂದ್ರ ಮೋದಿ ಅವರು ದೇಶವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಲು ಹಲವಾರು ಹೊಸಹೊಸ ಯೋಜನೆಗಳನ್ನು ಪರಿಚಯಿಸಿದರು.

Narendra Modi

ಗುಜರಾತ್ ಮಾದರಿಯಲ್ಲಿ ರಾಷ್ಟ್ರೀಯ ಕಾರ್ಯಕ್ರಮ

ಸುಜಲಾಂ ಸುಫಲಾಮ್ ಜಲ ಅಭಿಯಾನದ ಮೂಲಕ ಜಲ ಸಂರಕ್ಷಣೆ, ಜ್ಯೋತಿ ಗ್ರಾಮ ಯೋಜನೆಯಡಿ ವಿದ್ಯುತ್ ಪೂರೈಕೆ, ನಿರ್ಮಲ್ ಗುಜರಾತ್ ಅಭಿಯಾನದ ಮೂಲಕ ನೈರ್ಮಲ್ಯ ಸುಧಾರಣೆಗಳಂತಹ ಹಲವಾರು ಕಲ್ಯಾಣ ಕಾರ್ಯಕ್ರಮಗಳು ಮೋದಿಯವರ ನಾಯಕತ್ವದಲ್ಲಿ ಗುಜರಾತ್‌ನಲ್ಲಿ ತರಲಾಗಿದ್ದು, ಇದನ್ನು ಬಳಿಕ ದೇಶಾದ್ಯಂತ ವಿಸ್ತರಿಸಲಾಗಿದೆ. ಜಲ ಜೀವನ್ ಮಿಷನ್, ಸೌಭಾಗ್ಯ ಯೋಜನೆ ಮತ್ತು ಸ್ವಚ್ಛ ಭಾರತ್ ಮಿಷನ್‌ನಂತಹ ಯೋಜನೆಗಳು ವಿಶ್ವದ ಗಮನ ಸೆಳೆದಿದೆ.

ಜನ ಸಹಭಾಗಿತ್ವ ಮತ್ತು ಜನಪರ ಆಡಳಿತ

ಮೋದಿಯವರ ಪ್ರಮುಖ ತತ್ತ್ವಗಳಲ್ಲಿ ಜನ್ ಭಾಗಿದಾರಿ (ಜನರ ಸಹಭಾಗಿತ್ವ) ಅಥವಾ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯು ಒಂದು ವಿಶೇಷ ಪರಿಕಲ್ಪನೆಯಾಗಿದೆ. ಇದು “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್” ಆಗಿ ವಿಕಸನಗೊಂಡಿತು. ಈ ಮಾದರಿ ಮೂಲಕ ಸಮಾಜದ ಅಂಚಿನಲ್ಲಿರುವ ವರ್ಗಗಳನ್ನು ತಲುಪುವ ಮತ್ತು ಮೇಲಕ್ಕೆತ್ತುವ ಗುರಿಯನ್ನು ಹೊಂದಿರುವ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

Narendra Modi

ಅಭಿವೃದ್ಧಿ ಮತ್ತು ಪರಂಪರೆ

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವು ಆಧುನೀಕರಣವನ್ನು ಸಾಂಸ್ಕೃತಿಕ ಸಂರಕ್ಷಣೆಯೊಂದಿಗೆ ಸಮತೋಲನಗೊಳಿಸುವತ್ತ ಗಮನಹರಿಸಿದೆ. ಕಾಶಿ ವಿಶ್ವನಾಥ ಕಾರಿಡಾರ್, ರಾಮ ಮಂದಿರ ನಿರ್ಮಾಣ ಮತ್ತು 640ಕ್ಕೂ ಹೆಚ್ಚು ಕಲಾಕೃತಿಗಳ ಭಾರತಕ್ಕೆ ವಾಪಸಾತಿ ಸೇರಿದಂತೆ ಹಲವು ಯೋಜನೆಗಳು ಅಭಿವೃದ್ಧಿಯ ಪರಂಪರೆಯ ಸಂರಕ್ಷಣೆಯೊಂದಿಗೆ ಸಂಯೋಜಿಸುವ ಅವರ ಆಡಳಿತದ ಪ್ರಯತ್ನಗಳಾಗಿವೆ.

ಎಲ್ಲರಿಗೂ ನೀರು

ಗುಜರಾತ್‌ನಲ್ಲಿ ಮೋದಿಯವರ ಅಧಿಕಾರಾವಧಿಯಿಂದ ಪ್ರೇರಿತವಾದ ಅಸಾಧಾರಣ ಕಾರ್ಯಕ್ರಮವೆಂದರೆ ಜಲ ಜೀವನ್ ಮಿಷನ್. ಸುಜಲಾಮ್ ಸುಫಲಾಮ್ ಜಲ ಅಭಿಯಾನದ ಯಶಸ್ಸಿನಿಂದ ಇದನ್ನು 2024ರ ಆಗಸ್ಟ್ ವೇಳೆಗೆ ಭಾರತದ ಸುಮಾರು 12 ಕೋಟಿ ಗ್ರಾಮೀಣ ಕುಟುಂಬಗಳಿಗೆ ಸುರಕ್ಷಿತ ನಲ್ಲಿ ನೀರನ್ನು ಒದಗಿಸಿದೆ. ಇದರ ಮೂಲಕ ನೀರಿನಿಂದ ಹರಡುವ ರೋಗಗಳನ್ನು ಕಡಿಮೆ ಮಾಡಿ ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡುವ ಉದ್ದೇಶವನ್ನು ಹೊಂದಲಾಗಿದೆ.

Narendra Modi

ಎಲ್ಲರಿಗೂ ವಿದ್ಯುತ್

24×7 ವಿದ್ಯುಚ್ಛಕ್ತಿಯನ್ನು ಒದಗಿಸಲು ಮೋದಿಯವರ ದೂರದೃಷ್ಟಿ ಯೋಜನೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಪ್ರಾರಂಭವಾಯಿತು. ಇದು ರಾಷ್ಟ್ರೀಯ ಸೌಭಾಗ್ಯ ಯೋಜನೆಯಾಗಿ ವಿಸ್ತರಿಸಿತು. ಈ ಕಾರ್ಯಕ್ರಮದ ಮೂಲಕ 2.86 ಕೋಟಿ ಕುಟುಂಬಗಳಿಗೆ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗಿದೆ. ಇದು ಲಕ್ಷಾಂತರ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಡೀಸೆಲ್ ಪಂಪ್‌ಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಸುಸ್ಥಿರತೆಯನ್ನು ಉತ್ತೇಜಿಸುತ್ತಿದೆ.

ಹಸಿವಿನ ವಿರುದ್ಧ ಹೋರಾಟ

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ ಲಕ್ಷಾಂತರ ಜನರ ಜೀವನಾಡಿಯಾಗಿದೆ. ಕಡಿಮೆ ಆದಾಯ ಹೊಂದಿರುವ ಕುಟುಂಬಗಳನ್ನು ಬೆಂಬಲಿಸಿದ ಗುಜರಾತ್‌ನ ಗರೀಬ್ ಕಲ್ಯಾಣ್ ಯೋಜನೆ ಇಂದು ದೇಶದ 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವುದನ್ನು ಮುಂದುವರೆಸಿದೆ. ದೇಶದಲ್ಲಿ ಆಹಾರ ಭದ್ರತೆಯನ್ನು ಇದು ಹೆಚ್ಚಿಸಿದೆ.

Narendra Modi

ಸ್ವಚ್ಛ ಭಾರತ್ ಮಿಷನ್

2014ರಲ್ಲಿ ಪ್ರಾರಂಭವಾದ ಸ್ವಚ್ಛ ಭಾರತ್ ಮಿಷನ್ ಮೋದಿಯವರ ನಿರ್ಮಲ್ ಗುಜರಾತ್ ಡ್ರೈವ್‌ನಿಂದ ಸ್ಫೂರ್ತಿ ಪಡೆದಿದೆ. ಈ ಮಿಷನ್ ಭಾರತದಾದ್ಯಂತ ಸ್ವಚ್ಛತೆಯ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದೆ.

ಮಹಿಳೆಯರು ಮತ್ತು ರೈತರ ಸಬಲೀಕರಣ

ಮಹಿಳೆಯರ ಸಬಲೀಕರಣಕ್ಕೆ ನಮೋ ಡ್ರೋನ್ ದೀದಿ ಮತ್ತು ರೈತರ ಸಬಲೀಕರಣಕ್ಕೆ ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಮೋದಿ ಅವರ ಗುಜರಾತ್‌ನ ಕೃಷಿ ಮಹೋತ್ಸವ ಮತ್ತು ಮಿಷನ್ ಮಂಗಲಂನಿಂದ ಸ್ಫೂರ್ತಿ ಪಡೆದಿದೆ. ಈ ಕಾರ್ಯಕ್ರಮಗಳು ಆಧುನಿಕ ಕೃಷಿ ತಂತ್ರಗಳನ್ನು ಉತ್ತೇಜಿಸಿದವು ಮತ್ತು ಮಹಿಳಾ ಉದ್ಯಮಿಗಳಿಗೆ ಕಿರುಬಂಡವಾಳ ಬೆಂಬಲವನ್ನು ಒದಗಿಸಿದವು. ಸ್ಟ್ಯಾಂಡ್-ಅಪ್ ಇಂಡಿಯಾದಂತಹ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಅಡಿಪಾಯ ಹಾಕಿತು.

ಜಾಗತಿಕ ಮಟ್ಟದಲ್ಲಿ ಭಾರತ

ಮೋದಿ ಅವರ ಸುಸ್ಥಿರ ಅಭಿವೃದ್ಧಿ ಯೋಜನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಸುಸ್ಥಿರ ಅಭಿವೃದ್ಧಿಯ ನಾಯಕನನ್ನಾಗಿ ಇರಿಸಿದೆ. ಕಾಪ್ 26ನಲ್ಲಿ ಅವರು ಪರಿಸರಕ್ಕಾಗಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿದರು. ಹವಾಮಾನ ಬದಲಾವಣೆಯನ್ನು ಎದುರಿಸಲು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಜನ ಸಮುದಾಯವನ್ನು ಒತ್ತಾಯಿಸಿದರು. ಪರಿಸರ ಸಂರಕ್ಷಣೆಗೆ ಭಾರತದ ಬದ್ಧತೆಯನ್ನು ಈ ಮೂಲಕ ಮೋದಿ ಬಲಪಡಿಸಿದರು.

Farooq Abdullah: ಕಾಶ್ಮೀರದಲ್ಲಿ ಮುಫ್ತಿಯೇ ಕಿಂಗ್‌ ಮೇಕರ್‌? PDP ಜತೆ ಮೈತ್ರಿಗೆ ಮುಂದಾದ ನ್ಯಾಷನಲ್ ಕಾನ್ಫರೆನ್ಸ್

Narendra Modi

ವಿಕಸಿತ ಭಾರತ 2047

ವಿಕಸಿತ ಭಾರತ 2047 ಮೂಲಕ ಮೋದಿಯವರು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪಿಸುವ ಗುರಿಯನ್ನು ಹೊಂದಿದ್ದಾರೆ. ಇದು ಭಾರತ ಸ್ವಾತಂತ್ರ್ಯದ 100 ವರ್ಷಗಳನ್ನು ಗುರುತಿಸುತ್ತದೆ. ವಿಕಸಿತ ಭಾರತವು ದೀರ್ಘಾವಧಿಯ ಅಭಿವೃದ್ಧಿ ಗುರಿಗಳನ್ನು ಹೊಂದಿದೆ. ಈ ಮೂಲಕ ಮೂಲಸೌಕರ್ಯ, ಆರ್ಥಿಕ ಬೆಳವಣಿಗೆ ಮತ್ತು ಭಾರತದ ಜಾಗತಿಕ ಸ್ಥಾನಮಾನವನ್ನು ಸುಧಾರಿಸುವ ಉದ್ದೇಶವಿದೆ.