Friday, 22nd November 2024

Navaratri Colour Styling: ನವರಾತ್ರಿಯ 8ನೇ ದಿನಕ್ಕೆ ಉಲ್ಲಾಸ ಮೂಡಿಸುವ ಗುಲಾಬಿ ಬಣ್ಣದ ಡಿಸೈನರ್‌ವೇರ್ಸ್‌‌ಗೆ ಸೈ ಎನ್ನಿ!

Navaratri Colour Styling

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವರಾತ್ರಿಯ 8ನೇ ದಿನ ಬಹುತೇಕ ಯುವತಿಯರ ಹಾಗೂ ಮಾನಿನಿಯರ ಫೇವರೇಟ್‌ ಗುಲಾಬಿ ವರ್ಣಕ್ಕೆ ಪ್ರಾಮುಖ್ಯತೆ (Navaratri Colour Styling). ನೋಡಲು ಆಹ್ಲಾದಕರ ಎನಿಸುವ ಈ ವರ್ಣದಲ್ಲಿ ಹೆಚ್ಚು ಸ್ಟೈಲಿಂಗ್‌ ಟಿಪ್ಸ್ ಪಾಲಿಸದೆಯೂ ಆಕರ್ಷಕವಾಗಿ ಕಾಣಿಸಬಹುದು ಎಂದರೇ ಅತಿಶಯೋಕ್ತಿಯಾಗದು!

ದೇವಿ ಮಹಾಗೌರಿಯನ್ನು ಆರಾದಿಸುವ ದಿನವಾಗಿದ್ದು, ಗುಲಾಬಿ ವರ್ಣದ ಸೀರೆಯಲ್ಲಿ ಅಲಂಕರಿಸಿ ಪೂಜಿಸುವ ವಿಶೇಷ ದಿನವಿದು.

ಚಿತ್ರಕೃಪೆ: ಪಿಕ್ಸೆಲ್‌

ಯುವತಿಯರ ಫೇವರೇಟ್‌ ಬಣ್ಣವಿದು: ಪ್ರತಿಷ್ಠಿತ ಸಂಸ್ಥೆಯೊಂದರ ಕಲರ್‌ ಪ್ಯಾಲೆಟ್‌ ಫ್ಯಾಷನ್‌ ಕುರಿತ ಸಮೀಕ್ಷೆಯೊಂದರ ಪ್ರಕಾರ, ಭಾರತೀಯ ಮಹಿಳೆಯರ ಫೆವರೆಟ್‌ ಲಿಸ್ಟ್‌ನಲ್ಲಿ ರಾಯಲ್‌ ಬ್ಲೂ ಹಾಗೂ ಗುಲಾಬಿ ವರ್ಣ ಟಾಪ್‌ ಲಿಸ್ಟ್ನಲ್ಲಿದೆಯಂತೆ. ಇನ್ನು ಗುಲಾಬಿ ವರ್ಣದಲ್ಲೆ, ಲೆಕ್ಕವಿಲ್ಲದಷ್ಟು ತಿಳಿ ಹಾಗೂ ಡಾರ್ಕ್‌ ಶೇಡ್‌ಗಳ ಡಿಸೈನರ್‌ವೇರ್‌ಗಳು ಬಿಡುಗಡೆಯಾಗಿವೆಯಂತೆ.

ಕಲರ್‌ಫುಲ್‌ ಪಿಂಕ್‌ ಲವ್‌: ರಾಣಿ ಪಿಂಕ್‌, ಕ್ಯಾಂಡಿ ಪಿಂಕ್‌, ಮ್ಯಾಗ್ನೆಟಾ ಪಿಂಕ್‌, ಮೆಜಂತಾ ಪಿಂಕ್‌, ಲೈಟ್‌ ಪಿಂಕ್‌, ಬಬಲ್‌ಗಮ್‌ ಪಿಂಕ್‌, ತಿಳಿ ಗುಲಾಬಿ, ಪಾಸ್ಟೆಲ್‌ ಪಿಂಕ್‌ ಹೀಗೆ ನಾನಾ ಇಂಗ್ಲೇಷ್‌ ಪಿಂಕ್‌ ಕಲರ್‌ಗಳು ಇದೀಗ ನಮ್ಮ ದೇಸಿ ಫ್ಯಾಷನ್‌ವೇರ್‌ಗಳೊಂದಿಗೆ ಸೇರಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಗುಲಾಬಿ ಬಣ್ಣದ ಮನಮೋಹಕ ಡಿಸೈನರ್‌ವೇರ್ಸ್: ಸಾದಾ ಪಿಂಕ್‌ ಶೇಡ್‌ಗಳು ಮಾತ್ರವಲ್ಲ, ಪ್ರಿಂಟೆಡ್‌ ಹಾಗೂ ಮಾನೋಕ್ರೋಮ್‌ ಶೇಡ್‌ನ ಗಾಗ್ರಾ, ಶರಾರ, ಲೆಹೆಂಗಾ, ಚೂಡಿದಾರ್‌, ಅನಾರ್ಕಲಿ, ಚನಿಯಾ , ಸಲ್ವಾರ್‌ ಕಮೀಝ್‌ಗಳು ಟ್ರೆಂಡ್‌ನಲ್ಲಿವೆ. ಇವು ಯಾವುದೇ ವಯಸ್ಸಿನ ಮಾನಿನಿಯರಿಗೂ ಯಂಗ್‌ ಲುಕ್‌ ನೀಡುತ್ತವೆ. ಹೆಚ್ಚು ಮೇಕಪ್‌ ಮಾಡುವ ಅಗತ್ಯವಿರುವುದಿಲ್ಲ!

ಸಸ್ಟೈನಬಲ್‌ ಫ್ಯಾಷನ್‌ಗೆ ಸೈ ಎನ್ನಿ: ಹೌದು, ಸಸ್ಟೈನಬಲ್‌ ಫ್ಯಾಷನ್‌ಗೆ ಸೈ ಎನ್ನಿ. ನಿಮ್ಮ ಬಳಿ ಈಗಾಗಲೇ ಗುಲಾಬಿ ವರ್ಣದ ಡಿಸೈನರ್‌ವೇರ್‌ ಇದ್ದಲ್ಲಿ, ಅದಕ್ಕೆ ಹೊಸ ರೂಪ ನೀಡಿ ಧರಿಸಿ. ಹೇರ್‌ಸ್ಟೈಲ್‌ ಬದಲಿಸಿ. ಮೇಕಪ್‌ ಬದಲಿಸಿ. ದುಪಟ್ಟಾ ಬದಲಿಸಿ ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಪಿಂಕ್‌ ಸೀರೆಗಳ ಕಮಾಲ್‌: ಗುಲಾಬಿ ವರ್ಣದಲ್ಲಿ ಲಭ್ಯವಿರುವ ರೇಷ್ಮೆ ಸೀರೆ, ಸೆಮಿ ಸಿಲ್ಕ್‌, ಲೆನಿನ್‌, ಅರ್ಗಾನ್ಜಾ, ಕಾಟನ್‌, ಬನಾರಸಿ, ಟಿಶ್ಯೂ ಹೀಗೆ ನಾನಾ ಫ್ಯಾಬ್ರಿಕ್‌ನ ಸೀರೆಗಳನ್ನು ಪರ್ಸನಾಲಿಟಿಗೆ ತಕ್ಕಂತೆ ಉಡಬಹುದು.

ಗುಲಾಬಿ ವರ್ಣ ಧರಿಸುವವರು ಗಮನಿಸಬೇಕಾದ ಅಂಶಗಳು

  • ಗುಲಾಬಿ ವರ್ಣದ ಡಿಸೈನರ್‌ವೇರ್‌ಗಳಿಗೆ ಆದಷ್ಟೂ ಮೇಕಪ್‌ ತಿಳಿಯಾಗಿರಬೇಕು. ಡಾರ್ಕ್ ಮೇಕಪ್‌ ಬೇಡ.
  • ತುಟಿಗೆ ಶಿಮ್ಮರಿಂಗ್‌ ಲಿಪ್‌ಸ್ಟಿಕ್‌ ಲೇಪಿಸಿ. ಕಣ್ಣಿಗೆ ಗಾಢ ಐ ಮೇಕಪ್‌ ಬೇಡ.
  • ಹೇರ್‌ಸ್ಟೈಲ್‌ ಯಾವುದಾದರೂ ಓಕೆ.
  • ಹೆವ್ವಿ ಆಭರಣಗಳನ್ನು ಧರಿಸುವುದು ಬೇಡ.
  • ತಿಳಿ ವರ್ಣದ ಉಡುಗೆಗಳಿಗೆ ಸಿಲ್ವರ್‌ ಲುಕ್‌ ನೀಡಬಹುದು.

ಈ ಸುದ್ದಿಯನ್ನೂ ಓದಿ: Navaratri Dandiya 2024: ನವರಾತ್ರಿ ಸೆಲೆಬ್ರೇಷನ್‌‌‌ನಲ್ಲಿ ದಾಂಡಿಯಾ ಮೇನಿಯಾ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)