Tuesday, 10th September 2024

ಮಾವೋವಾದಿಗಳ ನಂಟು: ದೆಹಲಿ ವಿವಿ ಮಾಜಿ ಪ್ರಾಧ್ಯಾಪಕ ದೋಷಮುಕ್ತ

ವದೆಹಲಿ: ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದ ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಮತ್ತು ಇತರ ಐವರನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ದೋಷಮುಕ್ತಗೊಳಿಸಲಾಗಿದೆ.

ಗಡ್ಚಿರೋಲಿ ನ್ಯಾಯಾಲಯವು 2017ರಲ್ಲಿ ಸಾಯಿಬಾಬಾ ಮತ್ತು ಇತರರನ್ನು ದೋಷಿ ಎಂದು ಘೋಷಿಸಿತ್ತು.

ಅಂದಿನಿಂದ ಅವರೆಲ್ಲರೂ ಜೈಲಿನಲ್ಲಿದ್ದಾರೆ. ಈ ಆರು ಜನರಲ್ಲಿ ಪಾಂಡು ನರೋಟೆ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸದ್ಯ ಸಾಯಿಬಾಬಾ ಇಂದಿಗೂ ಜೈಲಿನಲ್ಲಿದ್ದಾರೆ. ಮೇ 2014ರಲ್ಲಿ ನಕ್ಸಲೀಯರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಬಂಧನಕ್ಕೂ ಮುನ್ನ, ಪ್ರೊಫೆಸರ್ ಸಾಯಿಬಾಬಾ ಅವರು ದೆಹಲಿ ವಿಶ್ವವಿದ್ಯಾಲಯದ ರಾಮ್ ಲಾಲ್ ಆನಂದ್ ಕಾಲೇಜಿನಲ್ಲಿ ಗಾಲಿಕುರ್ಚಿಯಲ್ಲಿ ಕುಳಿತು ಇಂಗ್ಲಿಷ್ ಕಲಿಸು ತ್ತಿದ್ದರು.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಹೇಮ್ ಮಿಶ್ರಾ ಬಂಧನದ ನಂತರ ಸಾಯಿಬಾಬಾ ಮೇಲಿನ ನಿರ್ಬಂಧವನ್ನು ಬಿಗಿಗೊಳಿಸ ಲಾಗಿತ್ತು. ಛತ್ತೀಸ್‌ಗಢದ ಅಬುಜ್ಮದ್ ಅರಣ್ಯದಲ್ಲಿ ಅಡಗಿರುವ ಪ್ರೊಫೆಸರ್ ಮತ್ತು ನಕ್ಸಲೀಯರ ನಡುವೆ ತಾನು ಕೊರಿಯರ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ಹೇಮ್ ತನಿಖಾ ಸಂಸ್ಥೆಗಳ ಮುಂದೆ ಹೇಳಿಕೊಂಡಿದ್ದ. ಜಿ.ಎನ್.ಸಾಯಿಬಾಬಾ ಅವರು ಶೇ.90ರಷ್ಟು ದೈಹಿಕ ವಿಕಲಚೇತನರಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಪ್ರಕರಣದಲ್ಲಿ ಇತರ ಐವರಿಗೆ ಶಿಕ್ಷೆಯೂ ಆಗಿದೆ.

ಆಲ್ ಇಂಡಿಯಾ ಪೀಪಲ್ಸ್ ರೆಸಿಸ್ಟೆನ್ಸ್ ಫೋರಮ್ (ಎಐಪಿಆರ್‌ಎಫ್) ಕಾರ್ಯಕರ್ತನಾಗಿ ಅವರು ಕಾಶ್ಮೀರ ಮತ್ತು ಈಶಾನ್ಯ ವಿಮೋಚನಾ ಚಳವಳಿಗಳಿಗೆ ಬೆಂಬಲವಾಗಿ ದಲಿತ ಮತ್ತು ಬುಡಕಟ್ಟು ಹಕ್ಕುಗಳ ಪ್ರಚಾರಕ್ಕಾಗಿ 2 ಲಕ್ಷ ಕಿ.ಮೀ.ಗೂ ಹೆಚ್ಚು ಪ್ರಯಾಣ ಮಾಡಿದ್ದರು. ಸಾಯಿಬಾಬಾ ನಗರದಲ್ಲಿ ನೆಲೆಸಿ ರುವಾಗ ಮಾವೋವಾದಿಗಳಿಗಾಗಿ ಕೆಲಸ ಮಾಡುತ್ತಿದ್ದ ಆರೋಪ ಅವರ ಮೇಲಿತ್ತು.

Leave a Reply

Your email address will not be published. Required fields are marked *