Sunday, 15th December 2024

ಕೊರೊನಾ ಸೋಂಕಿಗೆ ಎನ್ಸಿಪಿ ಶಾಸಕ ಭರತ್ ಭಾಲ್ಕೆ ಬಲಿ

ಪುಣೆ: ಕೊರೊನಾ ಸೋಂಕಿಗೆ ಮಹಾರಾಷ್ಟ್ರದ ಪಂಡರಾಪುರ-ಮಂಗಲವೇದ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಭಾಲ್ಕೆ ಬಲಿಯಾಗಿದ್ದಾರೆ.

ಭಾಲ್ಕೆ ಅಕ್ಟೋಬರ್ 30 ರಂದು ಮನೆಗೆ ತೆರಳಿದ್ದರು ಎಂದು ಭಾಲ್ಕೆ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರು ತಿಳಿಸಿದ್ದಾರೆ.

ಭಾಲ್ಕೆ ಕಳೆದ ಚುನಾವಣೆಯಲ್ಲಿ ಎನ್ ಸಿಪಿಯಿಂದ ಆಯ್ಕೆಯಾಗಿದ್ದರು. ಹಲವು ದಿನಗಳಿಂದ ಕೊರೋನಾದಿಂದ ಬಳಲುತ್ತಿದ್ದ ಭಾಲ್ಕೆ ಪುಣೆ ಆಸ್ಪತ್ರೆಗೆ ನವೆಂಬರ್ 9 ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಸೋಂಕಿಗೆ ಬಲಿಯಾಗಿದ್ದಾರೆ. ಮತ್ತೆ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನವೆಂಬರ್ 9 ರಂದು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು.