Friday, 27th December 2024

Neet Teacher: ಥೂ… ಕರ್ಮ… ಕೋಚಿಂಗ್‌ ಕ್ಲಾಸ್‌ ಆವರಣದಲ್ಲಿ ಬಯಾಲಜಿ ಶಿಕ್ಷಕನ ಸರಸ ಸಲ್ಲಾಪ;‌ ಪೆನ್‌ಡ್ರೈವ್ ವಿಡಿಯೊ ಫುಲ್‌ ವೈರಲ್!

ಕಾನ್ಪುರ: ಉತ್ತರ ಪ್ರದೇಶದ(Uttar Pradesh) ಕಾನ್ಪುರದ (Kanpura) ಕಾಕಡಿಯೊದಲ್ಲಿ ಐ ಆ್ಯಂಡ್​ ಐ ಕೋಚಿಂಗ್‌ ಕ್ಲಾಸ್‌ನಲ್ಲಿ ಜೀವಶಾಸ್ತ್ರ(Biology) ವಿಷಯ ಬೋಧಿಸುತ್ತಿದ್ದ ಸಾಹಿಲ್ ಎಂಬ ಶಿಕ್ಷಕ ಮಾಡಬಾರದ ಕೆಲಸ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆತ ಕೋಚಿಂಗ್‌ ಕ್ಲಾಸ್‌ ಆವರಣದಲ್ಲಿ ತನ್ನ ವಿದ್ಯಾರ್ಥಿನಿಯೊಂದಿಗೆ ಸರಸ ಸಲ್ಲಾಪ ನಡೆಸಿದ್ದು, ಇದೀಗ ಇಬ್ಬರ ರಾಸಲೀಲೆ ವಿಡಿಯೊ ತಡವಾಗಿ ವೈರಲ್‌ ಆಗಿದೆ. ನೀಟ್​ ಆಕಾಂಕ್ಷಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೊಲೀಸರು ಸಾಹಿಲ್‌ನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ (Neet Teacher).

ಕೋಚಿಂಗ್ ಸೆಂಟರ್‌ನ ನಿರ್ದೇಶಕ ಆಶಿಶ್ ಶ್ರೀವಾಸ್ತವ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದು,ಸಾಹಿಲ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಕೋಚಿಂಗ್ ಸೆಂಟರ್‌ನಲ್ಲಿ ಸಾಹಿಲ್ ಅವರ ಹೆಸರಿದ್ದ ಒಂದು ಲಕೋಟೆ ಬಂದಿತ್ತು. ಆ ಮುಚ್ಚಿದ ಲಕೋಟೆಯನ್ನು ಆಶಿಶ್​ ಶ್ರೀವಾಸ್ತವ ಅವರು ತೆರೆದು ನೋಡಿದ್ದಾರೆ. ಒಳಗೆ ಪೆನ್ ಡ್ರೈವ್ ಇರುವುದು ಗಮನಕ್ಕೆ ಬಂದಿದೆ. ನಂತರ ಲ್ಯಾಪ್‌ಟಾಪ್‌ಗೆ ಕನೆಕ್ಟ್​ ಮಾಡಿ ನೋಡಿದಾಗ , ಕೋಚಿಂಗ್ ಆವರಣದಲ್ಲಿ ಸಾಹಿಲ್ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆಯಲ್ಲಿ ತೊಡಗಿರುವ ಸಿಸಿಟಿವಿ ದೃಶ್ಯಾವಳಿ ಕಾಣಿಸಿಕೊಂಡಿದೆ. ಸುಮಾರು ಹತ್ತು ನಿಮಿಷಗಳ ಕಾಲ ಬಾತ್​ರೂಮ್​ನಲ್ಲಿ ವಿದ್ಯಾರ್ಥಿನಿಯೊಂದಿಗೆ  ಅಸಭ್ಯವಾಗಿ ವರ್ತಿಸುತ್ತಿರುವುದು ಅದರಲ್ಲಿ ದಾಖಲಾಗಿದೆ. ಇದರ ವಿಡಿಯೊ ಈಗ ಫುಲ್ ವೈರಲ್​ ಆಗಿದೆ. 

ಈ ವಿಡಿಯೊ ಬಗ್ಗೆ ಹತ್ತು ಹಲವು ರೀತಿಯಲ್ಲಿ ಚರ್ಚೆಗಳು ಶುರುವಾಗಿವೆ. ಇದರಲ್ಲಿ ವಿದ್ಯಾರ್ಥಿನಿ ಯಾವುದೇ ಪ್ರತಿಭಟನೆ ನಡೆಸದೆ ಶಿಕ್ಷಕನ ಜತೆ ಆರಾಮವಾಗಿ ಇರುವುದನ್ನು ನೋಡಿರುವ ಹಲವರು, ಇದರಲ್ಲಿ ವಿದ್ಯಾರ್ಥಿನಿಯ ತಪ್ಪು ಕೂಡ ಇದೆ ಎಂದಿದ್ದಾರೆ. ವಿದ್ಯಾರ್ಥಿನಿ ಸಲೀಸಾಗಿ ಶಿಕ್ಷಕನಿಗೆ ಸಪೋರ್ಟ್​ ಮಾಡುವುದನ್ನು ನೋಡಬಹುದು ಎನ್ನುವುದು ಕೆಲವರ ಅಭಿಪ್ರಾಯ. ಇನ್ನು ಕೆಲವು ನೆಟ್ಟಿಗರು ಇಂಥ ಪ್ರಕರಣಗಳಲ್ಲಿ ಶಿಕ್ಷಕರಿಗಷ್ಟೇ ಶಿಕ್ಷೆಯಾಗುವುದು ತಪ್ಪು ಎಂದು ಹೇಳಿದ್ದಾರೆ.

ಅಣ್ಣಾ ವಿವಿಯಲ್ಲಿ ಪೈಶಾಚಿಕ ಕೃತ್ಯ!

ತಮಿಳುನಾಡಿನ(Tamil Nadu) ಅಣ್ಣಾ ವಿಶ್ವವಿದ್ಯಾನಿಲಯದ (Anna University) ಕ್ಯಾಂಪಸ್‌ನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ (Engineering Student) ಮೇಲೆ ಇಬ್ಬರು ವ್ಯಕ್ತಿಗಳು ಬುಧವಾರ (ಡಿ. 25) ಬೆಳಗ್ಗೆ ಅತ್ಯಾಚಾರವೆಸಗಿದ್ದಾರೆ. ಈ ಸಂಬಂಧ ಕೋತ್ತೂರ್‌ಪುರಂ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 64ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಮುಂಜಾನೆ ಸಮೀಪದ ಚರ್ಚ್‌ನಲ್ಲಿ ಕ್ರಿಸ್‌ಮಸ್ ಪ್ರಾರ್ಥನೆ ಮುಗಿಸಿ ಹಿಂದಿರುಗಿದ ನಂತರ ಯುವತಿ ಹಾಗೂ ಆಕೆಯ ಸ್ನೇಹಿತ ಕ್ಯಾಂಪಸ್‌ನಲ್ಲಿ ಒಟ್ಟಿಗೆ ಕುಳಿತಿದ್ದಾಗ ಈ ಹೀನ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆರೋಪಿಗಳು ಮೊದಲು ಹುಡುಗಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ನಂತರ ಆಕೆಯನ್ನು ಪೊದೆಯೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಆಕೆಯ ಸ್ನೇಹಿತ ಕೂಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Sonu Sood: ಬಾಲಿವುಡ್‌ ನಟ ಸೋನು ಸೂದ್‌ಗೆ ಸಿಎಂ ಸ್ಥಾನ ಆಫರ್? ಭಾರೀ ವೈರಲ್‌ ಆಗ್ತಿದೆ ಈ ವಿಡಿಯೊ