Sunday, 15th December 2024

ಇಂದೋರ್‌ ನಿಂದ ಜಮ್ಮುವಿಗೆ ವಿಮಾನಯಾನ ಪ್ರಾರಂಭ

ನವದೆಹಲಿ: ಪ್ರಾದೇಶಿಕ ವಾಯು ಸಂಪರ್ಕ ಹೆಚ್ಚಿಸಲು, ಇಂಡಿಗೋ ಇಂದೋರ್‌ ನಿಂದ ಜಮ್ಮುವಿಗೆ ತನ್ನ ಹೊಸ ನೇರ ವಿಮಾನ ಯಾನ ಪ್ರಾರಂಭಿಸಿದೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ವರ್ಚುವಲ್ ಆಗಿ ಹೊಸ ಮಾರ್ಗವನ್ನು ಉದ್ಘಾಟಿಸಿದರು.

‘ಮಧ್ಯಪ್ರದೇಶದ ಅತಿದೊಡ್ಡ ನಗರ ಇಂದೋರ್‌ನಿಂದ ಜಮ್ಮುವಿಗೆ ನೇರ ಸಂಪರ್ಕವಿದೆ. ಇದು ಯಾತ್ರಾರ್ಥಿಗಳಿಗೆ ಭಾರತದ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶದ್ವಾರವಾಗಿದೆ’ ಎಂದು ಇಂಡಿಗೋದ ಮುಖ್ಯ ಕಾರ್ಯ ತಂತ್ರ ಮತ್ತು ಕಂದಾಯ ಅಧಿಕಾರಿ ಸಂಜಯ್ ಕುಮಾರ್ ಹೇಳಿದರು.

‘ಹೊಸ ಮಾರ್ಗವು ರಾಜ್ಯದ ಹೆಚ್ಚುತ್ತಿರುವ ಆರ್ಥಿಕ ಮತ್ತು ಪ್ರವಾಸೋದ್ಯಮ ಬೇಡಿಕೆ ಯನ್ನು ಪೂರೈಸುತ್ತದೆ. ಕೈಗೆಟುಕುವ ದರದಲ್ಲಿ ಸುರಕ್ಷಿತ ಪ್ರಯಾಣದ ಅನುಭವ ಒದಗಿಸಲು ನಾವು ಬದ್ಧರಾಗಿದ್ದೇವೆ.

ಭೋಪಾಲ್, ಇಂದೋರ್, ಜಬಲ್ಪುರ ಮತ್ತು ಗ್ವಾಲಿಯರ್ನಂತಹ ತಾಣಗಳಿಂದ ಸಂಪರ್ಕಗಳು ಸೇರಿದಂತೆ ಇಂಡಿಗೊ ಮಧ್ಯ ಪ್ರದೇಶಕ್ಕೆ ಮತ್ತು ಅಲ್ಲಿಂದ ಒಟ್ಟು 632 ಸಾಪ್ತಾಹಿಕ ವಿಮಾನಗಳನ್ನು ನಿರ್ವಹಿಸುತ್ತದೆ.