Sunday, 15th December 2024

2 ಮಸೀದಿಗಳಿಗೆ ರೈಲ್ವೇ ನೋಟಿಸ್ ಜಾರಿ: ತೆರವಿಗೆ 15 ದಿನ ಗಡುವು

ನವದೆಹಲಿ:ಕ್ರಮವಾಗಿ ಕಟ್ಟಿದ ದೆಹಲಿಯ 2 ಮಸೀದಿಗಳಿಗೆ ರೈಲ್ವೇ ನೋಟಿಸ್ ಜಾರಿ ಮಾಡಿದ್ದು, ಮಸೀದಿ ತೆರವಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ದೆಹಲಿಯ ಎರಡು ಪ್ರಮುಖ ಮಸೀದಿಗಳಾದ ಬೆಂಗಾಲಿ ಮಾರ್ಕೆಟ್ ಮಸೀದಿ ಮತ್ತು ಬಾಬರ್ ಷಾ ಟಾಕಿಯಾ ಮಸೀದಿಗಳಿಗೆ 15 ದಿನಗಳಲ್ಲಿ ತೆರವಿಗೆ ಒತ್ತಾಯಿಸಿ ಉತ್ತರ ರೈಲ್ವೇ ಆಡಳಿತ ನೋಟಿಸ್ ನೀಡಿದೆ.

ನಿಗದಿತ ಅವಧಿಯೊಳಗೆ ಒತ್ತುವರಿ ತೆರವು ಮಾಡದಿದ್ದಲ್ಲಿ ಜಮೀನು ವಾಪಸ್ ಪಡೆ ಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನೋಟಿಸ್ ಪಾಲಿಸದಿದ್ದಲ್ಲಿ ಅತಿಕ್ರಮಣ ಭೂಮಿಯನ್ನು ವಾಪಸ್ ಪಡೆಯಲು ರೈಲ್ವೇ ಕಾಯಿದೆಗೆ ಅನುಗುಣವಾಗಿ ರೈಲ್ವೆ ಆಡಳಿತ ಕ್ರಮ ಕೈಗೊಳ್ಳಲಿದೆ.

ನೋಟಿಸ್‌ ಬಳಿಕ ಮಾತನಾಡಿದ ಬಾಬರ್ ಶಾ ಟಕಿಯಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಗಫಾರ್, ಮಸೀದಿಯು ಸುಮಾರು 400 ವರ್ಷಗಳಷ್ಟು ಹಳೆಯದು ಎಂದು ಹೇಳಿದ್ದಾರೆ.