Thursday, 12th December 2024

ಷೇರುಪೇಟೆಯಲ್ಲಿ ಬ್ರೇಕಿಂಗ್‌: ನಿಫ್ಟಿ 15700 ಮಟ್ಟಕ್ಕಿಂತ ಕುಸಿತ

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಶುಕ್ರವಾರ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 182 ಪಾಯಿಂಟ್ಸ್‌ ಕುಸಿದರೆ, ನಿಫ್ಟಿ 15700 ಮಟ್ಟಕ್ಕಿಂತ ಕೆಳಗಿಳಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 182.75 ಪಾಯಿಂಟ್ಸ್‌ ಇಳಿಕೆಗೊಂಡು 52,386.19 ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 38.10 ಪಾಯಿಂಟ್ಸ್ ಕುಸಿದು 15,689.80 ಮುಟ್ಟಿದೆ. ದಿನದ ವಹಿವಾಟು ಅಂತ್ಯಕ್ಕೆ 1693 ಷೇರುಗಳು ಏರಿಕೆಗೊಂಡರೆ, 1252 ಷೇರುಗಳು ಕುಸಿದವು.

ಬಜಾಜಾ ಆಟೋ, ಟಿಸಿಎಸ್, ಹೆಚ್‌ಡಿಎಫ್‌ಸಿ ಬ್ಯಾಂಕ್, ವಿಪ್ರೋ ನಿಫ್ಟಿಯಲ್ಲಿ ನಷ್ಟ ಅನುಭವಿಸಿದೆ. ಟಾಟಾ ಸ್ಟೀಲ್ , ಬಜಾಜ್ ಫಿನ್‌ಸರ್ವ್ , ಅದಾನಿ ಪೋರ್ಟ್ಸ್‌, ಭಾರ್ತಿ ಏರ್‌ಟೆಲ್ ಲಾಭಗೊಂಡಿವೆ.