ಪುಣೆ : ಪುಣೆಯಲ್ಲಿ ಶನಿವಾರ 849 ಮಂದಿ ಕೋವಿಡ್ ಪಾಸಿಟಿವ್ ಪರೀಕ್ಷೆ ನಡೆಸಿದ ನಂತರ, ಜಿಲ್ಲಾಡಳಿತವು ರಾತ್ರಿ ಕರ್ಫ್ಯೂ ಹೇರಿದೆ.
ಮಹಾರಾಷ್ಟ್ರ ಸರ್ಕಾರ ಹೊಸ ಮಾರ್ಗಸೂಚಿ ಜಾರಿಗೊಳಿಸಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸಾರ್ವಜನಿಕ ಸಂಚಾರಕ್ಕೆ ರಾತ್ರಿ ವೇಳೆ ಅವಕಾಶ ನೀಡುವುದಿಲ್ಲ ಎಂದು ಪುಣೆ ವಿಭಾಗೀಯ ಆಯುಕ್ತರು ಭಾನುವಾರ ತಿಳಿಸಿದ್ದಾರೆ.
ಶಾಲಾ ಕಾಲೇಜುಗಳು, ಕೋಚಿಂಗ್ ತರಗತಿಗಳು ಫೆಬ್ರವರಿ 28ರವರೆಗೆ ಬಂದ್ ಆಗಲಿವೆ. ಗ್ರಂಥಾಲಯಗಳು ತೆರೆದಿರುತ್ತವೆ. ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಅತಿಥಿ ಗಳ ಮಿತಿ 200 ಮಾತ್ರವೇ ಆಗಿದೆ. ಹೋಟೆಲ್/ರೆಸ್ಟೋರೆಂಟ್/ಬಾರ್ ರಾತ್ರಿ 11 ಗಂಟೆಯ ವರೆಗೆ ಮಾತ್ರ ತೆರೆದಿರುತ್ತದೆ.
ರಾತ್ರಿ 11 ರ ನಂತರ ಯಾವುದೇ ಕಾರಣವಿಲ್ಲದೆ ಹೊರ ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.