Sunday, 15th December 2024

ನಿತೀಶ್‌ ರಾಜೀನಾಮೆ, ಆರ್.ಸಿ.ಪಿ ಸಿಂಗ್ ಜೆಡಿಯು ನೂತನ ಅಧ್ಯಕ್ಷ

ಪಾಟ್ನಾ: ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ನೂತನ ಅಧ್ಯಕ್ಷರಾಗಿ ಸಂಸದ ಆರ್.ಸಿ.ಪಿ ಸಿಂಗ್ ರನ್ನು ನೇಮಕ ಮಾಡಲಾಗಿದೆ.

ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿತೀಶ್ ಕುಮಾರ್ ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೇ ವೇಳೆ ನೂತನ ಅಧ್ಯಕ್ಷರಾಗಿ ಆರ್.ಸಿ.ಪಿ ಸಿಂಗ್ ಹೆಸರನ್ನು ನಿತೀಶ್ ಸೂಚಿಸಿದ್ದಾರೆ. ಇದಕ್ಕೆ ಸದಸ್ಯರು ಅನುಮೋದಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಜೆಡಿಯುನ 6 ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿ ದ್ದರು. ಈ ಬೆಳವಣಿಗೆ ಬೆನ್ನಲ್ಲೇ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದಿದ್ದು, ನಿತೀಶ್ ಕುಮಾರ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.