ನವದೆಹಲಿ: ಮುಂಬೈನಿಂದ ಹಾಂಕಾಂಗ್‌ಗೆ ತೆರಳುವ ಎಲ್ಲ ಏರ್ ಇಂಡಿಯಾ ವಿಮಾನಗಳನ್ನು ನವೆಂಬರ್ 10ರವರೆಗೂ ನಿರ್ಬಂಧಿಸಲಾಗಿದೆ. ವಾರದ ಆರಂಭದಲ್ಲಿ ವಿಮಾನದಲ್ಲಿ ಪ್ರಯಾಣಿಸಿದ ಕೆಲವು ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಕೊರೊನಾ ವೈರಸ್ ಸೋಂಕು ಹರಡಿದ ನಂತರ ವಿಮಾನ ಸಂಚಾರ ಪುನರಾರಂಭವಾದ ಬಳಿಕ ಏರ್ ಇಂಡಿಯಾ ವಿಮಾನಗಳ ಹಾರಾಟದ ಮೇಲೆ ಹಾಂಕಾಂಗ್ ನಿಷೇಧ ಹೇರುತ್ತಿರುವುದು ಇದು ನಾಲ್ಕನೆಯ ಬಾರಿ.
ದೆಹಲಿ-ಹಾಂಕಾಂಗ್ ವಿಮಾನಗಳನ್ನು ಸೆ.20 ರಿಂದ ಅ.3ರವರೆಗೆ, ಆಗಸ್ಟ್ 18ರಿಂದ ಆಗಸ್ಟ್ 31ರಿಂದ ಮತ್ತು ಅ. 17ರಿಂದ ಅ. 30ರ ವರೆಗೆ ಹಾರಾಟ ನಿರ್ಬಂಧಿಸಲಾಗಿತ್ತು. ಮುಂಬೈನಿಂದ ಹಾಂಕಾಂಗ್‌ಗೆ ಏರ್ ಇಂಡಿಯಾ ವಿಮಾನದಲ್ಲಿ ಈ ವಾರದಲ್ಲಿ ಪ್ರಯಾಣಿಸಿದ ಕೆಲವು ಮಂದಿಯಲ್ಲಿ ಹಾಂಕಾಂಗ್ ವಿಮಾನ ನಿಲ್ದಾಣದಲ್ಲಿ ನಡೆಸಿದ ಕೋವಿಡ್ ತಪಾಸಣೆಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.