ಪಣಜಿ: ಗೋವಾದಲ್ಲಿ ಮೊದಲ ಕರೋನಾ ಲಸಿಕೆಯನ್ನು ಪ್ರತಿಯೊಬ್ಬರು ಪಡೆದ ಬಳಿಕವಷ್ಟೇ ಪ್ರವಾಸಿಗರಿಗೆ ರಾಜ್ಯಕ್ಕೆ ಬರಲು ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಜುಲೈ 30ರೊಳಗೆ ರಾಜ್ಯದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ಮೊದಲ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ನಿಯಮಗಳ ಸಡಿಲಿಕೆ ಮಾಡಲಾಗಿದೆ, ಆದರೆ ಪ್ರವಾಸಿಗರಿಗೆ ಸಧ್ಯಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನೃತ್ಯ ಹಾಗೂ ಇತರೆ ಸಂಗೀತ ಕಾರ್ಯಕ್ರಮಗಳನ್ನು 2022ರ ಮಾರ್ಚ್ ವರೆಗೆ ಮುಂದೂಡಲಾಗಿದೆ. ಹುನಾರ್ ಹಾತ್, ಸನ್ಬರ್ನ್ ಹಾಗೂ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾರ್ಚ್ 2022ರವರೆಗೆ ಅವಕಾಶವಿಲ್ಲ. ಗೋವಾದಲ್ಲಿ ಬುಧವಾರ 310 ಕರೊನಾ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,63,358ಕ್ಕೆ ಏರಿಕೆಯಾಗಿದೆ.
ಇದುವರೆಗೆ 2960 ಮಂದಿ ಮೃತಪಟ್ಟಿದ್ದು ಕಳೆದ 24 ಗಂಟೆಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ.