Saturday, 14th December 2024

ಯಾತ್ರೆ ಅರ್ಜಿ ರದ್ದುಗೊಳಿಸಿದ ಭಾರತದ ಹಜ್ ಸಮಿತಿ

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಭಾರತದ ಹಜ್ ಸಮಿತಿ ಮಂಗಳವಾರ ಹಜ್’ಗೆ ನಿಗದಿಪಡಿಸಿದ್ದ ಎಲ್ಲಾ ಅರ್ಜಿಗಳನ್ನು ರದ್ದುಗೊಳಿಸಿದೆ.

ಸ್ಪಷ್ಟನೆ ನೀಡಿರುವ ಹಜ್ ಸಮಿತಿ, ಸೌದಿ ಸರ್ಕಾರ ಕರೋನಾ ಸಾಂಕ್ರಾಮಿಕ ದಿಂದಾಗಿ ವಿದೇಶಿಗರಿಗೆ ಹಜ್ ಯಾತ್ರೆಗೆ ಅವಕಾಶ ನೀಡಿಲ್ಲ. ಸ್ಥಳೀಯರು, ತನ್ನ ದೇಶದ ಹಿರಿಯ ನಾಗರಿಕರಿಗೆ ಸೀಮಿತ ಸಂಖ್ಯೆಯಲ್ಲಿ ಹಜ್ ಯಾತ್ರೆ ಕೈಗೊಳ್ಳಲು ಮಾತ್ರ ಅವಕಾಶ ನೀಡಿದೆ. ಹೀಗಾಗಿ, ಹಾಲಿ ವರ್ಷದ ಹಜ್ ಅರ್ಜಿಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿದೆ.

ಈ ಹಿಂದೆ ಕರೊನಾ ವೈರಸ್‌ ಸಾಂಕ್ರಾಮಿಕದ ಕಾರಣಕ್ಕೆ ಈ ವರ್ಷದ ಹಜ್ ಯಾತ್ರೆಯನ್ನು ತನ್ನ ದೇಶದ 60 ಸಾವಿರ ಯಾತ್ರಿಕರಿಗೆ ಮಾತ್ರ ಸೀಮಿತಗೊಳಿಸಿ ರುವುದಾಗಿ ಸೌದಿ ಅರೇಬಿಯಾ ಸರ್ಕಾರ ಶನಿವಾರ ಪ್ರಕಟಿಸಿತ್ತು.

ಜುಲೈ ಮಧ್ಯದಲ್ಲಿ ಪ್ರಾರಂಭವಾಗಲಿರುವ ಈ ವರ್ಷದ ಹಜ್ 18ರಿಂದ 65 ವಯಸ್ಸಿನ ಯಾತ್ರಿಕರಿಗೆ ಮಾತ್ರ ಸೀಮಿತವಾಗಿರುತ್ತದೆ. ಅಲ್ಲದೆ, ಯಾತ್ರೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಸಚಿವಾಲಯ ತಿಳಿಸಿದೆ.