Friday, 22nd November 2024

ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ಮಾರ್ಚ್ 31ರ ವರೆಗೆ ನಿಷೇಧ

ನವದೆಹಲಿ: ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರ ನಿಷೇಧವನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದೆ.

ಕೋವಿಡ್-19 ಕಾರಣ ಕಳೆದ ವರ್ಷ ಮಾರ್ಚ್‌ 23ರಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಡಿಜಿಸಿಎ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದು, ನಿಷೇಧ ಮುಂದುವರಿಸಲಾಗಿದೆ ಎಂದಿದೆ.

ಆಯ್ದ ಮಾರ್ಗಗಳಲ್ಲಿ ನಿಗದಿತ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಡಿಜಿಸಿಎ ತಿಳಿಸಿದೆ. ಸರಕು ಸಾಗಣೆ ವಿಮಾನಗಳು ಮತ್ತು ವಿಶೇಷ ವಿಮಾನಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದೂ ಉಲ್ಲೇಖಿಸಲಾಗಿದೆ.

ನಿಷೇಧದ ಹೊರತಾಗಿ ‘ವಂದೇ ಭಾರತ್ ಮಿಷನ್’ ಅಡಿ ವಿಶೇಷ ವಿಮಾನಗಳ ಸಂಚಾರಕ್ಕೆ ಕಳೆದ ವರ್ಷ ಮೇ ತಿಂಗಳಿನಿಂದಲೇ ಅನುಮತಿ ನೀಡಲಾಗುತ್ತಿದೆ. ಆಯ್ದ ದೇಶಗಳಿಗೆ ದ್ವಿಪಕ್ಷೀಯ ವೈಮಾನಿಕ ಒಪ್ಪಂದದ (ಏರ್‌ ಬಬಲ್ ಪ್ಯಾಕ್ಟ್) ಆಧಾರದಲ್ಲಿ ಜುಲೈ ನಿಂದ ವಿಶೇಷ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ.