Friday, 13th December 2024

 ಸಂಸತ್ ಭವನದ ಆವರಣದಲ್ಲಿ ಧರಣಿ, ಸತ್ಯಾಗ್ರಹ ನಡೆಸುವಂತಿಲ್ಲ

#Rajyasabha

ನವದೆಹಲಿ: ರಾಜ್ಯ ಸಭಾ ಸೆಕ್ರೆಟರಿಯೇಟ್ ಹೊರಡಿಸಿರುವ ಹೊಸ ಆದೇಶದಲ್ಲಿ ಸಂಸತ್ ಭವನದ ಆವರಣದಲ್ಲಿ ಇನ್ನೂ ಮುಂದೆ ಮುಷ್ಕರ, ಧರಣಿ, ಸತ್ಯಾಗ್ರಹ ಅಥವಾ ಧಾರ್ಮಿಕ ಸಭೆ, ಸಮಾರಂಭ ನಡೆಸುವಂತಿಲ್ಲ ಎಂದು ಹೇಳಲಾಗಿದೆ.

ಕಲಾಪದ ಸಂದರ್ಭ ಕೆಲವೊಂದು ಪದಗಳ ನಿರ್ಬಂಧ ಕುರಿತು ಪ್ರತಿಪಕ್ಷ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿರುವಂತೆಯೇ ಧರಣಿ ಕುರಿತು ಹೊಸ ಆದೇಶ ಹೊರಬಿದ್ದಿದೆ.

ಜು.18 ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯಸಭಾ ಸೆಕ್ರೆಟರಿ ಜನರಲ್ ಪಿ. ಸಿ ಮೋದಿ ಈ ಆದೇಶ ಹೊರಡಿಸಿದ್ದು, ಸದಸ್ಯರು ಸಂಸತ್ ಭವನದ ಆವರಣವನ್ನು ಯಾವುದೇ ರೀತಿಯ ಪ್ರದರ್ಶನ, ಧರಣಿ, ಮುಷ್ಕರ, ಸತ್ಯಾಗ್ರಹ ಅಥವಾ ಧಾರ್ಮಿಕ ಆಚರಣೆಗೆ ಬಳಸುವಂತಿಲ್ಲ ಎಂದು ಹೇಳಲಾಗಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭೆ ಮುಖ್ಯ ವಿಪ್ ಜೈರಾಂ ರಮೇಶ್ ತಮ್ಮ ಟ್ವೀಟರ್ ಖಾತೆಯಲ್ಲಿ ಈ ಆದೇಶವನ್ನು ಹಂಚಿಕೊಂಡಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.