Friday, 18th October 2024

ಯಾರಪ್ಪನೇ ಬರಲಿ, ನನ್ನನ್ನು ಬಂಧಿಸುವುದು ಕನಸಿನ ಮಾತು: ಬಾಬಾ ರಾಮ್ದೇ‌ವ್‌

ನವದೆಹಲಿ: ಆಲೋಪತಿ ವಿಚಾರದಲ್ಲಿ ಬಾಬಾ ರಾಮ್‌ದೇವ್ ಅವರ ಹೇಳಿಕೆ ವಿವಾದ ಇನ್ನೂ ತಣ್ಣಗಾಗಿಲ್ಲ. ಅಲೋಪಥಿ ಮೂರ್ಖತನದ ಪದ್ಧತಿ ಎಂದಿದ್ದ ಬಾಬಾ ರಾಮದೇವ್​ ವಿರುದ್ಧ ಉತ್ತರಾಖಂಡ್​ನ ಐಎಂಎ ಮಾನಹಾನಿ ನೋಟಿಸ್​ ನೀಡಿದ್ದು 15 ದಿನಗಳಲ್ಲಿ ಕ್ಷಮೆ ಕೇಳದೇ ಹೋದಲ್ಲಿ 1000 ಕೋಟಿ ರೂಪಾಯಿ ಮಾನಹಾನಿ ಪರಿಹಾರ ನೀಡಬೇಕು ಎಂದು ಷರತ್ತು ವಿಧಿಸಿದೆ.‌

ಆದರೆ, ಯೋಗ ಗುರು ಬಾಬಾ ರಾಮ್‌ದೇವ್ ಮಾತ್ರ ನನ್ನ ಬಂಧಿಸೋದು ಅವರ ಅಪ್ಪನ ಕೈಲಿಂದಲೂ ಸಾಧ್ಯವಿಲ್ಲ ಎಂದು ಸವಾಲೆಸೆದಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲೂ #ArrestRamdev (ರಾಮ್​ದೇವ್​ರನ್ನ ಬಂಧಿಸಿ) ಹ್ಯಾಶ್​ಟ್ಯಾಗ್​​ ಟ್ರೆಂಡಿಂಗ್​ನಲ್ಲಿದೆ. ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ವಿರುದ್ಧ ಟ್ರೆಂಡಿಂಗ್​ನಲ್ಲಿರುವ ಅಭಿಯಾನದ ಬಗ್ಗೆ ಈ ರೀತಿ ಪ್ರ ತಿಕ್ರಿಯಿಸಿದ್ದಾರೆ. ​

ಕಳೆದ ಬುಧವಾರ ಪ್ರಧಾನಿ ಮೋದಿಗೆ ಪತ್ರವನ್ನ ಬರೆದಿದ್ದ ಭಾರತೀಯ ವೈದ್ಯಕೀಯ ಸಂಘ ಕೋವಿಡ್​ ಲಸಿಕೆ ಅಭಿಯಾನದ ವಿರುದ್ಧ ಜನರಲ್ಲಿ ತಪ್ಪು ಮಾಹಿತಿ ಹರಡುತ್ತಿರುವ ಬಾಬಾ ರಾಮ್​ದೇವ್​ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿತ್ತು.

ಕೊರೊನಾ ಲಸಿಕೆಯ ಎರಡೂ ಡೋಸ್​ಗಳನ್ನ ಬರೆದ ಬಳಿಕವೂ ದೇಶದಲ್ಲಿ 10000 ವೈದ್ಯರು ಮೃತಪಟ್ಟಿದ್ದಾರೆ ಎಂದು ಬಾಬಾ ರಾಮ್​ದೇವ್​ ಸುಳ್ಳು ಹೇಳಿಕೆ ನೀಡಿದ್ದರು.