Monday, 25th November 2024

ರನ್‌ವೇ ಮೂಲಕ ಮೆರವಣಿಗೆ: ನಾಳೆ ಐದು ಗಂಟೆ ವಿಮಾನ ಸೇವೆ ಸ್ಥಗಿತ

ತಿರುವನಂತಪುರಂ: ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಐದು ಗಂಟೆಗಳ ಕಾಲ ವಿಮಾನ ಸೇವೆ ಸ್ಥಗಿತ ಗೊಳ್ಳಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಅಲ್ಪಾಸಿ ಆರಟ್ಟು ಮೆರವಣಿಗೆಗೂ ಮುನ್ನ ನ.1 ರಂದು ಸೇವೆಗಳನ್ನು ಸ್ಥಗಿತಗೊಳಿಸ ಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

”ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಮೂಲಕ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಅಲ್ಪಾಸಿ ಆರಟ್ಟು ಮೆರವಣಿಗೆಗಾಗಿ ಶತಮಾನಗಳ ಹಿಂದಿನ ಆಚರಣೆಯನ್ನು ಸುಗಮವಾಗಿ ಮುಂದುವರಿಸಲು 1ನೇ ನವೆಂಬರ್ 2022 ರಂದು ವಿಮಾನ ಸೇವೆಗಳನ್ನು 5 ಗಂಟೆಗಳವರೆಗೆ ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.

ಶತಮಾನದಷ್ಟು ಹಳೆಯದಾದ ವಿಷ್ಣು ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ಆರಟ್ಟು ಮೆರವಣಿಗೆ ಮಾಡಲಾಗುತ್ತದೆ. ದೇವಾಲಯದ ಉತ್ತರಾಧಿಕಾರಿಗಳಾದ ಮಾಜಿ ತಿರುವಾಂಕೂರು ದೊರೆ ಮಾರ್ತಾಂಡ ವರ್ಮ ಅವರ ಕಾಲದಿಂದಲೂ ಈ ಪದ್ಧತಿಯನ್ನು ನಡೆಸಿಕೊಂಡು ಬರಲಾಗಿದೆ. ಅಂದಿನಿಂದ 1,000 ವರ್ಷಗಳಿಗೂ ಹೆಚ್ಚು ಕಾಲ ಈ ಸಂಪ್ರದಾಯವನ್ನು ಮುಂದು ವರೆಸಿಕೊಂಡು ಬರಲಾಗಿದೆ.

ವಿಮಾನ ನಿಲ್ದಾಣ ಪ್ರತಿ ವರ್ಷ ಸಾಂಪ್ರದಾಯಿಕ ಆರಾಟ್ಟು ಮೆರವಣಿಗೆಯ ಸಮಯದಲ್ಲಿ ತನ್ನ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸುತ್ತದೆ.