Thursday, 21st November 2024

ಹಣ ಕೊಟ್ಟರೂ ಟ್ಯಾಕರ್ ನೀರು ಕೂಡ ಸಿಗ್ತಿಲ್ಲ, ಸರ್ಕಾರ ಜನರ ಸಮಸ್ಯೆಗಳಿಗೆ ಪರಿಹಾರ ಕೊಡ್ತಿಲ್ಲ

ವದೆಹಲಿ: ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಕರ್ನಾಟಕದ ರಾಜಧಾನಿ ಬೆಂಗಳೂರು (Bengaluru) ಕೂಡ ನೀರಿನ ಸಮಸ್ಯೆಯನ್ನು ಈ ಬಾರಿ ಎದುರಿಸಿತ್ತು. ಈಗ ದೆಹಲಿ ಈ ಸಾಲಿಗೆ ಸೇರ್ಪಡೆಯಾಗಿದೆ.

ನೀರಿನ ಅಭಾವವನ್ನು ಕಡಿಮೆ ಮಾಡಲು ಅಲ್ಲಿನ ಸರ್ಕಾರ ಮತ್ತು ಜನರು ಹಲವು ಹೊಸ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಹಣ ಕೊಟ್ಟರೂ ಟ್ಯಾಕರ್ ನೀರು ಕೂಡ ಸಿಗ್ತಿಲ್ಲ. ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಜನರ ಸಮಸ್ಯೆಗಳಿಗೆ ಪರಿಹಾರ ಕೊಡ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದೆಹಲಿ ಸರ್ಕಾರ ನೀರು ಪೋಲು ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅನಗತ್ಯವಾಗಿ ನೀರಿ ಖರ್ಚು ಮಾಡಿದರೆ 2 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಆದೇಶ ಹೊರಡಿಸಿದೆ.

ನೀರನ್ನು ವ್ಯರ್ಥ ಮಾಡುವವರಿಗೆ 2 ರೂಪಾಯಿ ಸಾವಿರ ದಂಡ ವಿಧಿಸಲಾಗುವುದು ಎಂದು ದೆಹಲಿ ಸಚಿವೆ ಅತಿಶಿ ಮರ್ಲೆನಾ ತಿಳಿಸಿದ್ದಾರೆ. ಅಲ್ಲದೇ ಕಾರುಗಳನ್ನು ತೊಳೆಯುವುದು, ವಾಟರ್​ ಟ್ಯಾಂಕ್​​ಗಳು ನೀರಿನ ಟ್ಯಾಂಕ ಕರ್‌ಗಳನ್ನು ತುಂಬಿಸುವುದು, ನಿರ್ಮಾಣ ಮತ್ತು ವಾಣಿಜ್ಯ ಉದ್ದೇಶಗಳಿಗೆ ನೀರನ್ನು ಬಳಸುವುದು ಮುಂತಾದ ಕ್ರಮಗಳ ಬಗ್ಗೆ ಕಟ್ಟುನಿಟ್ಟಾಗಿ ಇರುವಂತೆ ಅಧಿಕಾರಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಲಾಗಿದೆ.

ನೀರಿನ ಕೊರತೆ ಕುರಿತಂತೆ ಆಕ್ರೋಶ ಹೊರ ಹಾಕಿರುವ ಸಾರ್ವಜನಿಕರು,ನಿತ್ಯ ಟ್ಯಾಂಕರ್ ನೀರು ಅವಲಂಬಿಸಿದ್ದು, ಅವು ಕೂಡ ಸಿಗ್ತಿಲ್ಲ. ಈಗಾಗಿ ಕ್ಯಾನ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದೇವೆ ಎಂದು ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ನೀರಿನ ಕೊರತೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವೆ, ಒಂದು ಅಥವಾ ಎರಡು ದಿನಗಳಲ್ಲಿ ಹರಿಯಾಣದಿಂದ ನೀರು ಬಿಡದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ದೆಹಲಿ ಜನರಿಗೆ ಅಗತ್ಯವಿರುವ ನೀರು ಪಡೆಯಲು ನೇರೆ ರಾಜ್ಯಗಳನ್ನೇ ಅವಲಂಭಿಸಿದೆ. ಯಮುನಾ, ಗಂಗಾ, ರವಿ, ಬಿಯಾಸ್ ಹಾಗೂ ಅಂತರ್​​ ಜಲದಿಂದ ಶೇಕಡಾ 95 ನೀರನ್ನು ದೆಹಲಿ ಪಡೆದುಕೊಳ್ಳುತ್ತದೆ.