Friday, 22nd November 2024

NPS Vatsalya Scheme: ವರ್ಷಕ್ಕೆ 10,000 ರೂ. ಹೂಡಿಕೆ ಮಾಡಿದರೆ ಸಾಕು, ನಿಮ್ಮ ಮಕ್ಕಳಾಗುತ್ತಾರೆ ಕೋಟ್ಯಧಿಪತಿ!

NPS Vatsalya Scheme

ಮಕ್ಕಳ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆಗೆ (NPS Vatsalya Scheme) ಬುಧವಾರ ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಚಾಲನೆ ನೀಡಿದರು. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಈ ಯೋಜನೆಯನ್ನು ನಿರ್ವಹಣೆ ಮಾಡಲಿದೆ.

ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಲ್ಲಿ ಪೋಷಕರು ಈ ಖಾತೆಯನ್ನು ತೆರೆಯಬಹುದು. ಈ ಮೂಲಕ ಮಕ್ಕಳ ನಿವೃತ್ತಿಗಾಗಿ ಹಣವನ್ನು ಹೂಡಿಕೆ ಮಾಡಬಹುದು. ಖಾತೆಯನ್ನು ಅಪ್ರಾಪ್ತರ ಹೆಸರಿನಲ್ಲಿ ತೆರೆಯಲಾಗುತ್ತದೆ ಮತ್ತು ಪೋಷಕರು ಇದನ್ನು ನಿರ್ವಹಿಸುತ್ತಾರೆ.

ಯಾರು ಅರ್ಹರು?

ಎನ್‌ಪಿಎಸ್ ವಾತ್ಸಲ್ಯ ಯೋಜನೆಗೆ ಎಲ್ಲಾ ಅಪ್ರಾಪ್ತ ವಯಸ್ಕರು ಅರ್ಹರಾಗಿರುತ್ತಾರೆ. ಈ ಖಾತೆಯನ್ನು ತೆರೆಯಲು ಕನಿಷ್ಠ 1,000 ಆರಂಭಿಕ ಹೂಡಿಕೆಯನ್ನು ಮಾಡಬೇಕು.

ಖಾತೆ ತೆರೆಯುವುದು ಹೇಗೆ?

ಪೋಷಕರು ಬ್ಯಾಂಕ್‌, ಪೋಸ್ಟ್ ಆಫೀಸ್‌ ಮತ್ತು ಪಿಂಚಣಿ ನಿಧಿಗಳಂತಹ ನೋಂದಾಯಿತ ಸಂಸ್ಥೆಗಳಲ್ಲಿ ಆನ್‌ಲೈನ್ ಅಥವಾ ವೈಯಕ್ತಿಕವಾಗಿ ಖಾತೆಯನ್ನು ತೆರೆಯಬಹುದು. ಎನ್ ಪಿಎಸ್ ಟ್ರಸ್ಟ್‌ನ ಇ ಎನ್ ಪಿಎಸ್ ಪ್ಲಾಟ್‌ಫಾರ್ಮ್ ಮೂಲಕವೂ ಖಾತೆ ತೆರೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಈ ಯೋಜನೆ ಜಾರಿಗೊಳಿಸಲು ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್‌ಗಳು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಪಾಲುದಾರಿಕೆ ಪಡೆದಿದೆ.

NPS Vatsalya Scheme

ಖಾತೆ ಪರಿವರ್ತನೆ ಯಾವಾಗ?

ಮಗುವಿಗೆ 18 ವರ್ಷ ತುಂಬಿದಾಗ ಎನ್ ಪಿ ಎಸ್ ವಾತ್ಸಲ್ಯ ಖಾತೆ ಎನ್ ಪಿ ಎಸ್ ಖಾತೆಯಾಗಿ ಪರಿವರ್ತನೆಯಾಗುತ್ತದೆ. ಇದು ಸ್ವಯಂಚಾಲಿತವಾಗಿ ನಡೆಯುತ್ತದೆ. ಇದು ಸ್ವಯಂ ಆಯ್ಕೆ ಮತ್ತು ಸಕ್ರಿಯ ಆಯ್ಕೆ ಸೇರಿದಂತೆ ಎಲ್ಲಾ ಹೂಡಿಕೆ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸುತ್ತದೆ.

ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲೇ ಉಳಿತಾಯವನ್ನು ಉತ್ತೇಜಿಸುವ ಮೂಲಕ ಎನ್ ಪಿ ಎಸ್ ವಾತ್ಸಲ್ಯ ಯೋಜನೆ ಯುವಜನರಿಗೆ ಸದೃಢವಾದ ಆರ್ಥಿಕ ಅಡಿಪಾಯವನ್ನು ಹಾಕಿಕೊಡುತ್ತದೆ. ಇದು ಶಿಸ್ತುಬದ್ಧ ಉಳಿತಾಯ ಮತ್ತು ಚಿಕ್ಕ ವಯಸ್ಸಿನಿಂದಲೇ ಆರ್ಥಿಕ ಜವಾಬ್ದಾರಿಯನ್ನು ಪೋಷಿಸುತ್ತದೆ ಎನ್ನುತ್ತಾರೆ ಟಾಟಾ ಪಿಂಚಣಿ ನಿರ್ವಹಣೆಯ ಸಿಇಒ ಕುರಿಯನ್ ಜೋಸ್.

ಎಷ್ಟು ಉಳಿತಾಯದಿಂದ ಎಷ್ಟು ಆದಾಯ?

ಮಕ್ಕಳ 18 ವರ್ಷಕ್ಕೆ ತಲಾ 10,000 ವಾರ್ಷಿಕ ಕೊಡುಗೆ ನೀಡಿದರೆ ಅವಧಿಯ ಅಂತ್ಯದ ವೇಳೆಗೆ ಶೇ. 10ರಷ್ಟು ಆದಾಯದ ನಿರೀಕ್ಷಿತ ದರದಲ್ಲಿ ಹೂಡಿಕೆಯು ಅಂದಾಜು 5 ಲಕ್ಷ ರೂ. ವರೆಗೆ ಬೆಳೆಯುವ ನಿರೀಕ್ಷೆ ಇದೆ. ಹೂಡಿಕೆದಾರರು 60 ವರ್ಷ ವಯಸ್ಸನ್ನು ತಲುಪುವವರೆಗೆ ಹೂಡಿಕೆ ಮುಂದುವರಿಸಿದರೆ ಇದು ಸುಮಾರು 2.75 ಕೋಟಿ ರೂ. ತಲುಪಬಹುದು.

PF Withdrawal Limit: ಪಿಎಫ್‌ ಖಾತೆದಾರರಿಗೆ ಗುಡ್‌ನ್ಯೂಸ್‌; ವಿತ್‌ಡ್ರಾ ಮಿತಿ 1 ಲಕ್ಷ ರೂ.ಗೆ ಏರಿಕೆ

ಆದಾಯವು ಸರಾಸರಿ ಶೇ. 11.59ಕ್ಕೆ ಸುಧಾರಿಸಿದರೆ ಈಕ್ವಿಟಿಯಲ್ಲಿ ಶೇ. 50, ಕಾರ್ಪೊರೇಟ್ ಸಾಲದಲ್ಲಿ ಶೇ. 30 ಮತ್ತು ಸರ್ಕಾರಿ ಭದ್ರತೆಗಳಲ್ಲಿ ಶೇ. 20 ವಿಶಿಷ್ಟ ಎನ್ ಪಿಎಸ್ ಹಂಚಿಕೆಯ ಆಧಾರದ ಮೇಲೆ ನಿರೀಕ್ಷಿತ ಮೊತ್ತವು ಸುಮಾರು 5.97 ಕೋಟಿ ರೂ. ಗೆ ಏರಿಕೆಯಾಗಬಹುದು. ಇದಲ್ಲದೆ ಶೇ. 12.86 ಹೆಚ್ಚಿನ ಸರಾಸರಿ ಆದಾಯದೊಂದಿಗೆ ಒಟ್ಟು ಮೊತ್ತ 11.05 ಕೋಟಿ ರೂ. ತಲುಪಬಹುದು. ಆದರೆ ಈ ಅಂಕಿಅಂಶಗಳು ಆಯಾ ಸನ್ನಿವೇಶಕ್ಕೆ ತಕ್ಕಂತೆ ಬದಲಾಗಬಹುದು ಎನ್ನುತ್ತಾರೆ ತಜ್ಞರು.