Monday, 6th January 2025

Obscene Video: ತರಗತಿಯಲ್ಲೇ ಕುಳಿತು ಅಶ್ಲೀಲ ವಿಡಿಯೊ ವೀಕ್ಷಿಸಿದ ಮಾನಗೆಟ್ಟ ಶಿಕ್ಷಕ; ನೋಡಿ ನಕ್ಕ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿತ!

ಲಖನೌ: ಉತ್ತರ ಪ್ರದೇಶದ(Uttar Pradesh) ಝಾನ್ಸಿಯಲ್ಲಿ ಶಿಕ್ಷಕನೊಬ್ಬ ತರಗತಿಯಲ್ಲಿ ಅಶ್ಲೀಲ ಚಿತ್ರ(Obscene Video) ನೋಡಿ ವಿದ್ಯಾರ್ಥಿಗೆ ಸಿಕ್ಕಿ ಬಿದ್ದಿದ್ದಾನೆ. ಅಶ್ಲೀಲ ವಿಡಿಯೊ ನೋಡುತ್ತಿದ್ದ ಶಿಕ್ಷಕನನ್ನು ಎಂಟು ವರ್ಷದ ವಿದ್ಯಾರ್ಥಿಯೊಬ್ಬ ನೋಡಿ ನಕ್ಕಿದ್ದು, ಇದರಿಂದ ಕೋಪಗೊಂಡ ಶಿಕ್ಷಕ ವಿದ್ಯಾರ್ಥಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಶನಿವಾರ(ಡಿ.28) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತರಗತಿಯಲ್ಲಿ ಅಶ್ಲೀಲ ವಿಡಿಯೊವನ್ನು ನೋಡುತ್ತಿದ್ದ ಶಿಕ್ಷಕ ಕುಲದೀಪ್ ಯಾದವ್ ನನ್ನು ನೋಡಿ ವಿದ್ಯಾರ್ಥಿ ಮತ್ತು ಆತನ ಸಹಪಾಠಿಗಳು ಜೋರಾಗಿ ನಕ್ಕಿರುವುದು ವರದಿಯಾಗಿದೆ. ಸಿಕ್ಕಿಬಿದ್ದ ಭಯದಲ್ಲಿ ಮತ್ತು ಕೋಪದಲ್ಲಿ ಶಿಕ್ಷಕ ಬಾಲಕನ ಕೂದಲನ್ನು ಹಿಡಿದು ಗೋಡೆಗೆ ತಲೆಯನ್ನು ಹೊಡೆಸಿದ್ದಾನೆ ಎನ್ನಲಾಗಿದೆ. ಶಿಕ್ಷಕನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಯ ತಂದೆ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು, “ಶಿಕ್ಷಕ ಕುಲದೀಪ್ ಯಾದವ್ ತರಗತಿಯಲ್ಲಿ ತನ್ನ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೊವನ್ನು ವೀಕ್ಷಿಸುತ್ತಿದ್ದನು. ಆಗ ವಿದ್ಯಾರ್ಥಿಗಳೆಲ್ಲರೂ ಶಿಕ್ಷಕನನ್ನು ನೋಡಿ ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಜೋರಾಗಿ ನಗಲು ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿಗಳು ನಕ್ಕಿದ್ದರಿಂದ ಕೋಪಗೊಂಡ ಶಿಕ್ಷಕ, ನನ್ನ ಮಗನನ್ನು ನಿಂದಿಸಿ ಅಮಾನುಷವಾಗಿ ಥಳಿಸಿದ್ದಾರೆ. ಅವರು ನನ್ನ ಮಗನ ಕೂದಲನ್ನು ಹಿಡಿದು ಗೋಡೆಗೆ ಹೊಡೆಸಿದ್ದಾರೆ. ಬೆತ್ತದಲ್ಲೂ ಹೊಡೆದಿದ್ದಾರೆ. ನನ್ನ ಮಗನಿಗೆ ಕಿವಿ ಸೇರಿದಂತೆ ಹಲವು ಕಡೆ ಗಾಯಗಳಾಗಿವೆ. ನಾನು ಶಿಕ್ಷಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇನೆ” ಎಂದು ಹೇಳಿದ್ದಾರೆ.

ಪ್ರಕರಣ ದಾಖಲಾಗಿದ್ದು, ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗೋಪಿನಾಥ್ ಸೋನಿ ತಿಳಿಸಿದ್ದಾರೆ. “ನಾವು ಶಿಕ್ಷಕನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡಿದ್ದೇವೆ” ಎಂದು ಸೋನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಯಾಲಜಿ ಶಿಕ್ಷಕನ ಸರಸ ಸಲ್ಲಾಪ;‌ ಪೆನ್‌ಡ್ರೈವ್ ವಿಡಿಯೊ ಫುಲ್‌ ವೈರಲ್!

ಉತ್ತರ ಪ್ರದೇಶದ(Uttar Pradesh) ಕಾನ್ಪುರದ (Kanpura) ಕಾಕಡಿಯೊದಲ್ಲಿ ಐ ಆ್ಯಂಡ್​ ಐ ಕೋಚಿಂಗ್‌ ಕ್ಲಾಸ್‌ನಲ್ಲಿ ಜೀವಶಾಸ್ತ್ರ(Biology) ವಿಷಯ ಬೋಧಿಸುತ್ತಿದ್ದ ಸಾಹಿಲ್ ಎಂಬ ಶಿಕ್ಷಕ ಮಾಡಬಾರದ ಕೆಲಸ ಮಾಡಿ ಸಿಕ್ಕಿ ಹಾಕಿಕೊಂಡಿದ್ದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಆತ ಕೋಚಿಂಗ್‌ ಕ್ಲಾಸ್‌ ಆವರಣದಲ್ಲಿ ತನ್ನ ವಿದ್ಯಾರ್ಥಿನಿಯೊಂದಿಗೆ ಸರಸ ಸಲ್ಲಾಪ ನಡೆಸಿದ್ದು, ಇದೀಗ ಇಬ್ಬರ ರಾಸಲೀಲೆ ವಿಡಿಯೊ ತಡವಾಗಿ ವೈರಲ್‌ ಆಗಿದೆ. ನೀಟ್​ ಆಕಾಂಕ್ಷಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೊಲೀಸರು ಸಾಹಿಲ್‌ನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋಚಿಂಗ್ ಸೆಂಟರ್‌ನ ನಿರ್ದೇಶಕ ಆಶಿಶ್ ಶ್ರೀವಾಸ್ತವ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದು, ಸಾಹಿಲ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಕೋಚಿಂಗ್ ಸೆಂಟರ್‌ನಲ್ಲಿ ಸಾಹಿಲ್ ಅವರ ಹೆಸರಿದ್ದ ಒಂದು ಲಕೋಟೆ ಬಂದಿತ್ತು. ಆ ಮುಚ್ಚಿದ ಲಕೋಟೆಯನ್ನು ಆಶಿಶ್​ ಶ್ರೀವಾಸ್ತವ ಅವರು ತೆರೆದು ನೋಡಿದ್ದಾರೆ. ಒಳಗೆ ಪೆನ್ ಡ್ರೈವ್ ಇರುವುದು ಗಮನಕ್ಕೆ ಬಂದಿದೆ. ನಂತರ ಲ್ಯಾಪ್‌ಟಾಪ್‌ಗೆ ಕನೆಕ್ಟ್​ ಮಾಡಿ ನೋಡಿದಾಗ , ಕೋಚಿಂಗ್ ಆವರಣದಲ್ಲಿ ಸಾಹಿಲ್ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆಯಲ್ಲಿ ತೊಡಗಿರುವ ಸಿಸಿಟಿವಿ ದೃಶ್ಯಾವಳಿ ಕಾಣಿಸಿಕೊಂಡಿದೆ. ಸುಮಾರು ಹತ್ತು ನಿಮಿಷಗಳ ಕಾಲ ಬಾತ್​ರೂಮ್​ನಲ್ಲಿ ವಿದ್ಯಾರ್ಥಿನಿಯೊಂದಿಗೆ  ಅಸಭ್ಯವಾಗಿ ವರ್ತಿಸುತ್ತಿರುವುದು ಅದರಲ್ಲಿ ದಾಖಲಾಗಿದೆ. ಇದರ ವಿಡಿಯೊ ಈಗ ಫುಲ್ ವೈರಲ್​ ಆಗಿದೆ. 

ಈ ಸುದ್ದಿಯನ್ನೂ ಓದಿ:Taliban Bans Windows: ಹೆಣ್ಣು ಮಕ್ಕಳಿರುವ ಮನೆಯಲ್ಲಿ ಕಿಟಕಿಯೂ ಇರುವಂತಿಲ್ಲ; ತಾಲಿಬಾನ್‌ನ ವಿಚಿತ್ರ ಕಾನೂನು!