Sunday, 15th December 2024

ಹಳೆಯ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ: 200 ಅಂಗಡಿಗಳು ಸುಟ್ಟು ಭಸ್ಮ

ಟಾನಗರ : ಅರುಣಾಚಲದ ರಾಜಧಾನಿ ಇಟಾನಗರ ಸಮೀಪದ ಹಳೆಯ ಮಾರುಕಟ್ಟೆಯಲ್ಲಿ ಮಂಗಳವಾರ ಭಾರಿ ಅಗ್ನಿ ಅವಘಡ ಸಂಭವಿಸಿ ಸುಮಾರು 200 ಅಂಗಡಿಗಳು ಸುಟ್ಟು ಭಸ್ಮವಾಗಿವೆ.

ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಇದು ರಾಜ್ಯದ ಅತ್ಯಂತ ಹಳೆಯ ಮಾರುಕಟ್ಟೆಯಾಗಿದೆ ಎಂದು ಹೇಳಲಾಗಿದೆ.

ದೀಪಾವಳಿ ಆಚರಣೆಗಾಗಿ ಹಚ್ಚಿದ ಪಟಾಕಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ನಡೆದ ಕೂಡಲೆ ಅಗ್ನಿಶಾಮಕ ದಳದವರು ಕಾರ್ಯಪ್ರವೃತ್ತರಾದರು, ಆದರೆ ಅಂಗಡಿಗಳು ಬಿದಿರು ಮತ್ತು ಮರದಿಂದ ಮಾಡಲ್ಪಟ್ಟಿದ್ದ ರಿಂದ ಬೆಂಕಿ ವೇಗವಾಗಿ ಹರಡಿತು ಎಂದು ಹೇಳಲಾಗಿದೆ.

ಇಟಾನಗರದಿಂದ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿಯನ್ನು ನಂದಿಸಲು ಸಿಬಂದಿಗಳು ಗಂಟೆಗಳ ಕಾಲ ಹರಸಾಹಸಪಡಬೇಕಾಯಿತು. ಬೆಂಕಿ ಅವಘಡದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾ ಗಿದೆ.