ನಾವು ವಾಸಿಸುತ್ತಿರುವ ಈ ಭೂಮಿ (Earth) ಕೋಟ್ಯಂತರ ವರ್ಷಗಳಿಂದ ಅಸ್ತಿತ್ವದಲ್ಲಿದೆ. ವಿಜ್ಞಾನಿಗಳ ಪ್ರಕಾರ ಈ ಭೂಮಿಯಲ್ಲಿ ಜೀವರಾಶಿಗಳು ಹುಟ್ಟಲು ಅದೆಷ್ಟೋ ಲಕ್ಷ ವರ್ಷಗಳೇ ಬೇಕಾದವು ಮತ್ತು ಅಲ್ಲಿಂದ ಇಲ್ಲಿಯವರೆಗೆ ಮಾನವ ಸಹಿತ ಹಲವಾರು ಜೀವ ರಾಶಿಗಳು ಈ ಭೂಮಿಯಲ್ಲಿ ವಿಕಸಿತಗೊಂಡು ಬಂದಿವೆ. ಮತ್ತು ಅದೆಷ್ಟೋ ಕಾಲಘಟ್ಟಗಳಲ್ಲಿ ಈ ಭೂಮಿಯ ಮೇಲಿನ ಜೀವರಾಶಿಗಳ ಇತಿಹಾಸವೂ ಸಹ ಬದಲಾಗುತ್ತಾ ಬಂದಿದೆ. ಪ್ರಾಣಿ ಮತ್ತು ಹಕ್ಕಿಗಳ ಜೊತೆಜೊತೆಯಲ್ಲಿ ಮನುಕುಲವೂ ವಿಕಸಿತಗೊಂಡು ಬಂದಿದೆ. ಮತ್ತು ನಮ್ಮ ಪ್ರಾಚೀನ ನಾಗರೀಕತೆಗಳೆಲ್ಲವೂ (Ancient Civilizations) ವಿವಿಧ ನದಿ ದಂಡೆಗಳಲ್ಲೇ ವಿಕಸಿತಗೊಂಡವು ಎಂಬುದಕ್ಕೆ ಯಾವುದೇ ಸಂಶಯವಿಲ್ಲ. ಈ ಪ್ರಪಂಚದ ಅತೀ ಹಳೆಯ ದೇಶ ಯಾವುದು (Oldest Country) ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ನಿಮ್ಮ ಆ ಪ್ರಶ್ನೆಗೆ ಉತ್ತರಿಸುವ ಪ್ರಯತ್ನವನ್ನು ನಾವಿಲ್ಲಿ ಮಾಡಿದ್ದೇವೆ.
ಈ ವಿಕಸನದ ಕಾಲಘಟ್ಟದಲ್ಲಿ ಬುಡಕಟ್ಟುಗಳು, ಜಿಲ್ಲೆಗಳು ಮತ್ತು ದೇಶಗಳು ರೂಪು ತಳೆಯುತ್ತಾ ಹೋದವು. ಸದ್ಯಕ್ಕೆ ನಮ್ಮ ಪ್ರಪಂಚದಲ್ಲಿ 193 ದೇಶಗಳಿವೆ. ಇದು ವಿಶ್ವಸಂಸ್ಥೆಯಲ್ಲಿ (United Nations) ನೋಂದಾಯಿತ ದೇಶಗಳ ಸಂಖ್ಯೆಯಾಗಿದೆ. ಈ ಪ್ರಪಂಚದ ಇತಿಹಾಸವನ್ನು ನಾವು ಓದುತ್ತಾ ಹೋದಂತೆ, ನಾವು ಅದರೊಂದಿಗೆ ಹೊಂದಿಕೊಂಡಂತೆ ಪ್ರಾಚೀನ ನಾಗರೀಕತೆಗಳು ಮತ್ತು ದೇಶಗಳ ಬಗ್ಗೆಯೂ ಓದುತ್ತೇವೆ.
ಹಾಗಾದರೆ ಈಗ ನಿಮಗೊಂದು ಕುತೂಹಲ ಬರಬಹುದು! ಈ ಪ್ರಪಂಚದ ಅತೀ ಹಳೆಯ ದೇಶ ಯಾವುದು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ನಿಮ್ಮ ಆ ಪ್ರಶ್ನೆಗೆ ಉತ್ತರಿಸುವ ಪ್ರಯತ್ನವನ್ನು ನಾವಿಲ್ಲಿ ಮಾಡಿದ್ದೇವೆ.
ಇತ್ತೀಚೆಗೆ ವಿಶ್ವ ಜನಸಂಖ್ಯಾ ಪರಿಶೀಲನಾ ವರದಿ (World Population Review) ಬಿಡುಗಡೆಗೊಂಡಿದೆ. ಈ ವರದಿಯಲ್ಲಿ ಇರಾನ್ ಗೆ (Iran) ವಿಶ್ವದ ಹಳೆಯ ದೇಶ ಎಂಬ ಪಟ್ಟವನ್ನು ನೀಡಲಾಗಿದೆ. ಇರಾಕ್, ಅರ್ಬೆಝೈನ್, ಅರ್ಮೇನಿಯಾ, ಕ್ಯಾಸ್ಪಿಯನ್ ಸಮುದ್ರ, ತುರ್ಕ ಮೆನಿಸ್ತಾನ್, ಅಫ್ಘಾನಿಸ್ತಾನ, ಪಾಕಿಸ್ಥಾನ ಗಳನ್ನು ತನ್ನ ಗಡಿಭಾಗವಾಗಿ ಹೊಂದಿರುವ ಇರಾನ್ ದೇಶವಾಗಿರುವ ಇರಾನ್ ಈ ಭೂಮಿಯ ಮೇಲೆ ಒಂದು ಲಕ್ಷ ವರ್ಷಗಳಿಂದ ಇದೆ ಎಂದು ಈ ವರದಿ ಅಂದಾಜಿಸಿದೆ.
ಈ ಸುದ್ದಿಯನ್ನೂ ಓದಿ: Vinay Guruji: ಡಿ.ಕೆ. ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿ: ವಿನಯ್ ಗುರೂಜಿ ಭವಿಷ್ಯ
ಹಾಗಾದ್ರೆ ಪ್ರಾಚೀನ ಈಜಿಪ್ಟ್ ಗೆ ಎಷ್ಟು ವರ್ಷಗಳಾಯ್ತು?
ಪ್ರಾಚೀನ ಈಜಿಪ್ಟ್ ನಾಗರಿಕತೆ ಮತ್ತು ಅಲ್ಲಿನ ಪಿರಮಿಡ್ ಗಳ ಬಗ್ಗೆ ನಾವು ಇತಿಹಾಸದಲ್ಲಿ ಓದಿರುತ್ತೇವೆ. ಈ ಈಜಿಪ್ಟ್ ನಾಗರಿಕತೆಯು ನೈಲ್ ನದಿಯ ದಡದಲ್ಲಿ ವಿಕಸಿತಗೊಂಡ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿದೆ. ಇದು ಕ್ರಿಸ್ತಪೂರ್ವ 3150ರಿಂದ ಅಸ್ತಿತ್ವದಲ್ಲಿದೆ.
ಹಾಗಾದರೆ ನಮ್ಮ ದೇಶ ಎಷ್ಟು ಪ್ರಾಚೀನವಾದುದು?
ನಮ್ಮ ದೇಶ ಭಾರತ (India) ಎಷ್ಟು ಪ್ರಾಚೀನವಾದುದು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಈ ವರದಿಯ ಪ್ರಕಾರ ಭಾರತವು ವಿಶ್ವದಲ್ಲೇ ಏಳನೇ ಪ್ರಾಚೀನ ರಾಷ್ಟ್ರವಾಗಿದೆ. ನಮ್ಮ ದೇಶದ ಇತಿಹಾಸವು ಕ್ರಿಸ್ತ ಪೂರ್ವ 2000ನೇ ಇಸವಿಯಲ್ಲಿ ಪ್ರಾರಂಭಗೊಂಡಿತು ಮತ್ತು ನಮ್ಮ ದೇಶ 65 ಸಾವಿರ ವರ್ಷಗಳಷ್ಟು ಹಳೆಯದಾಗಿದೆ.
ಪ್ರಾಚೀನ ರಾಷ್ಟ್ರಗಳ ಪಟ್ಟಿಯಲ್ಲಿ ವಿಯೆಟ್ನಾಂ ಮತ್ತು ಸೂಡಾನ್ ದೇಶಗಳ ಹೆಸರೂ ಇದೆ
ವಿಯೆಟ್ನಾಂ ದೇಶದ ಇತಿಹಾಸ 2700 ವರ್ಷಗಳಷ್ಟು ಹಳೆಯದಾಗಿದೆ. ಇನ್ನು, ಸೂಡಾನ್ ದೇಶಕ್ಕೆ ನೈಲ್ ನದಿಯಷ್ಟೇ ದೀರ್ಘ ಇತಿಹಾಸವಿದೆ. ಈ ಎಲ್ಲಾ ದೇಶಗಳು ಈ ಭೂಮಿಯಲ್ಲಿರುವ ಪ್ರಾಚೀನ ದೇಶಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.